ಸೆನ್ಸೆಕ್ಸ್ ಸಾರ್ವಕಾಲಿಕ ಗರಿಷ್ಠ ಏರಿಕೆ, ಚಿನ್ನ, ಬೆಳ್ಳಿ, ಪೆಟ್ರೋಲ್, ಡೀಸೆಲ್ ದರ ಹೀಗಿದೆ! - ಬೆಳ್ಳಿ ಬೆಲೆ
ಮುಂಬೈ: ಇನ್ಫೋಸಿಸ್, ಐಸಿಐಸಿಐ ಬ್ಯಾಂಕ್, ಟಿಸಿಎಸ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಗಳಿಕೆಯ ಲಾಭದ ನಂತರ ಈಕ್ವಿಟಿ ಬೆಂಚ್‌ಮಾರ್ಕ್ ಸೆನ್ಸೆಕ್ಸ್ 70 ಅಂಕಗಳ ಏರಿಕೆಯೊಂದಿಗೆ ಶುಕ್ರವಾರ ಹೊಸ ದಾಖಲೆಯಲ್ಲಿ ಕೊನೆಗೊಂಡಿದೆ. ತನ್ನ ಜೀವಿತಾವಧಿ ಗರಿಷ್ಠ 46,960.69 ಅಂಕಗಳಿಗೆ ತಲುಪಿತು. ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 19.85 ಅಂಕಗಳ ಏರಿಕೆಯೊಂದಿಗೆ 13,760.55 ಅಂಕಗಳ ಮಟ್ಟದಲ್ಲಿ ವಾರದ ವಹಿವಾಟು ಅಂತ್ಯಗೊಳಿಸಿತು.