ಆಕಸ್ಮಿಕ ಬೆಂಕಿಗೆ ಗ್ರಾಮದ 47 ಮನೆಗಳು ಭಸ್ಮ: ಮಹಿಳೆ ಸಜೀವ ದಹನ! - ಉತ್ತರಪ್ರದೇಶದ ಚಿತ್ರಕೂಟ್
ರಾಜಾಪೂರ್(ಉತ್ತರಪ್ರದೇಶ): ಗುಡಿಸಿಲಿನಲ್ಲಿ ಬೆಂಕಿ ಹೊತ್ತಿಸುತ್ತಿದ್ದ ವೇಳೆ ಜೋರಾಗಿ ಗಾಳಿ ಬೀಸಿದ್ದು, ಅದು ಬೇರೆಡೆ ಹರಡಿದ ಪರಿಣಾಮ ಗ್ರಾಮದ 47 ಮನೆಗಳು ಸುಟ್ಟು ಸಂಪೂರ್ಣವಾಗಿ ಭಸ್ಮವಾಗಿವೆ. ಘಟನೆಯಲ್ಲಿ ಓರ್ವ ಮಹಿಳೆ ಸಜೀವವಾಗಿ ದಹನವಾಗಿದ್ದು, ಉತ್ತರಪ್ರದೇಶದ ಚಿತ್ರಕೂಟ್ನ ರಾಜಾಪೂರ್ದಲ್ಲಿ ಈ ಅವಘಡ ಸಂಭವಿಸಿದೆ.