ಅಮೃತ ಶಿಲೆಯಲ್ಲಿ ಮಾದರಿ ಅಜ್ಮೀರ್ ದರ್ಗಾ ನಿರ್ಮಾಣ! - ರಾಜಸ್ಥಾನದಲ್ಲಿ ನಿರ್ಮಾಣ
ಅಜ್ಮೀರ್ : ಖ್ವಾಜಾ ಗರಿಬ್ ನವಾಜ್ ಕಟ್ಟಿಸಿದ ಅಜ್ಮೀರ್ ದರ್ಗಾದ ಮಾಡೆಲ್ನ ರಾಜಸ್ಥಾನದಲ್ಲಿ ನಿರ್ಮಾಣ ಮಾಡಲಾಗಿದೆ. ಇದು 9 ಅಡಿ ಉದ್ದ, 4 ಅಡಿ ಅಗಲವಿದೆ. ಸುಮಾರು 9 ತಿಂಗಳಲ್ಲಿ ಇದು ರೂಪಗೊಂಡಿದೆ. ಮೊದಲು ಕಾರ್ಡ್ ಬೋರ್ಡ್ನಲ್ಲಿ ಮಾಡಿ ನಂತರ ಅಮೃತ ಶಿಲೆಯಿಂದ ಮಾಡಲಾಗಿದೆ. ಈ ಮಾಡೆಲ್ ದರ್ಗಾದಲ್ಲಿ 10 ದ್ವಾರಗಳಿವೆ. ದರ್ಗಾದ ಸಂಪೂರ್ಣ ಚಿತ್ರಣವನ್ನು ಇಲ್ಲಿ ಕಾಣಬಹುದು. ಮನೀಶ್ ಪಟೇಲ್ ಎಂಬುವರು ಇದನ್ನ ಮಾಡಿದ್ದು, ಈವರೆಗೆ ಸುಮಾರು 9 ಲಕ್ಷ ಜನ ಇದನ್ನ ನೋಡಲು ಭೇಟಿ ನೀಡಿದ್ದಾರೆ.