ಕರ್ನಾಟಕ

karnataka

ETV Bharat / videos

ಗೌರಿ ಗಣೇಶ ಹಬ್ಬದ ಸಂಭ್ರಮ: ಆರೋಗ್ಯಕರ, ರುಚಿಕರವಾದ ಡ್ರೈ ಫ್ರೂಟ್ಸ್ ಮೋದಕ ಮಾಡಿ ಗಣಪನಿಗೆ ಅರ್ಪಿಸಿ! - ETV Bharat Food and Recipe

By

Published : Sep 10, 2021, 5:47 AM IST

ಭಾರತದಲ್ಲಿ ಹಬ್ಬ ಅಂದ ಮೇಲೆ ಅಲ್ಲಿ ಸಿಹಿತಿಂಡಿಗಳು ಇರಲೇ ಬೇಕು. ಇದರ ಜೊತೆಗೆ ಆರೋಗ್ಯಕರವಾದ ಜೀವನವೂ ಅತ್ಯಮೂಲ್ಯ. ಅದರಲ್ಲೂ ಪ್ರಮುಖವಾಗಿ ದೇಶದಲ್ಲಿ ಮಧುಮೇಹವು ನಿರಂತರವಾಗಿ ಏರುತ್ತಿರುವ ಕಾರಣ ಆರೋಗ್ಯಕರ ಆಹಾರದ ಆಯ್ಕೆಯನ್ನು ಆರಿಸಿಕೊಳ್ಳುವುದು ಒಳ್ಳೆಯದು. ಈ ಹಬ್ಬದ ಸಮಯದಲ್ಲಿ ಆರೋಗ್ಯಕರವಾದ ಸಿಹಿ ತಿನಿಸು ಮಾಡುವ ಮಾರ್ಗ ಇಲ್ಲಿದೆ. ಒಣ ಹಣ್ಣುಗಳಾದ ಅಂಜೂರದ ಹಣ್ಣುಗಳು, ಖರ್ಜೂರ ಮತ್ತು ಬಾದಾಮಿ, ಗೋಡಂಬಿಗಳೊಂದಿಗೆ ಅದ್ಭುತ ರುಚಿಯುಳ್ಳ ಮೋದಕ ಮಾಡಿ ಮೋದಕ ಪ್ರಿಯನಿಗೆ ಅರ್ಪಿಸಿ. ಜೊತೆಗೆ ಹಬ್ಬಕ್ಕೆ ಬಂದವರಿಗೂ ನೀಡಿ. ಇನ್ನು ಅಂಜೂರ ಮತ್ತು ಖರ್ಜೂರದಲ್ಲಿ ನೈಸರ್ಗಿಕ ಸಕ್ಕರೆ ಇದೆ ಹಾಗೆ ಗೋಡಂಬಿ ಮತ್ತು ಬಾದಾಮಿಯ ಮಿಶ್ರಣದಲ್ಲಿ ಪೋಷಕಾಂಶಗಳಿದ್ದು, ಇದನ್ನು ನೀವೇ ಮನೆಯಲ್ಲೇ ಮಾಡಿ ತಿನ್ನುವುದರಿಂದ ನಿಮ್ಮ ಆರೋಗ್ಯಕರ ಜೀವನ ಇನ್ನಷ್ಟು ಚೆಂದವಾಗಿರುತ್ತದೆ. ಮತ್ಯಾಕೆ ತಡ ಈ ರೆಸಿಪಿಯನ್ನು ಪ್ರಯತ್ನಿಸಿ...

ABOUT THE AUTHOR

...view details