ಇಲ್ಲಿದೆ ಗಾಂಧೀಜಿಯ ಬೆಳ್ಳಿ ತಟ್ಟೆಯೊಂದರ ಕಥೆ... ಅರೇ ಅದ್ಯಾಕೆ ಬಳಿಸಿದ್ರು! - ಗಾಂಧೀಜಿ 150ನೇ ಜಯಂತಿ
ಮಹಾತ್ಮಾ ಗಾಂಧಿ ಅಮರರಾಗಿ ಹಲವು ದಶಕಗಳೇ ಸಂದಿವೆ. ಆದ್ರೆ, ಮಹಾತ್ಮನ ಹಲವು ನೆನಪುಗಳು ಇಂದು ಕೂಡಾ ನಮ್ಮಲ್ಲಿ ಭದ್ರವಾಗಿವೆ. ಇದಕ್ಕೆ ಪುಷ್ಠಿ ನೀಡುವಂತೆ ಮಧ್ಯಪ್ರದೇಶದ ಚಿಂದ್ವಾರಾ ನಗರದಲ್ಲಿ ಒಂದು ಕುಟುಂಬವಿದೆ. ಆ ಕುಟುಂಬಕ್ಕೆ ಗಾಂಧೀಜಿ ನೀಡಿದ ಬೆಳ್ಳಿ ತಟ್ಟೆಯೊಂದು ಮಹಾತ್ಮನ ನೆನಪು ಹಾಗೂ ಅಮರತ್ವವನ್ನು ಇಂದಿಗೂ ಆ ಕುಟುಂಬದಲ್ಲಿ ಉಳಿಯುವಂತೆ ಮಾಡಿದೆ.