ರಾಜ್ಯಮಟ್ಟದ ಕಬಡ್ಡಿ ಪಂದ್ಯದ ವೇಳೆ ಆಟಗಾರರ ದಾಳಿಗೆ ಸಿಲುಕಿ ಓರ್ವ ಸಾವು - ಧಮ್ತರಿ
ಧಮ್ತರಿ: ಕುರುದ್ ಪೊಲೀಸ್ ಠಾಣೆ ಪ್ರದೇಶದ ಗೊಜಿ ಗ್ರಾಮದಲ್ಲಿ ರಾಜ್ಯಮಟ್ಟದ ಏಕದಿನ ಕಬಡ್ಡಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಕಳೆದ ರಾತ್ರಿ ನಡೆದ ಅಂತಿಮ ಪಂದ್ಯದಲ್ಲಿ ಓರ್ವ ಆಟಗಾರ ಸಾವಿಗೀಡಾಗಿದ್ದಾನೆ. ನರೇಂದ್ರ ಎಂಬ ಆಟಗಾರನಿಗೆ ಆಟದ ವೇಳೆ ಕುತ್ತಿಗೆ ಮುರಿದಿದೆ. ತೀವ್ರವಾಗಿ ಗಾಯಗೊಂಡ ಆತನನ್ನು ತಕ್ಷಣ ಕುರುದ್ ಆಸ್ಪತ್ರೆಗೆ ಸಾಗಿಸಲು ಮುಂದಾದರಾದರೂ ದಾರಿಯಲ್ಲಿ ನರೇಂದ್ರ ಮೃತಪಟ್ಟಿದ್ದಾನೆ.