ಜಾನ್ಸಿನೇ ನನಗೆ ಸ್ಫೂರ್ತಿ ಎಂದ ಗರ್ಲ್ ಹಾರ್ಸ್ ರೈಡರ್! - ಗರ್ಲ್ ಹಾರ್ಸ್ ರೈಡರ್
ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಕುದುರೆ ಏರಿ ಹೊರಟ ಕೇರಳದ ತ್ರಿಶೂರಿನ ಹುಡುಗಿ ತಾನು ಹಾರ್ಸ್ ರೈಡಿಂಗ್ ಕಲಿತ ಕುರಿತು ವಿವರವಾಗಿ ಹೇಳಿದ್ದಾರೆ. ಹೆಣ್ಣುಮಕ್ಕಳು ಕುದುರೆ ಓಡಿಸುವುದು ಕಷ್ಟ. ಜಾನ್ಸಿ ರಾಣಿಯಂತಹವರಿಂದ ಮಾತ್ರ ಅದು ಸಾಧ್ಯ ಎಂದು ಗುರುಗಳು ಹೇಳಿದ್ದರು. ಜಾನ್ಸಿಯನ್ನೇ ಮಾಧರಿಯಾಗಿಟ್ಟುಕೊಂಡ ಕೃಷ್ಣ, ತರಬೇತುದಾರರ ಬಳಿ ಬಂದು ಕುದುರೆ ಸವಾರಿ ಹೇಳಿಕೊಡುವಂತೆ ಕೇಳಿದ್ದೆ. ಆಗ ಅವರು ಪೋಷಕರಿಂದ ಒಂದು ಪತ್ರ ಬರೆಸಿಕೊಂಡು ಬರುವಂತೆ ಹೇಳಿದ್ದರು. ಅಪ್ಪ-ಅಮ್ಮ ಇಬ್ಬರೂ ಧೈರ್ಯವಾಗಿ ಕಲಿ ಮಗಳೇ ಎಂದು ಪತ್ರ ಬರೆದುಕೊಟ್ಟಿದ್ದರು ಎಂದು ಹೇಳಿದರು. ಇನ್ನು ಕೃಷ್ಣಳ ಆಸಕ್ತಿಯನ್ನು ಗುರುತಿಸಿದ ಆಕೆಯ ತಂದೆ ಆರು ತಿಂಗಳ ಒಂದು ಪುಟ್ಟ ಕುದುರೆಯನ್ನು ಖರೀದಿಸಿ ತಂದಿದ್ದರು. ಅದೇ ಕುದುರೆ ಈಗ ಕೃಷ್ಣಳಿಗೆ ಒಳ್ಳೆಯ ಸಂಗಾತಿಯಾಗಿದೆ. ವಾರಕ್ಕೆ ಒಮ್ಮೆ ಶಾಲೆಗೆ ಕುದುರೆ ಮೇಲೇರಿ ಹೋಗುವುದು ಕೃಷ್ಣಳಿಗೆ ಇಷ್ಟವಂತೆ.