ಟಿಡಿಪಿ ಶಾಸಕನ ಬಂಧಿಸಲು ಮನೆ ಗೇಟ್ ಹಾರಿದ ಪೊಲೀಸರು: ವಿಡಿಯೋ - ಟಿಡಿಪಿ ಶಾಸಕ ಕೆ. ಅಚ್ಚನಾಯ್ಡು
ಶ್ರೀಕಾಕುಲಂ(ಆಂಧ್ರಪ್ರದೇಶ): ರಾಜ್ಯ ವಿಮಾ ಯೋಜನೆ (ESI)ಯಲ್ಲಿ ನಡೆದ ಅಕ್ರಮ ವ್ಯವಹಾರದಲ್ಲಿ ಭಾಗಿಯಾದ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಮಾಜಿ ಸಚಿವ, ಟಿಡಿಪಿ ಶಾಸಕ ಕೆ. ಅಚ್ಚನಾಯ್ಡು ಅವರನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಶಾಸಕನನ್ನು ಬಂಧಿಸಲು ಪೊಲೀಸ್ ಸಿಬ್ಬಂದಿ ಅವರ ನಿವಾಸದ ಗೇಟ್ ಹಾರಬೇಕಾಯ್ತು. ಈ ಕುರಿತ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.