ದೆಹಲಿ ವಿಧಾನಸಭೆ ಫೈಟ್... ಅಡ್ವಾಣಿ, ಸೋನಿಯಾ, ಕೇಜ್ರಿ, ಆಲಿಯಾ ಸೇರಿ ಪ್ರಮುಖರಿಂದ ಹಕ್ಕು ಚಲಾವಣೆ - ದೆಹಲಿ ವಿಧಾನಸಭೆ ಚುನಾವಣೆ
ಭಾರೀ ಕುತೂಹಲ ಮೂಡಿಸಿರುವ ದೆಹಲಿ ವಿಧಾನಸಭೆಗೆ ಮತದಾನ ಬಿರುಸಿನಿಂದ ನಡೆಯುತ್ತಿದ್ದು, ಸರತಿ ಸಾಲಿನಲ್ಲಿ ನಿಂತು ಮತದಾರರು ತಮ್ಮ ಹಕ್ಕು ಚಲಾವಣೆ ಮಾಡುತ್ತಿದ್ದಾರೆ. ಇದರ ಮಧ್ಯೆ ವಿವಿಧ ಪಕ್ಷಗಳ ಪ್ರಮುಖ ಮುಖಂಡರು ತಮ್ಮ ಹಕ್ಕು ಚಲಾವಣೆ ಮಾಡಿದ್ರು. ಅದರಲ್ಲಿ ಪ್ರಮುಖವಾಗಿ ಬಿಜೆಪಿ ಹಿರಿಯ ನಾಯಕ ಎಲ್. ಕೆ. ಅಡ್ವಾಣಿ, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ನಟಿ ಆಲಿಯಾ ಭಟ್ ವೋಟಿಂಗ್ ಮಾಡಿ ಗಮನ ಸೆಳೆದರು. ದೇಶದ ಪ್ರಥಮ ಪ್ರಜೆ ರಾಮನಾಥ ಕೋವಿಂದ್, ರಾಹುಲ್ ಗಾಂಧಿ ಸಹ ಹಕ್ಕು ಚಲಾವಣೆ ಮಾಡಿದರು.