ಏರ್ಪೋರ್ಟ್ ಬಳಿ ದಿಕ್ಕೆಟ್ಟು ಓಡಿದ ಕರಡಿ... ಇದರ ಅಸಲಿಯತ್ತು ನೋಡಿ
ಗುಜರಾತ್: ಅಹಮದಾಬಾದ್ನ ಸರ್ದಾರ್ ವಲ್ಲಭಬಾಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ವ್ಯಕ್ತಿವೋರ್ವ ಕರಡಿ ವೇಷ ಧರಿಸಿ ಓಡುತ್ತಿರುವ ದೃಶ್ಯದ ವಿಡಿಯೋವೊಂದು ವೈರಲ್ ಆಗಿದೆ. ಏರ್ಪೋರ್ಟ್ ಬಳಿ ಲಂಗೂರ್ಗಳ ಹಾವಳಿ ಹೆಚ್ಚಾಗಿದ್ದು, ಸಾಮಾನ್ಯವಾಗಿ ಲಂಗೂರ್ಗಳು ಕರಡಿಗಳಿಗೆ ಹೆದರುತ್ತವೆ. ಹೀಗಾಗಿ ನಾವು ನಮ್ಮ ಸಿಬ್ಬಂದಿವೋರ್ವರಿಗೆ ಕರಡಿ ವೇಷ ಹಾಕಿಸಿದ್ದು, ಇದನ್ನು ಕಂಡ ಲಂಗೂರ್ಗಳು ಹೆದರಿ ಓಡಲಾರಂಭಿಸಿದವು. ಇದೊಂದು ಉತ್ತಮ ಹಾಗೂ ಯಶಸ್ವಿ ಪ್ರಯೋಗವಾಗಿದ್ದು, ಕಳೆದೊಂದು ವಾರದಿಂದ ನಾವು ಈ ಪ್ರಯತ್ನ ಮಾಡುತ್ತಾ ಬಂದಿದ್ದೇವೆ ಎಂದು ಏರ್ಪೋರ್ಟ್ ನಿರ್ದೇಶಕ ಮನೋಜ್ ಗಂಗಲ್ ತಿಳಿಸಿದ್ದಾರೆ.