ಗನ್ ಜೊತೆ ಆಟವಾಡುತ್ತಾ ಅವಘಡ: ಗುಂಡು ತಗುಲಿ 11 ವರ್ಷದ ಬಾಲಕ ಸಾವು - ಗನ್ ಜೊತೆ ಆಟವಾಡುತ್ತಾ ಗುಂಡು ತಗುಲಿ 11 ವರ್ಷದ ಬಾಲಕ ಸಾವು
ರಾಜಸ್ಥಾನ: ಬುಲೆಟ್ ತುಂಬಿದ್ದ ಗನ್ನಲ್ಲಿ ಆಟವಾಡಲು ಹೋಗಿ ಗುಂಡು ತಗುಲಿ 11 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ರಾಜಸ್ಥಾನದ ಸಿಕಾರ್ ಜಿಲ್ಲೆಯ ಸಿಹೋಟ್ ಗ್ರಾಮದಲ್ಲಿ ನಡೆದಿದೆ. ಶುಭಂ ಮೃತ ಬಾಲಕ. ಗ್ರಾಮದ ಜಮೀನೊಂದರಲ್ಲಿ ಜಮೀನು ಕಾಯುವ ವ್ಯಕ್ತಿಯು ಬಂದೂಕನ್ನು ಇಟ್ಟು ಹೋಗಿದ್ದಾನೆ. ಈ ವೇಳೆ ಆಟವಾಡುತ್ತಾ ಬಂದ ಬಾಲಕ ಬಂದೂಕನ್ನು ತೆಗೆದುಕೊಂಡು ಆಟವಾಡುತ್ತಾ ಆಕಸ್ಮಿಕವಾಗಿ ಶೂಟ್ ಮಾಡಿಕೊಂಡಿದ್ದಾನೆ. ಮಿಲಿಟರಿಯಲ್ಲಿ ಕೆಲಸ ಮಾಡುತ್ತಿರುವ ಸಿಹೋಟ್ ಗ್ರಾಮದ ರಾಧೇಶ್ಯಾಮ್ ಎಂಬವರ ಏಕೈಕ ಪುತ್ರ ಶುಭಂ ಆಗಿದ್ದು, ಜಮೀನು ಕಾವಲುಗಾರನ ವಿರುದ್ಧ ಮೃತ ಬಾಲಕನ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ.
TAGGED:
rajastan crime news