ಪುಲ್ವಾಮಾ ಉಗ್ರ ದಾಳಿಯ ಕಹಿ ನೆನಪು ಮಾಸುವ ಮುನ್ನವೇ ಮತ್ತೊಂದು ದಾಳಿ! - ಕಾರ್ಯಾಚರಣೆ
ಫೆಬ್ರವರಿ 14ರಂದು 40 ಕ್ಕೂ ಹೆಚ್ಚು ಯೋಧರ ಸಾವಿಗೆ ಕಾರಣವಾಗಿದ್ದ ಭಯೋತ್ಪಾದಕ ದಾಳಿಯ ಕಹಿ ನೆನಪು ಇನ್ನೂ ಕಾಡುತ್ತಿದೆ. ಇದರ ಬೆನ್ನಲ್ಲೇ ಶ್ರೀನಗರದ ಪುಲ್ವಾಮಾದಲ್ಲಿ ಮತ್ತೊಂದು ಭಯೋತ್ಪಾದಕ ಕೃತ್ಯ ನಡೆದಿದೆ. ಕೆಲಸ ಮುಗಿಸಿ ಸೇನಾ ವಾಹನದಲ್ಲಿ ಯೋಧರು ತೆರಳುತ್ತಿದ್ದ ವೇಳೆ ಭಯೋತ್ಪಾದಕರು ಸುಧಾರಿತ ಸ್ಫೋಟಕ ಸಾಧನ ಬಳಸಿ ದಾಳಿ ನಡೆಸಿದ್ದು, 8 ಯೋಧರು ಗಾಯಗೊಂಡಿದ್ದಾರೆ.