ಕರ್ನಾಟಕ

karnataka

ETV Bharat / videos

ಕುಲ್ಲುವಿನಲ್ಲಿ ಹಿಮದ ಕಲರವ : ರಸ್ತೆಯಲ್ಲಿ ಜಾರಿ ಹೊಗುತ್ತಿರುವ ವಾಹನಗಳು.. ವಿಡಿಯೋ - ಸೋಲಾಂಗ್ ನಲಾ

By

Published : Jan 6, 2021, 9:59 AM IST

ಕುಲ್ಲು (ಹಿಮಾಚಲ ಪ್ರದೇಶ) : ಮೂರು ದಿನಗಳ ಹಿಂದೆ ಪ್ರವಾಸಿ ಪಟ್ಟಣ ಮನಾಲಿಯಲ್ಲಿ ಪ್ರವಾಸಿಗರು ದಕ್ಷಿಣ ಪೋರ್ಟಲ್ ಆಫ್ ಅಟಲ್ ಟನಲ್ ರೋಹ್ತಂಗ್ ಮತ್ತು ಧುರಿ ನಡುವೆ 17 ಗಂಟೆಗಳ ಕಾಲ ಸಿಲುಕಿಕೊಂಡಿದ್ದರು. ಈಗ ಸೋಲಾಂಗ್ ನಲಾದಲ್ಲಿ ತಡರಾತ್ರಿ ನೂರಾರು ಪ್ರವಾಸಿಗರು ಹಿಮದಲ್ಲಿ ಸಿಲುಕಿಕೊಂಡಿದ್ದಾರೆ. ಮಂಗಳವಾರ ಸಂಜೆ 5 ಗಂಟೆ ಸುಮಾರಿಗೆ ಪ್ರವಾಸಿಗರು ಮನಾಲಿಗೆ ಹಿಂದಿರುಗುತ್ತಿದ್ದಾಗ, 400 ರಿಂದ 500 ವಾಹನಗಳು ಒಮ್ಮೆಲೆ ಸಂಚರಿಸುತ್ತಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಯಿತು. ಇದರೊಂದಿಗೆ ಹಿಮಪಾತ ಹೆಚ್ಚಾಗಿದ್ದು, ರಸ್ತೆಯ ತುಂಬಾ ಹಿಮ ಆವರಿಸಿದೆ. ಇದರ ಪರಿಣಾಮ ವಾಹನಗಳು ಜಾರಿ ಹೋಗುತ್ತಿವೆ. ಈಗ ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ABOUT THE AUTHOR

...view details