ಕರ್ನಾಟಕ

karnataka

ETV Bharat / sukhibhava

ವಿಶ್ವ COPD ದಿನ 2022: ನಿಮ್ಮ ಶ್ವಾಸಕೋಶದ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ - ವಾಯುಮಾಲಿನ್ಯ

ಕಲುಷಿತ ಗಾಳಿ ಸೇವಿಸುವುದರಿಂದ ಶ್ವಾಸಕೋಶದ ಮೇಲೆ ಉಂಟಾಗುವ ಪರಿಣಾಮದಿಂದ ಸಿಒಪಿಡಿ ಆರೋಗ್ಯ ಸಮಸ್ಯೆ ಉಲ್ಭಣಗೊಳ್ಳುತ್ತದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯ, ಧೂಮಪಾನ ಹಾಗೂ ತಂಬಾಕು ಸೇವನೆ, ಜೈವಿಕ ಇಂಧನ ಹೊಗೆಯಿಂದಾಗಿ ಬಹುತೇಕರು ಸಿಒಪಿಡಿಯಿಂದ ಬಳಲುತ್ತಿದ್ದಾರೆ ಎಂಬುದು ಆಘಾತಕಾರಿ ವಿಷಯವಾಗಿದೆ.

COPD Day 2022
ವಿಶ್ವ COPD ದಿನ 2022

By

Published : Nov 16, 2022, 5:32 PM IST

ಹೈದರಾಬಾದ್:ವಿಶ್ವ ಸಿಒಪಿಡಿ ದಿನವನ್ನು ನವೆಂಬರ್ 16 ರಂದು ಆಚರಿಸಲಾಗುತ್ತದೆ. ಸಿಒಪಿಡಿ ಎಂದರೆ ಕ್ರಾನಿಕ್ ಅಬ್ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (COPD). ವಿಶ್ವ COPD ದಿನವನ್ನು ವಿಶ್ವಾದ್ಯಂತ ಜಾಗೃತಿ ಮೂಡಿಸಲು, ಇದರ ಬಗ್ಗೆ ಮಾಹಿತಿ ಮತ್ತು ಚಿಕಿತ್ಸೆಯನ್ನು ಪಡೆಯುವಂತೆ ಉತ್ತೇಜಿಸಲು ಪ್ರತಿ ವರ್ಷ ಆಚರಿಸಲಾಗುತ್ತದೆ.

ಗ್ಲೋಬಲ್ ಇನಿಶಿಯೇಟಿವ್ ಫಾರ್ ಕ್ರೋನಿಕ್ ಅಬ್ಸ್ಟ್ರಕ್ಟಿವ್ ಲಂಗ್ ಡಿಸೀಸ್ (GOLD) ವತಿಯಿಂದ ಪ್ರತಿವರ್ಷ ಸಿಒಪಿಡಿ ದಿನವನ್ನು ಆಚರಿಸಲಾಗುತ್ತದೆ. ಪ್ರಪಂಚದಾದ್ಯಂತ ಆರೋಗ್ಯ ವೃತ್ತಿಪರರು ಮತ್ತು ಸಿಒಪಿಡಿ ರೋಗಿಗಳ ಗುಂಪುಗಳ ಸಹಯೋಗದೊಂದಿಗೆ ಇದು ನಡೆಸಲ್ಪಡುತ್ತದೆ.

ಮನುಷ್ಯರು ಹುಟ್ಟಿದಾಗಿನಿಂದ ಹಿಡಿದು ಪ್ರೌಢಾವಸ್ಥೆಯವರೆಗೆ, ಶ್ವಾಸಕೋಶವನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳುವುದು ತುಂಬಾ ಪ್ರಮುಖವಾಗಿದೆ. ಈ ಅಭಿಯಾನವು ಹುಟ್ಟಿನಿಂದ ಪ್ರೌಢಾವಸ್ಥೆ ವರೆಗೆ COPDಗೆ ಕೊಡುಗೆ ನೀಡುವ ಅಂಶಗಳನ್ನು ಕೇಂದ್ರೀಕರಿಸುತ್ತದೆ. ಸಿಒಪಿಡಿ ದುರ್ಬಲಗೊಳಿಸುವ ಸ್ಥಿತಿಯಾಗಿದ್ದು, ಅದು ಶ್ವಾಸಕೋಶದಿಂದ ಗಾಳಿಯ ಹರಿವು ತಡೆಯುತ್ತದೆ. ಹೀಗಾಗಿ ನಿತ್ಯದ ಚಟುವಟಿಕೆಗಳನ್ನು ಸುಲಭವಾಗಿ ನಿರ್ವಹಿಸುವ ಒಬ್ಬರ ಸಾಮರ್ಥ್ಯ ತಡೆಯುತ್ತದೆ.

ಶ್ವಾಸಕೋಶದ ಕಾಯಿಲೆ ಎಂದರೇನು?:ದೀರ್ಘಕಾಲದ ಪ್ರತಿರೋಧದ ಶ್ವಾಸಕೋಶದ ಉಸಿರಾಟದ ತೊಂದರೆಯೇ ಶ್ವಾಸಕೋಶದ ಕಾಯಿಲೆಯಾಗಿದ್ದು, ಇದು ಗಾಳಿಯ ಹರಿವನ್ನು ನಿರಂತರವಾಗಿ ಕಡಿಮೆ ಮಾಡುತ್ತದೆ ಎಂದು ಡಬ್ಲ್ಯುಹೆಚ್‌ಒ ಹೇಳುತ್ತದೆ.

ಇದು ಹೆಚ್ಚು ರೋಗಗಳು ಬರಲು ಕಾರಣವಾಗುತ್ತದೆ ಮತ್ತು ಜೀವಕ್ಕೆ ಅಪಾಯಕಾರಿಯಾಗಿದೆ. ದೀರ್ಘಕಾಲದ ಬ್ರಾಂಕೈಟಿಸ್ ಮತ್ತು ಎಂಫಿಸೆಮಾ ಎಂಬ ಹೆಚ್ಚು ಪರಿಚಿತ ಪದಗಳನ್ನು ಈ ಸ್ಥಿತಿಗೆ ಲೇಬಲ್‌ಗಳಾಗಿ ಬಳಸಲಾಗುತ್ತದೆ.

ಪ್ರತಿ ವರ್ಷ, GOLD ಒಂದು ಥೀಮ್ ಅನ್ನು ಆಯ್ಕೆ ಮಾಡುತ್ತದೆ ಮತ್ತು ವಿಶ್ವ COPD ದಿನದ ಸಾಮಗ್ರಿಗಳು ಮತ್ತು ಸಂಪನ್ಮೂಲಗಳ ತಯಾರಿಕೆ ಮತ್ತು ವಿತರಣೆಯನ್ನು ಸಂಘಟಿಸುತ್ತದೆ. ವಿಶ್ವ COPD ದಿನದ 2022 ರ ವಿಷಯವು ಜೀವನಕ್ಕಾಗಿ ನಿಮ್ಮ ಶ್ವಾಸಕೋಶಗಳು ಎಂಬುದಾಗಿದೆ.

ಇದು ಜೀವಿತಾವಧಿಯ ಶ್ವಾಸಕೋಶದ ಆರೋಗ್ಯದ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ. ವಿಶ್ವ COPD ದಿನದ ಚಟುವಟಿಕೆಗಳನ್ನು ಆರೋಗ್ಯ ವೃತ್ತಿಪರರು, ಶಿಕ್ಷಕರು ಮತ್ತು ಸಾರ್ವಜನಿಕರಿಂದ ಸ್ವಯಂಸೇವಕರು ಆಯೋಜಿಸುತ್ತಾರೆ.

ಕಳಪೆ ಗುಣಮಟ್ಟದ ಗಾಳಿ ಸಿಓಪಿಡಿಗೆ ಕಾರಣ: ಮೊದಲ ವಿಶ್ವ COPD ದಿನವನ್ನು 2002 ರಲ್ಲಿ ಆಚರಿಸಲಾಯಿತು. ಪ್ರತಿ ವರ್ಷ 50ಕ್ಕೂ ಹೆಚ್ಚು ದೇಶಗಳ ಸಂಘಟಕರು ಇದನ್ನು ಆಯೋಜಿಸುತ್ತಾರೆ. ಈ ದಿನವನ್ನು ವಿಶ್ವದ ಪ್ರಮುಖ COPD ಜಾಗೃತಿ ಮತ್ತು ಶಿಕ್ಷಣ ಕಾರ್ಯಕ್ರಮಗಳಲ್ಲಿ ಒಂದನ್ನಾಗಿ ಮಾಡಿದ್ದಾರೆ. ನವದೆಹಲಿ ಮತ್ತು ಮುಂಬೈನಂತಹ ನಗರಗಳಲ್ಲಿ ಕಳಪೆ ಗುಣಮುಟ್ಟದ ಗಾಳಿಯಿಂದಾಗಿ ಸಿಒಪಿಡಿ ತುತ್ತಾಗುವವರ ಸಂಖ್ಯೆ ಹೆಚ್ಚುತ್ತಿದೆ.

ವಾಯುಮಾಲಿನ್ಯದಿಂದಾಗಿ ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ (ಸಿಒಪಿಡಿ ಕ್ರೋನಿಕ್ ಅಬ್ಸಟ್ರಕ್ಟಿವ್ ಪಲ್ಯುಮಿನರಿ ಡಿಸೀಸ್) ಹೆಚ್ಚುತ್ತಿದೆ. ಶ್ವಾಸಕೋಶದಲ್ಲಿ ಗಾಳಿಯ ಹರಿವಿಗೆ ಉಂಟಾಗುವ ಸಮಸ್ಯೆಯೇ ಈ ರೋಗ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರತಿ 10 ಸೆಕೆಂಡಿಗೆ ಒಬ್ಬ ವ್ಯಕ್ತಿಯಂತೆ ಈ ಕಾಯಿಲೆಯಿಂದ ಸಾವನ್ನಪ್ಪುತ್ತಿದ್ದಾರೆ. ತಂಬಾಕು ಸೇವನೆ, ಜೈವಿಕ ಇಂಧನದ ಹೊಗೆ, ಇತರ ಹೊಗೆ ಮತ್ತು ವಾಯುಮಾಲಿನ್ಯವೇ ಈ ಕಾಯಿಲೆಗೆ ಪ್ರಮುಖ ಕಾರಣಗಳು.

ಪ್ರಪಂಚದಲ್ಲಿ 300 ಮಿಲಿಯನ್​ ಸಿಓಪಿಡಿ ಪ್ರಕರಣ: ಇತ್ತೀಚಿನ ಸಂಶೋಧನೆಯೊಂದು ಜನನದ ಮೊದಲು ಮತ್ತು ನಂತರದ ಶ್ವಾಸಕೋಶದ ಬೆಳವಣಿಗೆಯು ಸಿಒಪಿಡಿ ಅಪಾಯವನ್ನು ಹೆಚ್ಚಿಸಬಹುದು ಎಂದು ಹೇಳಿದೆ. COPD ಒಂದು ತಡೆಗಟ್ಟಬಹುದಾದ ಮತ್ತು ಚಿಕಿತ್ಸೆ ನೀಡಬಹುದಾದ ಕಾಯಿಲೆಯಾಗಿದ್ದು, ಅದು ಉಸಿರಾಟದ ತೊಂದರೆ, ದೀರ್ಘಕಾಲದ ಕಫ ಉತ್ಪಾದನೆ ಮತ್ತು ಕೆಮ್ಮನ್ನುಂಟು ಮಾಡುತ್ತದೆ. ಪ್ರಪಂಚದಲ್ಲಿ ಪ್ರಸ್ತುತ COPD ಯ 300 ಮಿಲಿಯನ್ ಪ್ರಕರಣಗಳಿವೆ.

ಶ್ವಾಸಕೋಶ ಕಾಯಿಲೆಯ ಸಾಮಾನ್ಯ ಲಕ್ಷಣಗಳು:

  • ಉಸಿರಾಟದ ತೊಂದರೆ
  • ದೀರ್ಘಕಾಲದ ಕೆಮ್ಮು,ಉಬ್ಬಸ ಬರುವುದು
  • ಕಫ ಅಥವಾ ಹೆಚ್ಚೆಚ್ಚು ಕಫ ಉತ್ಪಾದನೆ ಆಗುವುದು
  • ಆಗಾಗ್ಗೆ ಉಸಿರಾಡುವಾಗ ನೋವಾಗುವುದು
  • ಆಯಾಸ

ಸಿಒಪಿಡಿಯ ಪರಿಣಾಮಗಳು :

  • ಜಾಸ್ತಿ ನಡೆಯಲು ಅಥವಾ ಹೆಚ್ಚು ಮೆಟ್ಟಿಲುಗಳನ್ನು ಹತ್ತಲು ಆಗುವುದಿಲ್ಲ.
  • ಹೆಚ್ಚು ಕೆಲಸ ಮಾಡಲು ಸಾಧ್ಯವಾಗುವುದಿಲ್ಲ.
  • ಪೋರ್ಟಬಲ್ ಆಮ್ಲಜನಕ ಟ್ಯಾಂಕ್‌ಗಳಂತಹ ವಿಶೇಷ ಉಪಕರಣಗಳು ಬೇಕಾಗುತ್ತವೆ.
  • ಊಟ ಮಾಡುವುದು, ಪೂಜಾ ಸ್ಥಳಗಳಿಗೆ ಹೋಗುವುದು, ಗುಂಪು ಕಾರ್ಯಕ್ರಮಗಳಿಗೆ ಹೋಗುವುದು ಅಥವಾ ಸ್ನೇಹಿತರು, ನೆರೆಹೊರೆಯವರೊಂದಿಗೆ ಒಗ್ಗೂಡಿಸುವುದು ಮುಂತಾದ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಡಿ.
  • ಗೊಂದಲ ಹೆಚ್ಚಾಗುವುದು ಅಥವಾ ಮೆಮೊರಿ ಲಾಸ್​ತುರ್ತು ಕೊಠಡಿಗಳನ್ನು ಮತ್ತು ರಾತ್ರಿಯ ಹೊತ್ತು ಆಸ್ಪತ್ರೆಯಲ್ಲಿ ಇರುವುದು ಒಳಿತು.
  • ಸಂಧಿವಾತ, ರಕ್ತ ಕಟ್ಟಿ ಹೃದಯ ಸ್ಥಂಭನ, ಮಧುಮೇಹ, ಪರಿಧಮನಿಯ ಹೃದಯ ಕಾಯಿಲೆ, ಪಾರ್ಶ್ವವಾಯು ಅಥವಾ ಅಸ್ತಮಾದಂತಹ ಇತರ ದೀರ್ಘಕಾಲದ ಕಾಯಿಲೆಗಳನ್ನು ಹೊಂದಬಹುದು.
  • ಖಿನ್ನತೆ ಅಥವಾ ಇತರ ಮಾನಸಿಕ ಅಥವಾ ಭಾವನಾತ್ಮಕ ಸ್ಥಿತಿಗಳನ್ನು ಹೊಂದಬಹುದು.

ಸಿಒಪಿಡಿ ಚಿಕಿತ್ಸೆ:

  • ಧೂಮಪಾನ ತ್ಯಜಿಸುವುದು
  • ತಂಬಾಕು ಹೊಗೆ ಮತ್ತು ಇತರ ವಾಯು ಮಾಲಿನ್ಯಕಾರಕಗಳನ್ನು ತಪ್ಪಿಸಬೇಕು.
  • ಶ್ವಾಸಕೋಶದ ಪುನರ್ವಸತಿ ಬಗ್ಗೆ ನಿಮ್ಮ ವೈದ್ಯರನ್ನು ಕೇಳಿ ತಿಳಿದುಕೊಳ್ಳಿ.
  • ಔಷಧಗಳನ್ನು ತೆಗೆದುಕೊಳ್ಳಿಶ್ವಾಸಕೋಶಕ್ಕೆ ಸೋಂಕು ಹರಡುವುದನ್ನು ತಪ್ಪಿಸಿ.
  • ಪೂರಕ ಆಮ್ಲಜನಕವನ್ನು ಬಳಸಿ

ಧೂಮಪಾನವನ್ನು ತ್ಯಜಿಸುವುದು ಮತ್ತು ಮಾಲಿನ್ಯಕಾರಕಗಳಿಗೆ ಒಡ್ಡಿಕೊಳ್ಳುವುದನ್ನು ಸೀಮಿತಗೊಳಿಸುವುದು ಸಿಪಿಒಡಿ ಪಡೆಯುವ ಸಾಧ್ಯತೆಯನ್ನು ಬಹಳವಾಗಿ ಕಡಿಮೆ ಮಾಡುತ್ತದೆ. ಸಿಒಪಿಡಿ ಗೆ ಯಾವುದೇ ಚಿಕಿತ್ಸೆ ಇಲ್ಲ. ಆದಾಗ್ಯೂ, ರೋಗಲಕ್ಷಣಗಳನ್ನು ಕಡಿಮೆ ಮಾಡುವ ಮತ್ತು ಉಸಿರಾಟವನ್ನು ಸುಧಾರಿಸುವ ಚಿಕಿತ್ಸಾ ಆಯ್ಕೆಗಳಿವೆ.

COPD ಗೆ ಚಿಕಿತ್ಸೆ ನೀಡುವ ಕೆಲವು ಸಾಮಾನ್ಯ ವಿಧಾನಗಳಲ್ಲಿ ಇನ್ಹೇಲರ್‌ಗಳು, ಆಮ್ಲಜನಕ ಚಿಕಿತ್ಸೆ, ಶ್ವಾಸಕೋಶದ ಪುನರ್ವಸತಿ, ಡಯಾಫ್ರಾಗ್ಮ್ಯಾಟಿಕ್ ಉಸಿರಾಟ ಮತ್ತು ದೈಹಿಕ ವ್ಯಾಯಾಮ ಸೇರಿವೆ.ಗ್ಲೋಬಲ್ ಇನಿಶಿಯೇಟಿವ್ ಫಾರ್ ಕ್ರೋನಿಕ್ ಅಬ್ಸ್ಟ್ರಕ್ಷನ್ ಲಂಗ್ ಡಿಸೀಸ್ (GOLD) 2002 ರಲ್ಲಿ ವಿಶ್ವ ಸಿಒಪಿಡಿ ದಿನವನ್ನು ಆಚರಣೆಗೆ ತಂದಿತು.

ABOUT THE AUTHOR

...view details