ಹೈದರಾಬಾದ್: ವಿಶ್ವ ಇಂಧನ ಸಂರಕ್ಷಣಾ ದಿನವನ್ನು ಪ್ರತಿ ವರ್ಷ ಡಿಸೆಂಬರ್ 14ರಂದು ಆಚರಿಸಲಾಗುತ್ತದೆ. 150 ದೇಶಗಳ, 5200 ನಗರಗಳ ಮತ್ತು ಮಿಲಿಯಂತರ ಜನರ ಒಳಗೊಂಡ ಜಾಗತಿಕ ಉಪಕ್ರಮ ಇದಾಗಿದೆ. ನಿತ್ಯದ ಜೀವನದಲ್ಲಿನ ಶಕ್ತಿ ಬಳಕೆ, ಕೊರತೆ ಮತ್ತು ಜಾಗತಿಕ ಜೀವವ್ಯವಸ್ಥೆ ಸುಸ್ಥಿರತೆ ಮೇಲಿನ ಪರಿಣಾಮವನ್ನು ಇದು ಒತ್ತಿ ಹೇಳುತ್ತದೆ.
ಸಂಪ್ರದಾಯಿಕವಲ್ಲದ ಶಕ್ತಿ ಮೂಲಗಳಾದ ಗಾಳಿ, ಹೈಡೆಲ್, ಬಯೋಮಾಸ್, ಬಯೋಗ್ಯಾಸ್, ಬಯೋಡಿಸೆಲ್, ಜಿಯೋಥರ್ಮಲ್, ಸೌರಶಕ್ತಿಗಳ ಮೂಲವನ್ನು ಇವು ಹೊಂದಿದೆ. ಬಹುತೇಕ ಸಾಂಪ್ರದಾಯಿಕ ಮೂಲವಲ್ಲದ ಶಕ್ತಿಗಳಲ್ಲಿ ಜಲ ಮತ್ತು ಗಾಳಿ ಹೊರತಾಗಿ ಉಳಿದವು ದುಬಾರಿಯಾಗಿವೆ.
ಉದ್ದೇಶ: ಈ ದಿನದ ಉದ್ದೇಶ ಎಂದರೆ ಶಕ್ತಿ ಸಂರಕ್ಷಣೆಯನ್ನು ಎಲ್ಲ ರೀತಿಯಲ್ಲಿ ಉಳಿಸಿಕೊಂಡು ಹೋಗುವುದು ಪ್ರಮುಖವಾಗಿದೆ ಎಂಬ ಸಂದೇಶ ಸಾರುವುದಾಗಿದೆ. ಈ ನಟ್ಟಿನಲ್ಲಿ ಶಕ್ತಿ ಸಂರಕ್ಷಣೆ ಬಗ್ಗೆ ಹಲವು ಚರ್ಚೆ, ಸಭೆ, ಚರ್ಚೆ ಮತ್ತು ವರ್ಕ್ಶಾಪ್ ಮೂಲಕ ಅರಿವು ಮೂಡಿಸುವ ಕಾರ್ಯ ನಡೆಸಬೇಕಿದೆ. ಜನರಿಗೆ ಶಕ್ತಿ ಬಳಕೆಯನ್ನು ಮಿತವಾಗಿ ಬಳಕೆ ಮಾಡುವಂತೆ ತಿಳಿಸುವುದಾಗಿದೆ. ಜೊತೆಗೆ ಅನಗತ್ಯ ಬಳಕೆಗೆ ಕಡಿವಾಣ ಮತ್ತು ಸಾಮರ್ಥ್ಯದಾಯಕ ಬಳಕೆಗೆ ಉತ್ತೇಜನ ನೀಡುವ ನಿರ್ಣಾಯಕ ಗುರಿಯನ್ನು ಹೊಂದಿದೆ. ಜೊತೆಗೆ ಕಟ್ಟಡಗಳು, ವಾಹನ ಮತ್ತು ಇತರ ಗೃಹ ಸಾಮಗ್ರಿಗಳಿಗೆ ಸಾಮರ್ಥ್ಯದಾಯಕ ಬಳಕೆಗೆ ಪ್ರಯೋಜನ ನೀಡುವ ಮೂಲಕ ಪರಿಸರ ಮಾಲಿನ್ಯ ಕಡಿಮೆ ಮಾಡಬಹುದಾಗಿದೆ.