ಬ್ಯಾಂಕಾಕ್: ಭಾರತೀಯ ಮನೆಗಳಲ್ಲಿ ಅಡುಗೆಗೆ ಸಾಮಾನ್ಯವಾಗಿ ಬಳಕೆ ಮಾಡುವ ಅರಿಶಿಣದಲ್ಲಿ ಪರಿಣಾಮಕಾರಿ ಒಮೆಪ್ರೊಜೋಲ್ ಇದ್ದು, ಇದು ಉದರದ ಆಮ್ಲತೆಯನ್ನು ನಿವಾರಣೆ ಮಾಡುತ್ತದೆ. ಜೊತೆಗೆ ಅಜೀರ್ಣದಂತಹ ಸಮಸ್ಯೆಗೆ ಚಿಕಿತ್ಸೆ ನೀಡುತ್ತದೆ ಎಂದು ಹೊಸ ಅಧ್ಯಯನ ತಿಳಿಸಿದೆ. ಈ ಕುರಿತು ಆನ್ಲೈನ್ ಜರ್ನಲ್ ಬಿಎಂಜೆನಲ್ಲಿ ಪ್ರಕಟಿಸಲಾಗಿದೆ.
ಕ್ಯುಕುಮ ಲೊಂಗಾ ಸಸ್ಯದ ಬೇರುಗಳಿಂದ ಈ ಅರಿಶಿಣ ಲಭ್ಯವಾಗುತ್ತದೆ. ಇದರಲ್ಲಿ ನೈಸರ್ಗಿಕವಾಗಿ ಊರಿಯುತ ನಿವಾರಣೆ ಮತ್ತು ಆ್ಯಂಟಿಮೈಕ್ರೋಬಯಲ್ ಅಂಶಗಳಿರುತ್ತವೆ. ಈ ಹಿನ್ನೆಲೆ ಆಗ್ನೇಯ ಏಷ್ಯಾದಲ್ಲಿ ವೈದ್ಯಕೀಯ ಚಿಕಿತ್ಸೆಯಲ್ಲಿ ಅದರಲ್ಲೂ ಅಜೀರ್ಣದಂತಹ ಸಮಸ್ಯೆಯಲ್ಲಿ ದೀರ್ಘಕಾಲದಿಂದ ಬಳಕೆ ಮಾಡಲಾಗಿದೆ.
ಈ ಅಧ್ಯಯನದ ಫಲಿತಾಂಶದಲ್ಲಿ ಅರಿಶಿಣದ ಮಾತ್ರೆಗಳು ಒಮೆಪ್ರೊಜಾಲ್ನಂತೆ ಜೀರ್ಣಕ್ರಿಯೆ ಸುಧಾರಣೆಗೆ ಸಹಾಯಕಾರಿಯಾಗಿದೆ ಎಂದು ತೋರಿಸಿದೆ.
ಇದರಿಂದ ಯಾವುದೇ ಗಂಭೀರ ಅಡ್ಡ ಪರಿಣಾಮ ಇಲ್ಲ. ಯಕೃತ್ತಿನ ಕಾರ್ಯ ಪರೀಕ್ಷೆಗಳು ಹೆಚ್ಚಿನ ತೂಕವನ್ನು ಹೊಂದಿರುವ ಕರ್ಕ್ಯುಮಿನ್ ಬಳಕೆದಾರರಲ್ಲಿ ಕೆಲವು ಮಟ್ಟದ ಕ್ಷೀಣತೆಯನ್ನು ಸೂಚಿಸುತ್ತವೆ ಎಂದು ಥೈಲ್ಯಾಂಡ್ನ ಚುಲೌಂಗ್ಕೊರ್ನ್ ಯುನಿರ್ವಸಿಟಿ ಸಂಶೋಧಕರು ತಿಳಿಸಿದ್ದಾರೆ.
ಈ ಅಧ್ಯಯನದಲ್ಲಿ 18 ರಿಂದ 70 ವರ್ಷದ 206 ಮಂದಿಯನ್ನು ಒಳಪಡಿಸಲಾಗಿದೆ. 2019ರಿಂದ 2021ರವರೆಗೆ ನಡೆದ ಅಧ್ಯಯನದಲ್ಲಿ 28 ದಿನಗಳಿಗೆ ಮೂರು ಚಿಕಿತ್ಸೆಯ ಗುಂಪು ರಚಿಸಲಾಗಿದೆ. ಒಂದು ಗುಂಪಿಗೆ 250 ಎಂಜಿಯ ಅರಿಶಿಣದ ಮಾತ್ರೆಯನ್ನು ದಿನಕ್ಕೆ ನಾಲ್ಕು ಬಾರಿ ನೀಡಲಾಗಿದೆ. ಮತ್ತೊಂದು ಸಣ್ಣ ಗುಂಪಿಗೆ ಡಮ್ಮಿ ಮಾತ್ರೆಗಳನ್ನು ನೀಡಲಾಗಿದೆ. ಮೂರನೇ ಗುಂಪಿಗೆ 20 ಎಂಜಿಯ ಒಮೆಪ್ರೊಜೊಲ್ ಮಾತ್ರೆಯನ್ನು ದಿನಕ್ಕೆ ನಾಲ್ಕು ನೀಡಲಾಗಿದೆ.