ವರ್ಮೊಂಟ್: ಟಿಕ್‌ಟಾಕ್‌ನಲ್ಲಿ ಆಹಾರ, ಪೋಷಕಾಂಶ ಮತ್ತು ತೂಕ ಕಡಿಮೆ ಮಾಡಿಕೊಳ್ಳುವ ವಿಷಯಕ್ಕೆ ಸಂಬಂಧಿಸಿದಂತೆ ವಿಡಿಯೋಗಳನ್ನು ಹಾಕಲಾಗುತ್ತದೆ. ಈ ವಿಡಿಯೋಗಳು ಹದಿಹರೆಯದವರು ಮತ್ತು ಯುವ ವಯಸ್ಕರಲ್ಲಿ ಹಾನಿಕಾರಕ ಆಹಾರ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವಂತೆ ಮಾಡುತ್ತವೆ ಎಂದು ಸಂಶೋಧನೆ ಹೇಳಿದೆ.
PLOS One ನಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಲೇಖನವೊಂದು ಪ್ರಕಟವಾಗಿದೆ. ಟಿಕ್ ಟಾಕ್ನಲ್ಲಿ ಹೆಚ್ಚಾಗಿ ತೂಕ ನಷ್ಟಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಹಾಕಲಾಗುತ್ತಿದೆ. ತೆಳ್ಳಗೆ ಆಗಲು ಯಾವ ರೀತಿ ಆಹಾರ ಸೇವಿಸಬೇಕು ಎಂಬುದರ ಬಗ್ಗೆ ವಿಡಿಯೋಗಳು ಇರುತ್ತವೆ. ಇದು ಅವರ ಆಹಾರ ಪದ್ಧತಿಯ ಮೇಲೆ ಪರಿಣಾಮ ಬೀರಬಹುದು ಎಂದು ಸಂಶೋಧನೆ ಹೇಳಿದೆ.
ಪ್ರತಿದಿನ ಲಕ್ಷಾಂತರ ಹದಿಹರೆಯದವರು ಮತ್ತು ಯುವ ವಯಸ್ಕರಿಗೆ ಟಿಕ್‌ಟಾಕ್‌ನಲ್ಲಿ ಯಾವ ರೀತಿ ಆಹಾರವನ್ನು ಸೇವಿಸಬೇಕು ಎಂಬುದರ ಬಗ್ಗೆ ಹೇಳಲಾಗುತ್ತಿದೆ. ಇದು ಆಹಾರ, ಪೋಷಕಾಂಶ ಮತ್ತು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಯುವಿಎಂನ ಡಯೆಟಿಕ್ಸ್‌ನಲ್ಲಿ ಡಿಡಾಕ್ಟಿಕ್ ಪ್ರೋಗ್ರಾಂನ ಸಹ ಪ್ರಾಧ್ಯಾಪಕ ಮತ್ತು ನಿರ್ದೇಶಕಿ ಹಿರಿಯ ಸಂಶೋಧಕ ಲಿಜ್ಜಿ ಪೋಪ್ ಹೇಳಿದ್ದಾರೆ.