ಹೈದರಾಬಾದ್:ಅನೇಕ ರೋಗ ಮತ್ತು ಅಸ್ವಸ್ಥತೆಗಳಿಂದ ನಮ್ಮ ದೇಹವನ್ನು ರಕ್ಷಿಸುವಲ್ಲಿ ರೋಗ ನಿರೋಧಕ ಶಕ್ತಿ (ಇಮ್ಯೂನಿಟಿ) ಪಾತ್ರ ಪ್ರಮುಖವಾಗಿದೆ. ಈ ಇಮ್ಯೂನಿಟಿ ಬಲವಾಗಿದ್ದು, ವೈರಸ್ ಮತ್ತು ಬ್ಯಾಕ್ಟೀರಿಯಗಳು ನಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಲು ಸಾಧ್ಯವಿಲ್ಲ. ಇಂತಹ ರೋಗ ನಿರೋಧಕ ವ್ಯವಸ್ಥೆಯನ್ನು ಬಲಗೊಳಿಸುವಲ್ಲಿ ಆಹಾರದ ಪಾತ್ರವೂ ಪ್ರಮುಖವಾಗಿದೆ. ಈ ಹಿನ್ನೆಲೆ ತಜ್ಞರು ನಿತ್ಯ ಹಲವು ವಿಟಮಿನ್ ಹೊಂದಿರುವ ಆಹಾರಗಳನ್ನು ಸೇವಿಸಬೇಕು. ಇದರಿಂದಲೇ ಆರೋಗ್ಯಯುತವಾಗಿ ಇರಲು ಸಾಧ್ಯ ಎಂದು ಸಲಹೆ ನೀಡುತ್ತಾರೆ. ಯಾವ ವಿಟಮಿನ್ ಯಾವ ರೀತಿ ಸಹಾಯ ಮಾಡುತ್ತದೆ ಎಂಬ ಮಾಹಿತಿ ಇಲ್ಲಿದೆ
ವಿಟಮಿನ್ ಸಿ: ವಿಟಮಿನ್ ಸಿ ದೇಹದ ರೋಗ ನಿರೋಧಕ ಶಕ್ತಿಯನ್ನು ಉತ್ತೇಜಿಸುವಲ್ಲಿ ಪ್ರಮುಖವಾಗಿದೆ. ಈ ವಿಟಮಿನ್ ಕೊರತೆ ಹೊಂದಿರುವ ಜನರು ಆನಾರೋಗ್ಯದಿಂದ ಬಳಲುವ ಸಾಧ್ಯತೆ ಹೆಚ್ಚಿದೆ. ಇದೇ ಕಾರಣಕ್ಕೆ ತಜ್ಞರು ವಿಟಮಿನ್ ಸಿ ಹೆಚ್ಚಿರುವ ಆಹಾರ ಸೇವಿಸಬೇಕು ಎನ್ನುತ್ತಾರೆ. ಸಿಟ್ರಸ್ ಹಣ್ಣುಗಳಲ್ಲಿ ಅಂದರೆ, ನಿಂಬೆ, ಕಿತ್ತಳೆಯಂತಹ ಆಹಾರದಲ್ಲಿ ವಿಟಮಿನ್ ಸಿ ಹೆಚ್ಚಿರುತ್ತದೆ. ಇದರ ಜೊತೆಗೆ ದೊಡ್ಡ ಮೆಣಸಿನಕಾಯಿ, ಲೆಟಿಸ್ನಂತಹ ಆಹಾರಗಳನ್ನು ಸೇವಿಸಬಹುದು. ಇವು ಕೇವಲ ವಿಟಮಿನ್ ಸಿ ಯಿಂದ ದೇಹವನ್ನು ರಕ್ಷಿಸುವ ಜೊತೆಗೆ ದೇಹದಲ್ಲಿ ಕೆಟ್ಟ ಕೊಬ್ಬು ಸಂಗ್ರಹವನ್ನು ಶೇಖರಣೆ ಆಗುವುದನ್ನು ತಡೆಯುತ್ತದೆ.
ವಿಟಮಿನ್ ಬಿ6: ವಿಟಮಿನ್ ಬಿ6 ದೇಹದ ರೋಗ ನಿರೋಧಕ ವ್ಯವಸ್ಥೆ ಕಾರ್ಯಾಚರಣೆ ಸುಧಾರಣೆ ಮಾಡುತ್ತದೆ. ಇದು ಹೊರಗಿನ ಸೋಂಕಿನಿಂದ ದೇಹವನ್ನು ರಕ್ಷಿಸುತ್ತದೆ. ವಿಟನಿಮ್ ಬಿ6 ಬಾಳೆ ಹಣ್ಣು, ಆಲೂಗಡ್ಡೆ, ಕೋಳಿ ಮಾಂಸ, ಮೀನು ಮತ್ತು ಕಾಳುಗಳಲ್ಲಿ ಹೆಚ್ಚಿದ್ದು, ಅವುಗಳನ್ನು ಆಹಾರದ ಭಾಗವಾಗಿಸುವುದರಿಂದ ಪ್ರಯೋಜನವನ್ನು ಪಡೆಯಬಹುದು.
ವಿಟಮಿನ್ ಇ: ವಿಟಮಿನ್ ಇ ದೇಹಕ್ಕೆ ಪ್ರಭಾವಶಾಲಿ ಆ್ಯಂಟಿಆಕ್ಸಿಡೆಂಟ್ ರೀತಿ ವರ್ತಿಸುತ್ತದೆ. ಇದು ಬ್ಯಾಕ್ಟೀರಿಯಾ, ವೈರಸ್ ಮತ್ತು ಇತರ ಸೋಂಕಿನ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುತ್ತದೆ. ಅಲ್ಲದೇ ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರದಂತೆ ತಡೆಯುತ್ತದೆ. ವಿಟಮಿನ್ ಇ, ಸೂರ್ಯಕಾಂತಿ, ಬೀಜಗಳು, ಕಾಳುಗಳು, ಬಾದಾಮಿ, ಲೆಟಿಸ್, ನಟ್ಸ್ ಮುಂತಾದವುಗಳಲ್ಲಿ ಸಮೃದ್ಧವಾಗಿದೆ.