ಟೋಕಿಯೋ (ಜಪಾನ್): ಕೋವಿಡ್ 19 ಬಳಿಕ ಹೃದಯ ವೈಫಲ್ಯದ ಅಪಾಯವನ್ನು ಜಪಾನ್ ಸಂಶೋಧಕರ ತಂಡ ಅಂದಾಜಿಸಿದೆ. ಈ ಸಂಬಂಧ ಅಗತ್ಯ ಕ್ರಮ ಅಭಿವೃದ್ಧಿ ಪಡಿಸುವ ಅವಶ್ಯಕತೆ ಇದೆ ಎಂದು ತಿಳಿಸಿದೆ.
ಕೋವಿಡ್ ಸೋಂಕಿನಿಂದ ಚೇತರಿಕೆ ಬಳಿಕವೂ ಹೃದಯದಲ್ಲಿರುವ ವೈರಲ್ ಸೋಂಕಿನಿಂದಾಗಿ ಹೃದಯಾಘಾತದ ಅಪಾಯ ಹೆಚ್ಚಿಸುತ್ತದೆ. ಇದು ಯಾವುದೇ ಹೃದಯ ರೋಗದ ಅಭಿವೃದ್ಧಿಯ ಲಕ್ಷಣವನ್ನು ತೋರುವುದಿಲ್ಲ ಎಂದು ತಂಡ ತಿಳಿಸಿದೆ. ಜಪಾನ್ನ ಅತಿ ದೊಡ್ಡ ವಿಜ್ಞಾನ ಸಂಸ್ಥೆ ರಿಕೆನ್ ಸಂಶೋಧಕರು ಈ ಸಂಶೋಧನೆಯಲ್ಲಿ ಭಾಗಿಯಾಗಿದ್ದಾರೆ.
ಕೋವಿಡ್ 19 ಸಾಂಕ್ರಾಮಿಕತೆ ಬಳಿಕ ಹೃದಯಾಘಾತದ ಪ್ರಕರಣಗಳು ಗಮನಾರ್ಹ ಮಟ್ಟದಲ್ಲಿ ಏರಿಕೆ ಕಂಡಿವೆ. ಅದರಲ್ಲೂ ಆರೋಗ್ಯವಂತರು ಹೃತಯಾಘಾತಕ್ಕೆ ತುತ್ತಾಗುತ್ತಿರುವುದು ಆತಂಕ ಮೂಡಿಸಿದೆ. ಕೆಲ ಮಂದಿ ಈ ಹೃದಯಾಘಾತವೂ ಕೋವಿಡ್ ಲಸಿಕೆಯೊಂದಿಗೆ ಸಂಬಂಧ ಹೊಂದಿದೆ ಎಂದು ಆರೋಪಿಸಿದರೂ, ವಿಶ್ವ ಆರೋಗ್ಯ ಸಂಸ್ಥೆ, ಭಾರತದ ಐಸಿಎಂಅರ್ ಇದನ್ನು ತಳ್ಳಿ ಹಾಕಿದೆ. ಅವರ ಅಧ್ಯಯನದಲ್ಲಿ ಕೋವಿಡ್ ಲಸಿಕೆ ಪಡೆಯದವರೂ ಕೋವಿಡ್ನಿಂದ ಹೃದಯಾಘಾತಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿದೆ. ಆದ್ರೆ ಲಸಿಕೆಗಳು ಸುರಕ್ಷಿತವಾಗಿವೆ ಎಂದು ಸ್ಪಷ್ಟಪಡಿಸಿವೆ.
ಕೊರೊನಾ ವೈರಸ್ ಮೇಲ್ಮೈನ ಸ್ಪೈಕ್ ಪ್ರೊಟೋನ್ ವ್ಯಕ್ತಿಗಳ ಜೀವಕೋಶದ ಮೇಲ್ಮೈಯಲ್ಲಿರುವ ಎಸಿಇ2 ಗ್ರಾಹಕಗಳಿಗೆ ಲಗತ್ತಿಸಿದಾಗ ಈ ಸೋಂಕು ಉಂಟಾಗುತ್ತದೆ. ತಂಡವೂ ಬೇರೆ ಅಂಗಾಂಗಗಳಿಗಿಂತ ಹೃದಯದಲ್ಲಿ ಈ ಎಸಿಇ2 ಗ್ರಾಹಕಗಳು ಸಾಮಾನ್ಯವಾಗಿದೆ. ಕೆಲವು ಕೋವಿಡ್ ರೋಗಿಗಳಲ್ಲಿ ಹೃದಯದ ಕಾರ್ಯಾಚರಣೆ ಕಡಿಮೆಯಾಗಿದೆ. ಆದರೆ, ಈ ಕುರಿತು ಯಾಂತ್ರೀಕೃತ ಮಾಹಿತಿ ಬಗ್ಗೆ ಇನ್ನೂ ತಿಳಿದಿಲ್ಲ ಎಂದು ಅಧ್ಯಯನ ತಿಳಿಸಿದೆ.