ವಾಷಿಂಗ್ಟನ್: ಅಮೆರಿಕದಲ್ಲಿ ಹೃದಯರಕ್ತನಾಳದ ಕಾಯಿಲೆಯಿಂದ (ಸಿವಿಡಿ) ಸಾವಿಗೀಡಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆರಂಭಿಕ ವರ್ಷದಲ್ಲಿ ಕಾಡಿದ್ದ ಕೋವಿಡ್-19 ಸಾಂಕ್ರಾಮಿಕ ರೋಗಕ್ಕಿಂತಲೂ ಎಂದರೆ ಶೇಕಡಾ 6.2ರಷ್ಟು ಹೆಚ್ಚು ಜನ ಹೃದಯ ರಕ್ತನಾಳ ಕಾಯಿಲೆಯಿಂದಲೇ ಮೃತಪಡುತ್ತಿದ್ದಾರೆ ಎಂದು ಅಧ್ಯಯನವೊಂದು ಸ್ಪಷ್ಟಪಡಿಸಿದೆ.
2019ರಲ್ಲಿ 874,613 ಸಿವಿಡಿ ಸಂಬಂಧಿತ ಸಾವಿನ ಸಂಖ್ಯೆಯು 2020ರಲ್ಲಿ 928,741ಕ್ಕೆ ಏರಿಕೆಯಾಗಿದೆ. 2015ರಲ್ಲಿ ಅಪಾರ ಪ್ರಮಾಣದಲ್ಲಿ ಸಿವಿಡಿ ಸಾವುಗಳು ಸಂಭವಿಸಿವೆ. 2003ರಲ್ಲಿ ದಾಖಲಾದ ಹಾಗೂ ಇತ್ತೀಚಿನ ಸಿವಿಡಿ ಸಂಬಂಧಿತ ಸಾವುಗಳ ಸಂಖ್ಯೆ 910,000ಕ್ಕೆ ಏರಿಕೆಯಾಗಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಹೃದಯ ರೋಗ ಮತ್ತು ಪಾರ್ಶ್ವವಾಯು ಅಂಕಿ - ಅಂಶಗಳ ಬಗ್ಗೆ 2023ರ ಡೇಟಾ ಅಮೆರಿಕನ್ ಹಾರ್ಟ್ ಅಸೋಸಿಯೇಷನ್‌ನ ಅಧ್ಯಯನ ನಡೆಸಿ ಈ ಮಾಹಿತಿ ನೀಡಿದೆ. ಈ ಅಧ್ಯಯನದ ವರದಿಯನ್ನು ಸರ್ಕ್ಯುಲೇಷನ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.
"ಕಳೆದ ದಶಕದಲ್ಲಿ ಸಾವುಗಳ ಸಂಖ್ಯೆಯು ನಿಧಾನವಾಗಿ ಹೆಚ್ಚಾಗುತ್ತಿದೆ. ಆದರೆ, 2020ರವರೆಗಿನ ಅವಧಿಯನ್ನು ಪರಿಗಣಿಸಿದರೆ, ಪ್ರತಿ ವರ್ಷವೂ ಸಾವಿನ ಪ್ರಮಾಣದಲ್ಲಿ ಕುಸಿತ ಕಂಡು ಬಂದಿದೆ. ನಮ್ಮಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಇದು ಸೂಚಿಸುತ್ತಿದೆ. ಲಸಿಕೆಗಳು ಲಭ್ಯವಾಗುವ ಮೊದಲು ದೇಶ ಹಾಗೂ ವಿಶ್ವದಲ್ಲಿ ಎಲ್ಲ ವಯಸ್ಸಿನ ಜನರಿಗೆ ಕೋವಿಡ್ ಸಾಂಕ್ರಾಮಿಕ ಕಾಯಿಲೆ ಹರಡಿತ್ತು'' ಎಂದು ಸಾವೊ (Tsao)ವಿವರಿಸಿದ್ದಾರೆ.
ಸಾವಿನ ಪ್ರಕರಣಗಳು ಹೆಚ್ಚಳ:ಏಷ್ಯನ್, ಕಪ್ಪು ಮತ್ತು ಹಿಸ್ಪಾನಿಕ್ ಜನರಲ್ಲಿ ಸಿವಿಡಿ ಸಂಬಂಧಿತ ಸಾವಿನ ಪ್ರಕರಣಗಳು ಹೆಚ್ಚು ಕಂಡುಬರುತ್ತಿದೆ. ಸಾಂಕ್ರಾಮಿಕ ರೋಗದ ಆರಂಭಿಕ ದಿನಗಳಲ್ಲಿ ಹೆಚ್ಚು ಜನರ ಮೇಲೆ ಪರಿಣಾಮ ಬೀರಿತ್ತು. ಕೋವಿಡ್-19 ಕಾಯಿಲೆಯಂತೆ, ಹೃದಯ ರಕ್ತನಾಳ ರೋಗವೂ ಜನರನ್ನು ಹೆಚ್ಚು ಕಾಡಿದೆ. ಮತ್ತು ಅಮೆರಿಕ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ಯ ಪ್ರಾಥಮಿಕ ಮಾಹಿತಿ ಪ್ರಕಾರ, ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿಂದ ಸಾವುಗಳ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ.