ಕರ್ನಾಟಕ

karnataka

ETV Bharat / sukhibhava

ತಾಯಿ ಮತ್ತು ಮಗುವಿನ ಆರೋಗ್ಯದಲ್ಲಿ ಸಣ್ಣ ನಿದ್ರೆಯೂ ಪರಿಣಾಮಕಾರಿ: ಅಧ್ಯಯನ

ಆರೋಗ್ಯಯುತ ಅಭ್ಯಾಸಗಳ ಅಭಿವೃದ್ಧಿಯಲ್ಲಿ ತಾಯಿ ಮತ್ತು ಮಗುವಿನ ನಿದ್ದೆ ಪರಿಣಾಮಕಾರಿ ಮಾದರಿಯನ್ನು ಬಳಕೆ ಮಾಡಿ ಈ ಅಧ್ಯಯನ ನಡೆಸಲಾಗಿದೆ.

Little sleep can take toll on health of both mother and child: Study
Little sleep can take toll on health of both mother and child: Study

By

Published : Jul 22, 2023, 5:29 PM IST

ವಾಷಿಂಗ್ಟನ್​: ಮಗು ಜನಿಸಿದ ಮೊದಲೆರಡು ವರ್ಷ ಬಹಳ ನಿರ್ಣಾಯಕ ಅವಧಿಯಾಗಿದ್ದು, ಈ ಸಮಯದಲ್ಲಿ ಅನೇಕ ಆರೋಗ್ಯ ಅಭಿವೃದ್ಧಿಗಳು ಆಗುತ್ತದೆ. ಇದರಲ್ಲಿ ನಿದ್ದೆ ಕೂಡ ಪ್ರಮುಖವಾಗುತ್ತದೆ. ಈ ಹಿನ್ನೆಲೆ ಹೊಸ ಅಧ್ಯಯನವೊಂದು ತಾಯಿ ಮತ್ತು ನವಜಾತ ಮಗುವಿನ ನಿದ್ದೆಯ ಆರೋಗ್ಯಕರ ಕ್ರಮದ ಕುರಿತು ಅಧ್ಯಯನ ಮಾಡಿದೆ. ಈ ಕುರಿತು ಜರ್ನಲ್​ ಆಫ್​ ಡೆವಲಪ್ಮೆಂಟ್​ ಅಂಡ್​ ಬಿಹೇವಿಯರ್​ ಪಿಡಿಯಾಟ್ರಿಕ್ಸ್​ನಲ್ಲಿ ಪ್ರಕಟಿಸಲಾಗಿದೆ. ಅಧ್ಯಯನದಲ್ಲಿ ತಾಯಿ ಮತ್ತು ಶಿಶುವಿನ ನಿದ್ದೆ ಸಂಬಂಧವನ್ನು ಗಮನಿಸಲಾಗಿದೆ. ಹಾಗೇ ಇದು ಸಮಯ ಕಳೆದಂತೆ ಬದಲಾಗುತ್ತದೆಯಾ ಎಂದು ಗಮನಿಸಲಾಗಿದೆ ಎಂದು ಟಿಯಾನ್ಐಯಿಂಗ್​ ಕಾಯ್​ ತಿಳಿಸಿದ್ದಾರೆ.

ನಾವು ಎರಡು ವಿಶಿಷ್ಟ ಗುಂಪುಗಳನ್ನು ಪತ್ತೆ ಮಾಡಿದ್ದೇವೆ. ಕಡಿಮೆ ತಾಯಂದಿರ ನಿದ್ದೆ ಗುಂಪಿನಲ್ಲಿ ಅವರು ರಾತ್ರಿ ಕೇವಲ 5 ರಿಂದ 6 ಗಂಟೆ ಮಲಗುತ್ತಾರೆ ಮತ್ತು ಸರಾಸಾರಿ ತಾಯಂದಿರ ನಿದ್ದೆ ಗುಂಪಿನಲ್ಲಿ ಅವರು ನಿದ್ದೆ ಮಾರ್ಗದರ್ಶನದ ರಾಷ್ಟ್ರೀಯ ಶಿಫಾರಸಿನಂತೆ ರಾತ್ರಿ 7-8 ಗಂಟೆ ಮಲಗುತ್ತಾರೆ. ಕಡಿಮೆ ತಾಯಂದಿರ ನಿದ್ದೆ ಗುಂಪಿನಲ್ಲಿ ಮಕ್ಕಳು ಕೂಡ ಕಡಿಮೆ ಸಮಯ ಮಲಗುತ್ತಾರೆ. ಆದಾಗ್ಯೂ ತಾಯಂದಿರಲ್ಲಿ ಹೆಚ್ಚಿನ ವಿಭಿನ್ನತೆ ಕಂಡು ಬಂದಿಲ್ಲ ಎಂದಿದ್ದಾರೆ

464 ಶಿಶುಗಳ ತಾಯಂದಿರನ್ನು ಮಗು ಜನನದಿಂದ ಎರಡು ವರ್ಷಗಳ ಕಾಲ ಅಧ್ಯಯನ ನಡೆಸಲಾಗಿದೆ. ತಾಯಿಯಂದಿರು ಬೆಡ್​​ಟೈಮ್​ ದಿನಚರಿಯ ಸಮೀಕ್ಷೆಯನ್ನು ಪೂರ್ಣಯಿಸಿದ್ದಾರೆ. 3, 12,18 ಮತ್ತು 24 ತಿಂಗಳಲ್ಲಿ ಮಗುವಿನ ನಿದ್ದೆ ಅವಧಿ, ರಾತ್ರಿ ಎಚ್ಚರಗೊಳ್ಳುವಿಕೆ ಮತ್ತು ನಿದ್ದೆ ಸಮಸ್ಯೆಯನ್ನು ಇದು ಹೊಂದಿದೆ. ಕುಟುಂಬಗಳು ಸ್ಟಾಂಗ್​ ಕಿಡ್​ 2 ಕಾರ್ಯಕ್ರಮದ ಭಾಗವಾಗಿದೆ. ಇದು ಚಿಕ್ಕ ಮಕ್ಕಳಿಗೆ ಪೌಷ್ಟಿಕ ಮತ್ತು ಆರೋಗ್ಯಯುತ ಆಹಾರ ವ್ಯವಸ್ಥೆಯನ್ನು ಪೋಷಕರ ಮೂಲಕ ಉತ್ತೇಜಿಸುತ್ತದೆ. ಸ್ಟ್ರಾಂಗ್​ ಕಿಡ್​ ಡ ನಿರ್ದೇಶಕ ಬಾರ್ಬಾರ ಪೀಸೆ ಕೂಡ ಈ ಅಧ್ಯಯನಕ್ಕೆ ಕೊಡುಗೆ ನೀಡಿದ್ದಾರೆ.

ಕಡಿಮೆ ತಾಯಂದಿರ ನಿದ್ದೆ ಪ್ರೊಫೈಲ್​​ನಲ್ಲಿ ಅವರು ಸರಾಸರಿ 5.74 ಗಂಟೆ ನಿದ್ದೆಯನ್ನು ಮಗುವಿನ 3ನೇ ತಿಂಗಳಲ್ಲಿ ಮಾಡಿದ್ದಾರೆ. 12 ರಿಂದ 24ನೇ ತಿಂಗಳಲ್ಲಿ 5.9 ಗಂಟೆ ನಿದ್ದೆ ಮಾಡಿದ್ದಾರೆ. ಈ ವೇಳೆ, ಮಕ್ಕಳು ಕ್ರಮವಾಗಿ 9.6 ಮತ್ತು 10.52 ಗಂಟೆ ನಿದ್ದೆ ಪಡೆದಿದ್ದಾರೆ. ಸರಾಸರಿ ನಿದ್ದೆ ಪ್ರೊಫೈಲ್​ನಲ್ಲಿ ತಾಯಂದಿರುವ 7.31 ಗಂಟೆ ನಿದ್ದೆಯನ್ನು ಮಗುವಿನ 3ನೇ ತಿಂಗಳಲ್ಲಿ ತಾಯಂದಿರು ಮಾಡಿದ್ದು, 12ರಿಂದ 24 ತಿಂಗಳಲ್ಲಿ 7.28 ಗಂಟೆ ಮಾಡಿದ್ದಾರೆ. ಈ ವೇಳೆ ಮಗುವು 3ನೇ ತಿಂಗಳಲ್ಲಿ 9.99 ಗಂಟೆ ಮತ್ತು 12 ರಿಂದ 24ರಲ್ಲಿ 11 ಗಂಟೆ ನಿದ್ದೆ ಅವಧಿ ಇದೆ.

ಸಂಶೋಧಕರ ತಂಡ ಇದೇ ವೇಳೆ ತಾಯಂದಿರ ನಿದ್ದೆ ಮೌಲ್ಯದ ಪ್ರಭಾವದ ಅವಧಿಯನ್ನು ಪತ್ತೆ ಮಾಡಿದ್ದಾರೆ. ಇದರಲ್ಲಿ ಪ್ರಮುಖವಾಗಿ ಮಗುವು ರಾತ್ರಿ ಎಚ್ಚರಗೊಂಡು ವಾಕಿಂಗ್​ಗೆ ಕರೆದೊಯ್ಡಿದೆ. ಪದೇ ಪದೇ ಮಗು ಏಳುವುದರಿಂದ ಅಥವಾ ಮಗು ಕಿರುಚುವುದರಿಂದ ತಾಯಿ ಪದೇ ಪದೇ ಎಚ್ಚರಗೊಂಡಿದ್ದಾಳೆ ಎಂದು ತಿಳಿಸಿದೆ.

ಪೋಷಕರು ಮಗುವಿನ 3 ತಿಂಗಳ ಸಮಯದಲ್ಲಿ ಬೇಗ ಬೆಡ್​ಟೈಮ್​ ದಿನಚರಿ ರೂಢಿಸಿಕೊಳ್ಳುವುದರಿಂದ ಅವರ ನಿದ್ದೆಯ ಅವಧಿಯ ಅಭಿವೃದ್ಧಿ ಕಾಣಲಿದೆ. ಇದರಿಂದ ನಿದ್ದೆಯ ಸಮಸ್ಯೆ ಕಡಿಮೆ ಮಾಡಬಹುದು. ಪೋಷಕರು ಇದರಿಂದ ಹೆಚ್ಚು ಪ್ರಯೋಜನ ಪಡೆಯಬಹುದು. ಇದು ಪರಿಣಾಮಕಾರಿಯಾಗಿದೆ ಎಂಬುದು ಅವರಿಗೆ ಅರಿವು ಬರುವುದಿಲ್ಲ. ಕೆಲವು ವೇಳೆ ಬೆಡ್​​ಟೈಮ್​ ಸ್ಟೋರಿಗಳನ್ನು ರೂಢಿಸಿಕೊಳ್ಳುವುದರಿಂದ ಅವರ ಬೇಗ ನಿದ್ರೆಗೆ ಜಾರಬಹುದು. ಈ ವಯಸ್ಸಿನಲ್ಲಿ ಮಗುವಿಗೆ ಕಥೆಗಳು ಅರ್ಧವಾಗದಿದ್ದರೂ ನಿಮ್ಮ ಧ್ವನಿಯ ಏರಿಳಿತಗಳು ಅವಕ್ಕೆ ಹಿತ ಉಂಟು ಮಾಡುತ್ತದೆ. ಬೆಡ್​ ಟೈಮ್​ ಅಭ್ಯಾಸ ಮತ್ತು ನಿದ್ರೆ ಮಾದರಿ ರೂಢಿಸಿಕೊಳ್ಳುವುದು ಪ್ರತಿಯೊಬ್ಬರು ನಡೆಸಬಹುದಾಗಿದೆ. ನಿದ್ದೆ ಎಂಬುದು ಮಗುವಿನ ನರ ಅರಿವಿನನೊಂದಿಗೆ ಮತ್ತು ಆರೋಗ್ಯದೊಂದಿಗೆ ಅನೇಕ ಸಂಬಂಧ ಹೊಂದಿದೆ.

ಇದನ್ನೂ ಓದಿ: ಆತಂಕಕಾರಿ ಅಂಶ: ಪಂಜಾಬ್​ನಲ್ಲಿ ಮೂರು ತಿಂಗಳಲ್ಲೇ 87 ತಾಯಂದಿರ ಸಾವು... ಇದಕ್ಕೆ ಕಾರಣ ಏನು ಗೊತ್ತಾ?

ABOUT THE AUTHOR

...view details