ಕರ್ನಾಟಕ

karnataka

ETV Bharat / sukhibhava

ಜಾಗ್ರತೆ..! ಚಳಿಗಾಲದಲ್ಲಿ ಪಾರ್ಶ್ವವಾಯು - ಹೃದಯಾಘಾತದ ಪ್ರಮಾಣ ಹೆಚ್ಚಳ - ಚಳಿಗಾಲದಲ್ಲಿ ಪಾರ್ಶ್ವವಾಯು

ಈ ಋತುಮಾನದಲ್ಲಿ ಜನರು ಕಡಿಮೆ ನೀರು ಕುಡಿಯುತ್ತಾರೆ. ನೀರಿನ ಅಂಶ ಕಡಿಮೆಯಾಗುವುದರ ಪರಿಣಾಮ ರಕ್ತ ಪರಿಚಲನೆ ಮೇಲೆ ಪರಿಣಾಮ ಬೀರುತ್ತದೆ. ಇದು ಸ್ಟ್ರೋಕ್​ನಂತಹ ಸಮಸ್ಯೆಗೆ ಕಾರಣವಾಗುತ್ತದೆ.

ಚಳಿಗಾಲದಲ್ಲಿ ಪಾರ್ಶ್ವವಾಯು-ಹೃದಯಾಘಾತದ ಪ್ರಮಾಣ ಹೆಚ್ಚಳ
increased-incidence-of-stroke-and-heart-attack-in-winter

By

Published : Dec 9, 2022, 11:48 AM IST

ಮಳೆ , ಪಶ್ಚಿಮ ಶೀತ ಮಾರುತ, ಸ್ನೋಫಾಲ್​ನಿಂದಾಗಿ ಉತ್ತರ ಮತ್ತು ಪೂರ್ವ ಭಾರತದಲ್ಲಿ ಚಳಿ ನಿರಂತರವಾಗಿ ಹೆಚ್ಚಾಗುತ್ತಿದೆ. ಚಳಿ ಹೆಚ್ಚಾದಂತೆ ರೋಗಗಳ ಅಪಾಯವೂ ಹೆಚ್ಚಲಿದೆ. ಇಂತಹ ಚಳಿಗಾಲದಲ್ಲಿ ನಿಮ್ಮ ಬಗ್ಗೆ ಕಾಳಜಿವಹಿಸಬೇಕು. ಅನೇಕ ಚರ್ಮ ಸಮಸ್ಯೆ, ಟಾನ್ಸಿಲ್​, ಬ್ರಾಕಾಯ್ಟಿಸ್​, ಕೀಲು ನೋವು, ಚಳಿ - ಜ್ವರ, ಕಿವಿ ಸೋಂಕು, ಹೃದಯ ಕಾಯಿಲೆ, ಉಸಿರಾಟದ ಸಮಸ್ಯೆ, ಸ್ಟ್ರೋಕ್​ ಮುಂದಾದ ಸಮಸ್ಯೆಗಳು ಕಾಡುತ್ತದೆ. ಚಳಿಗಾಲದಲ್ಲಿ ಸ್ಟ್ರೋಕ್​ ಮತ್ತು ಹೃದಯಾಘಾತದಂತಹ ಸಮಸ್ಯೆಗಳು ಹೆಚ್ಚುತ್ತದೆ.

ಚಳಿ ಮಾರಾಣಾಂತಿಕ:ಚಳಿ ವಾತಾವರಣ ಮಾರಾಣಾಂತಿಕವಾಗಿದೆ ಎನ್ನುವುದನ್ನು ಸಾಬೀತು ಪಡಿಸಿದೆ. ಸಾಮಾನ್ಯ ದಿನಗಳಿಗಿಂತ ಈ ಸಮಯದಲ್ಲಿ ಆಸ್ಪತ್ರೆಗಳಲ್ಲಿ ಬ್ರೈನ್​ ಸ್ಟ್ರೋಕ್​ ಮತ್ತು ಹೃದಯಾಘಾತದಂತಹ ಘಟನೆಗಳು ಹೆಚ್ಚುತ್ತವೆ. ಈ ಕುರಿತು ಈಟಿವಿ ಜೊತೆ ಮಾತನಾಡಿರುವ ರಿಮ್ಸ್​ ಕ್ರಿಟಿಕಲ್​ ಕೇರ್​ ಮುಖ್ಯಸ್ಥ ಡಾ ಪ್ರದೀಪ್​ ಭಟ್ಟಾಚಾರ್ಯ, ಚಳಿಯಿಂದಾಗಿ ಅಪಧಮನಿ ಕುಗ್ಗುತ್ತದೆ ಎಂದಿದ್ದಾರೆ.

ರೋಗಿಗಳಲ್ಲಿ ರಕ್ತದೊತ್ತಡ ಹೆಚ್ಚುತ್ತದೆ. ರಕ್ರಸ್ರಾವ ಸಂಭವಿಸುತ್ತದೆ. ಇದು ಹೃದಯಾಘಾತದಲ್ಲೂ ಆಗುತ್ತದೆ. ಈ ಋತುಮಾನದಲ್ಲಿ ಜನರು ಕಡಿಮೆ ನೀರು ಕುಡಿಯುತ್ತಾರೆ. ನೀರಿನ ಅಂಶ ಕಡಿಮೆಯಾಗುವುದರ ಪರಿಣಾಮ ರಕ್ತ ಪರಿಚಲನೆ ಮೇಲೆ ಪರಿಣಾಮ ಬೀರುತ್ತದೆ. ಇದು ಸ್ಟ್ರೋಕ್​ನಂತಹ ಸಮಸ್ಯೆಗೆ ಕಾರಣವಾಗುತ್ತದೆ.

ವಯಸ್ಸಾದವರಿಗೆ ಹೆಚ್ಚಿನ ಪರಿಣಾಮ: ವಯಸ್ಸಾದವರು ಈ ಋತುಮಾನದಲ್ಲಿ ಮನೆಯಲ್ಲಿಯೇ ಇದ್ದು, ಬೆಚ್ಚಗಿನ ಉಡುಪು ಧರಿಸಬೇಕು. ಚಳಿ ಗಾಳಿ ಮನೆಯೊಳಗೆ ಬಾರದಂತೆ ಕಿಟಕಿ, ಬಾಗಿಲುಗಳನ್ನು ಮುಚ್ಚಬೇಕು. ಬಿಪಿ, ಶುಗರ್​ ಇರುವವರು ಮೆಡಿಸಿನ್​ ತಪ್ಪದೇ ತೆಗೆದುಕೊಳ್ಳಬೇಕು. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಅಗತ್ಯ ಇದ್ದಲ್ಲಿ ವೈದ್ಯರನ್ನು ಸಂಪರ್ಕಿಸಿ.

15-20ರಷ್ಟು ರೋಗಿಗಳಲ್ಲಿ ಅಪಾಯ; ಚಳಿಯಿಂದಾಗಿ ಬ್ರೈನ್​ ಸ್ಟ್ರೋಕ್​ ಮತ್ತು ಹಾರ್ಟ್​ ಅಟ್ಯಾಕ್​ ರೋಗಿಗಳಲ್ಲಿ 15 ರಿಂದ 20ರಷ್ಟು ಹೆಚ್ಚುತ್ತದೆ. ಹೀಗಾಗಿ ಇಂತಹವರು ಅತ್ಯಂತ ಜಾಗರೂಕರಾಗಿರಬೇಕು. ಹಾಗೂ ಮುನ್ನೆಚ್ಚರಿಕೆ ವಹಿಸಿ ಆರೋಗ್ಯ ಕಾಪಾಡಿಕೊಳ್ಳಬೇಕಿದೆ.

ಇದನ್ನೂ ಓದಿ:ಚಳಿಗಾಲದಲ್ಲಿ ನಿಮ್ಮನ್ನು ನೀವು ಬೆಚ್ಚಗಿಡಲು ಇಲ್ಲಿವೆ 5 ಸಲಹೆಗಳು

ABOUT THE AUTHOR

...view details