ಕರ್ನಾಟಕ

karnataka

ETV Bharat / sukhibhava

Wight Lose: ತೂಕ ಕಳೆದುಕೊಳ್ಳಬೇಕಾ, ಈ ವಿಷಯದ ಬಗ್ಗೆ ಇರಲಿ ಎಚ್ಚರ! - ನಕಾರಾತ್ಮಕ ಪರಿಣಾಮ

If you want to lose weight: ತೂಕ ನಷ್ಟ ಅನೇಕ ಮಂದಿಯ ಗುರಿಯಾದರೂ ಇದರ ಸಫಲತೆ ಸುಲಭವಲ್ಲ. ಇದಕ್ಕೆ ಕಾರಣ ನಮಗೆ ಗೊತ್ತಿಲ್ಲದೇ ಮಾಡುವ ಅನೇಕ ತಪ್ಪುಗಳು

if-you-want-to-lose-weight-be-careful-about-this-matter
if-you-want-to-lose-weight-be-careful-about-this-matter

By ETV Bharat Karnataka Team

Published : Sep 7, 2023, 5:15 PM IST

ತೂಕ ಕಡಿತಕ್ಕೆ ಎಷ್ಟೆಲ್ಲಾ ಸರ್ಕಸ್​ ಮಾಡಿದರೂ ನಾವು ಮಾಡುವ ಕೆಲವು ಅಭ್ಯಾಸಗಳು ಅದರ ಪರಿಣಾಮದ ಮೇಲೆ ನಮಗೆ ಗೊತ್ತಾಗದಂತೆ ನಕಾರಾತ್ಮಕ ಪರಿಣಾಮಗನ್ನ ಬೀರುತ್ತದೆ ಎನ್ನುತ್ತಾರೆ ತಜ್ಞರು. ವಿಶೇಷವಾಗಿ ಬೆಳಗಿನ ಸಮಯದಲ್ಲಿ ಮಾಡುವ ಕೆಲವು ತಪ್ಪುಗಳು ತೂಕದ ನಷ್ಟದ ಸಮಸ್ಯೆಗೆ ತೊಡಕಾಗುತ್ತದೆ. ಅಷ್ಟೇ ಅಲ್ಲದೇ, ಇದು ಆರೋಗ್ಯಕ್ಕೂ ಹಾನಿಕಾರಕವಾಗಿದೆ ಎಂದಿದ್ದಾರೆ.

ಕಾಫಿ- ಟೀ ಅಭ್ಯಾಸ: ಬೆಳಗಿನ ಹೊತ್ತು ಕಾಫಿ ಅಥವಾ ಟೀ ಸೇವನೆ ಮಾಡದೇ ದಿನ ಆರಂಭ ಆಗುವುದಿಲ್ಲ. ಇವು ನೈಸರ್ಗಿಕ ಮೂತ್ರವರ್ಧಕಗಳಾಗಿದೆ. ಬೆಳಗಿನ ಸಮಯದಲ್ಲಿ ಇವುಗಳ ಸೇವನೆಯಿಂದ ದೇಹದಲ್ಲಿನ ಅಧಿಕ ನೀರಿನ ಅಂಶ ಮೂತ್ರದ ಮೂಲಕ ಹೊರ ಹೋಗಿ ಇದು ನಿರ್ಜಲೀಕರಣಕ್ಕೆ ಗುರಿಯಾಗಿಸುತ್ತದೆ. ಫಲಿತಾಂಶವಾಗಿ ದೇಹದ ಚಯಪಚಯ ನಿಧಾನವಾಗುತ್ತದೆ. ಇದರಿಂದ ತೂಕ ನಷ್ಟದ ಬದಲಾಗಿ ತೂಕ ಹೆಚ್ಚಳವಾಗುತ್ತದೆ. ಈ ಅಭ್ಯಾಸ ಕೇವಲ ನಮ್ಮ ತೂಕ ನಷ್ಟಕ್ಕೆ ಮಾತ್ರ ಅಡ್ಡಿ ಅಲ್ಲ. ಇದು ಆರೋಗ್ಯಕ್ಕೂ ಉತ್ತಮವಲ್ಲ

ಕಾರ್ಬೋಹೈಡ್ರೇಟ್​​​​ ಕೊರತೆ: ಬೆಳಗಿನ ಸಮಯದಲ್ಲಿ ರುಚಿಕರ ಆಹಾರ ತಯಾರಿಸಿಕೊಳ್ಳಲು ಸಾಧ್ಯವಾಗದೇ ಅನೇಕ ಮಂದಿ ತಿಂಡಿಗೆ ಬ್ರೆಡ್​ ಮೊರೆ ಹೋಗುತ್ತಾರೆ. ಬೆಳಗಿನ ಹೊತ್ತಿನಲ್ಲಿ ಕಾರ್ಬೋಹೈಡ್ರೇಟ್​​ ಸಮೃದ್ಧ ಉಪಹಾರಗಳು ನಿಮ್ಮ ಬೆಳಗಿನ ಹೊಟ್ಟೆಯನ್ನು ಸಂಪೂರ್ಣವಾಗಿ ಭರಿಸುವುದಿಲ್ಲ. ಇದರಿಂದ ನಿಮಗೆ ಸಕ್ಕರೆ ಅಥವಾ ಸ್ನಾಕ್ಸ್​ ಮತ್ತಷ್ಟು ತಿನ್ನುವಂತೆ ಪ್ರೇರಪಣೆ ನೀಡುತ್ತದೆ. ಇದು ನಿಧಾನವಾಗಿ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಇದರ ಬದಲಾಗಿ ಕಾರ್ಬೋಹೈಡ್ರೇಟ್​ ಸಮೃದ್ಧಿ ಆಹಾರ, ಪ್ರೋಟಿನ್​ ಸಮೃದ್ಧಿ ಮೊಟ್ಟೆ, ಹಾಲು, ನಟ್ಸ್​, ಹಣ್ಣಿನ ಸ್ಮೂಥಿ, ಓಟ್ಸ್​​ನಂತಹ ಆಹಾರಗಳನ್ನು ತಿಂಡಿಯಲ್ಲಿ ಸೇವಿಸುವುದರಿಂದ ನಿಮ್ಮ ದೇಹದ ಹಾರ್ಮೋನ್​ ಮಟ್ಟ ಹೆಚ್ಚುತ್ತದೆ. ಫಲಿತಾಂಶವಾಗಿ ಹೊಟ್ಟೆ ಹಸಿವು ಕಡಿಮೆಯಾಗಿ, ಏನಾದರೂ ತಿನ್ನುವುದು ನಿಯಂತ್ರಣಗೊಳ್ಳುತ್ತದೆ.

ತೂಕಕ್ಕೆ ಪರ್ಯಾಯ: ಅನೇಕ ಮಂದಿ ತೂಕ ನಷ್ಟಕ್ಕೆ ಸಕ್ಕರೆ ಬದಲಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಪರ್ಯಾಯ ಕೃತಕ ಸಿಹಿಗೆ ಮೊರೆ ಹೋಗುತ್ತಾರೆ. ಆದರೆ, ಇವುಗಳನ್ನು ಪ್ರತಿನಿತ್ಯ ಸೇವಿಸುವುದು ದೇಹಕ್ಕೆ ಕ್ಯಾಲೋರಿ ಪ್ರಮಾಣವನ್ನು ಹೆಚ್ಚಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಈ ಹಿನ್ನೆಲೆ ಇದರ ಹೆಚ್ಚಿನ ಬಳಕೆಯನ್ನು ಕಡಿಮೆ ಮಾಡಬೇಕು. ಇದರ ಬದಲು ನೈಸರ್ಗಿಕ ಸಿಹಿಯಾದ ಜೇನುತುಪ್ಪ, ಖರ್ಜೂರ ಮುಂತಾದವು ಬಳಕೆ ಮಾಡಬಹುದು. ಇದು ತೂಕ ನಿಯಂತ್ರಣಕ್ಕೆ ಮತ್ತು ಉತ್ತಮ ಆರೋಗ್ಯಕ್ಕೆ ಸಹಾಯ ಮಾಡುತ್ತದೆ.

ಸ್ನಾಕ್ಸ್​ ಸಮಸ್ಯೆ: ಬೆಳಗಿನ ತಿಂಡಿ ಅಥವಾ ಮಧ್ಯಾಹ್ನದ ಊಟವಾಗಲಿ ಸಮಯಕ್ಕೆ ಸರಿಯಾಗಿ ಸೇವನೆ ಮಾಡದಿದ್ದರೆ, ಸಹಜವಾಗಿ ಹೆಚ್ಚು ಹಸಿವು ಕಾಡುತ್ತದೆ. ಈ ಸಮಯದಲ್ಲಿ ಸ್ನಾಕ್ಸ್​​ ಸೇವನೆಗೆ ಮನಸು ಪ್ರೇರೇಪಿಸುತ್ತದೆ. ತಜ್ಞರು ಹೇಳುವಂತೆ ಕೆಲವು ಸ್ನಾಕ್ಸ್​​ಗಳನ್ನು ದಿನದಲ್ಲಿ ಹಲವು ಸಮಯ ಸೇವನೆ ಮಾಡುವುದರಿಂದ ದೇಹದ ಇನ್ಸುಲಿನ್​ ಮಟ್ಟ ಹೆಚ್ಚುತ್ತದೆ. ಇದರಿಂದ ಕೊಬ್ಬು ಕೂಡ ನಿಧಾನವಾಗಿ ಹೆಚ್ಚುತ್ತದೆ. ಇದು ತೂಕ ನಷ್ಟದ ಬದಲಾಗಿ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಹೀಗಾಗಿ ನಿಮ್ಮ ದೇಹದ ಇನ್ಸುಲಿನ್​ ಅನ್ನು ನಿಯಂತ್ರಣದಲ್ಲಿ ಇಡಲು ಪದೇ ಪದೆ ಸ್ನಾಕ್ಸ್​ ಸೇವನೆ ಮಾಡುವ ಬದಲು ನಿಯಮಿತ ಊಟ ಮಾಡಿ. ನೀವು ಸ್ನಾಕ್ಸ್​ ತಿನ್ನ ಬೇಕು ಎಂದರೆ ಹಣ್ಣು, ನಟ್ಸ್​​, ತರಕಾರಿ ಸಲಾಡ್​, ಸೂಪ್​ ಆಯ್ಕೆ ಮಾಡುವುದು ಉತ್ತಮ.

ತಡವಾಗಿ ಏಳುವುದು: ಅನೇಕ ಮಂದಿ ರಜೆ ಇದ್ದಾಗ ಬೆಳಗ್ಗೆ ನಿಧಾನವಾಗಿ ಏಳುತ್ತಾರೆ. ಇದರಿಂದ ವ್ಯಾಯಾಮ, ತಿಂಡಿ, ಊಟ ಸೇರಿದಂತೆ ಎಲ್ಲ ಚಟುವಟಿಕೆಗಳು ತಡವಾಗುತ್ತದೆ. ತಜ್ಞರು ಹೇಳುವಂತೆ ಆರೋಗ್ಯಕ್ಕೆ ಏಳರಿಂದ ಎಂಟು ಗಂಟೆ ನಿದ್ದೆ ಅವಶ್ಯಕ. ನಿತ್ಯ ತಡವಾಗಿ ಏಳುತ್ತಿದ್ದರೆ, ನಿಮ್ಮ ದೇಹದ ತೂಕ ನಿಧಾನವಾಗಿ ಹೆಚ್ಚಾಗುತ್ತದೆ.

ತಜ್ಞರು ಹೇಳುವಂತೆ ವಿಟಮಿನ್​ D ಅನ್ನು ಸರಿಯಾದ ಪ್ರಮಾಣದಲ್ಲಿ ಪಡೆಯದೇ ಹೋದಾಗಲೂ ದೇಹದ ತೂಕ ಹೆಚ್ಚಾಗಬಹುದು. ಈ ಕಾರಣಕ್ಕೆ ಪ್ರತಿನಿತ್ಯ ಕನಿಷ್ಠ 20 ನಿಮಿಷ ಬಿಸಿಲಿನಲ್ಲಿ ನಿಲ್ಲಬೇಕು

ಬೆಳಗಿನ ವ್ಯಾಯಾಮದ ಅಡ್ಡಪರಿಣಾಮಗಳು ಕೂಡ ದೇಹದ ಮೇಕೆ ಭಾರೀ ಪರಿಣಾಮ ಬೀರುತ್ತದೆ. ತಜ್ಞರು ಹೇಳುವಂತೆ ಬೆಳಗಿನ ಹೊತ್ತು 20 ನಿಮಿಷದ ಸಣ್ಣ ವ್ಯಾಯಾಮ ಮಾಡಿ. ಇದರಿಂದ ತೂಕ ನಷ್ಟದ ನಿಮ್ಮ ಗುರಿ ಸಾಧಿಸಬಹುದು.

ಇದನ್ನೂ ಓದಿ:ತ್ವಚೆ ಸೌಂದರ್ಯಕ್ಕೆ ಸಹಾಯ ಮಾಡುತ್ತದೆ ಬೇಬಿ ಆಯಿಲ್​; ಹೇಗೆ?

ABOUT THE AUTHOR

...view details