ಹೈದರಾಬಾದ್: ಲಾಕ್‌ಡೌನ್, ನಿರ್ಬಂಧಗಳು ಮತ್ತು ಕೆಲಸದ ಬದಲಾವಣೆಗಳೊಂದಿಗೆ, ಜನರು ತಮ್ಮ ಜೀವನದಲ್ಲಿ ಸ್ವಲ್ಪ ಸಾಮಾನ್ಯತೆಯನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಬಿಕ್ಕಟ್ಟು ಗಾಢವಾಗುತ್ತಿದ್ದಂತೆ, ಮಿಶ್ರ ಭಾವನೆಗಳು, ಹತಾಶೆಯ ಭಾವನೆಗಳು, ಭಯ, ಅಭದ್ರತೆ, ಒತ್ತಡ, ಮತ್ತು ಮಹಿಳೆಯರಿಗೆ ಹೆಚ್ಚುವರಿ ಆರೈಕೆಯ ಜವಾಬ್ದಾರಿಗಳಿವೆ. ಮನೆಯಲ್ಲಿಯೇ ಇರುವಾಗ, ಸ್ವ-ಆರೈಕೆ ಮತ್ತು ಯೋಗಕ್ಷೇಮ ನಿರ್ವಹಿಸುತ್ತಾ ಲವಲವಿಕೆಯಿಂದ ಇರುವುದು ಮುಖ್ಯ.
ಹೀಗಾಗಿ ಸ್ವ ಆರೈಕೆಗಾಗಿ ಪಿಡಿ ಹಿಂದೂಜಾ ಆಸ್ಪತ್ರೆಯ ಕನ್ಸಲ್ಟೆಂಟ್ ಸೈಕಿಯಾಟ್ರಿಸ್ಟ್ ವಸಂತ್ ಮುಂದ್ರಾ ಕೆಲವು ಸಲಹೆಗಳನ್ನು ಹಂಚಿಕೊಂಡಿದ್ದಾರೆ.
ದೈಹಿಕವಾಗಿ ಸದೃಢರಾಗಿರಿ:
ದೈಹಿಕವಾಗಿ ಸದೃಢರಾಗಿದ್ದರೆ, ಉತ್ತಮವಾದ ಮನಸ್ಥಿತಿ ಹೊಂದುವ ಸಾಧ್ಯತೆಯಿದೆ. ಆದ್ದರಿಂದ ಸಕ್ರಿಯರಾಗಿರಿ. ವ್ಯಕ್ತಿಯ ಲವಲವಿಕೆಗೆ ಬೆಳಗ್ಗೆ ಸೂರ್ಯನ ಬೆಳಕು ಅತ್ಯಗತ್ಯ. ಎದ್ದು ಸ್ವಲ್ಪ ಸೂರ್ಯನ ಬೆಳಕನ್ನು ಪಡೆಯಿರಿ. ಅದು ಮನೆಯೊಳಗೆ ಇರಲಿ, ಟೆರೇಸ್‌ನಿಂದ, ಕಾರಿಡಾರ್‌ನಿಂದ ಅಥವಾ ಬಹುಶಃ ಎಲ್ಲೋ ಒಂದು ಕಾಂಪೌಂಡ್‌ನಲ್ಲಿರಲಿ, ಬೆಳಿಗ್ಗೆ ಸೂರ್ಯನ ಬೆಳಕನ್ನು ಪಡೆಯಿರಿ.
ದಿನಚರಿಯನ್ನು ಅನುಸರಿಸಿ:
ದಿನಚರಿ ಯಾವಾಗಲೂ ಬದಲಾವಣೆಯನ್ನು ನಿಭಾಯಿಸಲು ನಮಗೆ ಸಹಾಯ ಮಾಡುತ್ತದೆ. ಆರೋಗ್ಯಕರ ಆಹಾರ ಪದ್ಧತಿ, ವ್ಯಾಯಾಮ, ಉತ್ತಮ ನಿದ್ರೆ ಮತ್ತು ಧ್ಯಾನ ಅಥವಾ ವ್ಯಾಯಾಮಗಳನ್ನು ನಿಮ್ಮ ದಿನಚರಿಯಲ್ಲಿ ಸೇರಿಸಿ. ಇದು ಒತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ.
ಮನಸ್ಸೇ ಹಣ:
ಮನಸ್ಸು ಸರಿಯಾಗಿದ್ದರೆ, ಜೀವನವೂ ಸರಾಗವಾಗಿ ಸಾಗುತ್ತದೆ. ಹೀಗಾಗಿ ಮನಸ್ಸೇ ಹಣ ಎಂದು ಹೇಳಲಾಗುತ್ತದೆ. ಕೊರೊನಾ ವೈರಸ್ ಕುರಿತು ಆತಂಕವಿದ್ದರೆ, ಮನೆಯವರೊಂದಿಗೆ ಮಾತನಾಡಿ ಆತಂಕ ದೂರಗೊಳಿಸಿ. ಭಯ, ಕೋಪ, ಅಸೂಯೆ, ಆತಂಕವನ್ನು ತ್ಯಜಿಸಿ ಮನಸ್ಸಿನ ಆರೋಗ್ಯ ಕಾಪಾಡಿಕೊಳ್ಳಿ.
ನೈಜ ಮಾಹಿತಿ ಪಡೆಯಿರಿ:
ಜಾಗೃತಿ ಮತ್ತು ಜಾಗರೂಕರಾಗಿರುವುದು ಬಹಳ ಮುಖ್ಯ. ಆದರೆ ಎಲ್ಲ ಮೂಲೆಗಳಿಂದ ಬರುವ ಸುದ್ದಿ ಮತ್ತು ಮಾಹಿತಿಯ ಮಿತಿಮೀರಿದ ಪ್ರಮಾಣವು ನಿಮ್ಮನ್ನು ತುಂಬಾ ವಿಚಲಿತರನ್ನಾಗಿಸಬಹುದು ಮತ್ತು ಭಾವನಾತ್ಮಕವಾಗಿ ಬರಿದಾಗಿಸಬಹುದು. ಕೊರೊನಾ - ಸಂಬಂಧಿತ ಸುದ್ದಿಗಳು ಸುಳ್ಳು ಸುದ್ದಿಗಳೆಡೆಗೆ ಗಮನ ಹರಿಸದಿರಿ.