ಜಗತ್ತಿನ ಮುಂದೆ ನಿಮ್ಮನ್ನು ನೀವು ಹೇಗೆ ಪ್ರದರ್ಶಿಸಿಕೊಳ್ಳುತ್ತೀರಾ ಎಂಬುದು ಕೂಡ ಮುಖ್ಯವಾಗುತ್ತದೆ. ಆರೋಗ್ಯಯುತ ಮತ್ತು ಸುಂದರ ತ್ವಚೆ ಎಲ್ಲರ ಆದ್ಯತೆ. ಮೊಡವೆಗಳು ನಿಮ್ಮ ಮುಖದ ಅಂದಕ್ಕೆ ತೊಡಕಾಗುತ್ತದೆ. ಇದಕ್ಕೆ ಪರಿಹಾರ ಮಾರ್ಗ ಇಲ್ಲಿದೆ. ಈ ಸುಲಭ 10 ಉಪಾಯಗಳು ಮುಖದ ಮೊಡವೆ ಸಮಸ್ಯೆ ನಿವಾರಣೆಗೆ ಸಹಾಯ ಮಾಡುತ್ತದೆ.
ಮುಖದ ಸ್ವಚ್ಛತೆ: ಪ್ರತಿನಿತ್ಯ ದಿನಕ್ಕೆ ಎರಡು ಬಾರಿ ಮುಖವನ್ನು ಸೌಮ್ಯ ಕ್ಲೆನ್ಸರ್ ಸಹಾಯದಿಂದ ತೊಳೆಯಬೇಕು. ಇದರಿಂದ ಮುಖದಲ್ಲಿನ ಕೊಳೆ, ಎಣ್ಣೆ ಮತ್ತು ಅಶುದ್ಧತೆ ತೆಗೆದು ಹಾಕಲು ಸಾಧ್ಯ. ಮೊಡವೆಗಳು ಏಳಲು ಮುಖ್ಯ ಕಾರಣವೇ ಮುಖದ ರಂಧ್ರದಲ್ಲಿನ ಅಶುದ್ಧತೆ. ಇದೇ ವೇಳೆ ದಿನಕ್ಕೆ ಎರಡಕ್ಕಿಂತ ಹೆಚ್ಚು ಬಾರಿ ಮುಖ ತೊಳೆಯ ಬಾರದು ಎಂಬುದು ನೆನಪಿನಲ್ಲಿರಬೇಕು ಇದು ಕೂಡ ಮುಖದಲ್ಲಿನ ಮೊಡವೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.
ಹೈಡ್ರೇಟ್ ಆಗಿರಿ: ಮುಖದ ಚರ್ಮ ಒಳಗಿನಂದಲೇ ಹೈಡ್ರೇಟ್ ಆಗಿರುವುದು ಕೂಡ ಮುಖ್ಯವಾಗಿದೆ. ನಿಮ್ಮ ದೇಹ ನಿರ್ಜಲೀಕರಣಗೊಂಡರೆ, ನಿಮ್ಮ ಚರ್ಮ ಎಣ್ಣೆ ಗ್ರಂಧಿಗಳು ಹೆಚ್ಚಿನ ಎಣ್ಣೆ ಉತ್ಪಾದನೆ ಮೂಲಕ ಇದರ ಸೂಚನೆ ನೀಡುತ್ತದೆ. ತ್ವಚೆಯ ನೈಸರ್ಗಿಕ ಮಾಶ್ಚರೈಸರ್ ಸಮದೂಗಿಸಲು ಮತ್ತು ಶುದ್ಧ ತ್ವಚೆ ಹೊಂದಲು ಅಗತ್ಯ ಪ್ರಮಾಣದ ನೀರಿನ ಸೇವನೆ ಕೂಡ ಅವಶ್ಯ ಎಂಬುದನ್ನು ಮರೆಯಬಾರದು.
ಪೋಷಕಾಂಶ ಸಮೃದ್ಧ ಡಯಟ್: ಹಣ್ಣು, ತರಕಾರಿ ಮತ್ತು ಕಾಳುಗಳಲ್ಲಿ ವಿಟಮಿನ್ ಮತ್ತು ಮಿನರಲ್ಸ್ನಿಂದ ಕೂಡಿದ್ದು, ಚರ್ಮದ ಆರೈಕೆ ಮಾಡುವಲ್ಲಿ ಉತ್ತಮ ಸಮತೋಲಿತ ಆಹಾರ ಇದಾಗಿದೆ. ಇದರ ಜೊತೆಗೆ ಸಕ್ಕರೆ ಮತ್ತು ಗ್ರೀಸಿ ಆಹಾರಗಳ ಸೇವನೆಯನ್ನು ಕೂಡ ಕಡಿಮೆ ಮಾಡುವುದು ಅಗತ್ಯವಾಗಿದೆ.
ಕೈ ಶುದ್ಧತೆ: ಬಹುತೇಕ ಸಮಯ ಮುಖವನ್ನು ಕೈಗಳಿಂದ ಮುಟ್ಟುತ್ತಲೇ ಇರುತ್ತೇವೆ. ಈ ಹಿನ್ನೆಲೆ ಕೈ ಶುದ್ಧತೆ ಕಾಪಾಡುವುದು ಅಗತ್ಯ. ಶುಚಿಗೊಳಿಸದ ಕೈಗಳಿಂದ ಮುಖವನ್ನು ಮುಟ್ಟುವುದರಿಂದ ಬ್ಯಾಕ್ಟೀರಿಯಾಗಳು ಮುಖದಲ್ಲಿ ಬೆಳವಣಿಗೆ ಆಗಿ ಅದು ಮೊಡವೆಗೆ ಕಾರಣವಾಗುತ್ತದೆ.
ಮೇಕ್ಅಪ್ ಸಾಧನಗಳ ಶುಚಿತ್ವ: ಮೇಕಪ್ ಮಾಡಿಕೊಳ್ಳುವ ಬ್ರಶ್, ಸ್ಪಾಂಜ್ಗಳ ಶುದ್ಧತೆ ಕಾಪಾಡುವುದು ಕೂಡ ಅತಿ ಮುಖ್ಯವಾಗಿದೆ. ಅವುಗಳಲ್ಲಿ ಬ್ಯಾಕ್ಟೀರಿಯಾ ಬೆಳೆಯುವುದನ್ನು ತಡೆಗಟ್ಟುವುದರಿಂದ ಕೂಡ ಮೊಡವೆಗಳು ಆಗದಂತೆ ಕಾಪಾಡಿಕೊಳ್ಳಬಹುದು