ಹೈದರಾಬಾದ್: ಅನೇಕರಿಗೆ ಸಿಹಿ ತಿನಿಸುಗಳನ್ನು ತಿನ್ನದೆಯೇ ದೇಹದ ತೂಕವನ್ನು ಇಳಿಸಿಕೊಳ್ಳುವುದು ತುಂಬ ಕಷ್ಟಕರವಾಗಿರುತ್ತದೆ. ಹೀಗಾಗಿ ಹಲವರು ದೇಹದ ತೂಕದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರದ ಸಿಹಿ ಪದಾರ್ಥಗಳನ್ನು ಸೇವಿಸಲು ಅನ್ವೇಷಣೆ ನಡೆಸುತ್ತಿರುತ್ತಾರೆ. ಇದಕ್ಕೆ ಪರಿಹಾರವಾಗಿ ಸಂಸ್ಕರಿಸಿದ ಸಕ್ಕರೆ ಅಂಶ ಇರುವ ಆಹಾರ ಪದಾರ್ಥಗಳನ್ನು ಹೊರತು ಪಡಿಸಿ, ನೈಸರ್ಗಿಕ ಸಕ್ಕರೆ ಅಂಶವನ್ನು ಹೊಂದಿರುವ ಹಣ್ಣುಗಳನ್ನು ಸೇವಿಸಬಹುದಾಗಿದೆ. ದೇಹದ ತೂಕವನ್ನು ಇಳಿಸಿಕೊಳ್ಳಲು ಕಠಿಣ ಪರಿಶ್ರಮ ಪಡುತ್ತಿರುವವರು ಸಿಹಿಯನ್ನು ತ್ಯಜಿಸದೇ. ಈ ಹಣ್ಣುಗಳ ಸೇವನೆಯ ಮೂಲಕ ತೃಪ್ತಿಪಟ್ಟುಕೊಳ್ಳಬಹುದು. ಅಗಾದರೇ ಯಾವ್ಯಾವ ಹಣ್ಣುಗಳು ತೂಕ ಇಳಿಸಿಕೊಳ್ಳುವವರಿಗೆ ತಿನ್ನಲು ಸೂಕ್ತ ಎಂಬುದು ತಿಳಿದುಕೊಳ್ಳಿ.
ಬೆರ್ರಿ ಹಣ್ಣುಗಳು: ಬ್ಲೂಬೆರ್ರಿ, ಸ್ಟ್ರಾಬೆರಿ ಮತ್ತು ರಾಸ್ಪ್ಬೆರಿಗಳು ರುಚಿಕರವಾದ ಹಣ್ಣುಗಳಾಗಿದ್ದು, ಅವುಗಳನ್ನು ಊಟ ಅಥವಾ ತಿಂಡಿಯ ಜೊತೆಗೆ ಸೇವಿಸಬಹುದು. ಈ ಆಹ್ಲಾದಕರ ರಸಭರಿತ ಹಣ್ಣುಗಳು ಆಂಟಿ-ಒಬೆಸೊಜೆನಿಕ್ ಗುಣಲಕ್ಷಣಗಳನ್ನು ಹೊಂದಿವೆ ಎಂದು ಅಧ್ಯಯನಗಳಿಂದ ತಿಳಿದುಬಂದಿದೆ. ಇವುಗಳಲ್ಲಿ ವಿಟಮಿನ್‌ಗಳು, ಖನಿಜಗಳು, ಮ್ಯಾಂಗನೀಸ್ ಮತ್ತು ಉತ್ಕರ್ಷಣ ನಿರೋಧಕಗಳು ಹಾಗೂ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತವೆ. ಬೆರ್ರಿ ಹಣ್ಣುಗಳು ತುಂಬಾ ರುಚಿಕರವಾಗಿರುತ್ತವೆ. ಇವುಗಳನ್ನು ಸ್ಮೂಥಿಗಳು, ಸಲಾಡ್ಗಳು ಮತ್ತು ಬೇಯಿಸಿದ ಖಾದ್ಯಗಳ ಜೊತೆ ತಿನ್ನಬಹುದು.
ಕಿತ್ತಳೆ ಹಣ್ಣು: ಕಿತ್ತಳೆಯನ್ನು ನಮ್ಮ ನಿತ್ಯದ ಆಹಾರ ಜೊತೆ ಸೇವಿಸುವುದು ಸುಲಭವಾಗಿರುತ್ತದೆ ಮತ್ತು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಹಕಾರಿಯಾಗಿದೆ. ಇದಲ್ಲದೇ, ಸ್ಮೂಥಿಗಳು ಮತ್ತು ಸಲಾಡ್ಗಳಲ್ಲಿ ಕಿತ್ತಳೆಯನ್ನು ಬಳಸುವುದು ಆರೋಗ್ಯಕರವಾಗಿದೆ. ಕಿತ್ತಳೆ ನೈಸರ್ಗಿಕವಾಗಿ ಕಡಿಮೆ ಕ್ಯಾಲೊರಿಗಳು ಮತ್ತು ಹೆಚ್ಚಿನ ನಾರಿನಂಶವನ್ನು ಹೊಂದಿರುತ್ತದೆ. ಇವೆರಡೂ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಜೊತೆಗೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು, ಆರೋಗ್ಯಕರ ಜೀರ್ಣಕ್ರಿಯೆಗೆ ಅತ್ಯಗತ್ಯವಾಗಿದೆ. ದೇಹದ ಸರಿಯಾದ ಕಾರ್ಯನಿರ್ವಹಣೆಗೆ ವಿಟಮಿನ್ ಸಿ ಅವಶ್ಯಕಾಗಿದ್ದು ಇದು ಕಿತ್ತಳೆ ಹಣ್ಣಿನಲ್ಲಿ ಸಮೃದ್ಧವಾಗಿದೆ.