ವೃತ್ತಿ ಜೀವನದ ಬೆಳವಣಿಗೆ ಮತ್ತು ಗುರಿಗಳ ಸಾಧನೆಯಲ್ಲಿ ಆರೋಗ್ಯ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಆರೋಗ್ಯ ಎಂದಿಗೂ ನಿಮ್ಮ ವೃತ್ತಿಗೆ ತೊಡಕು ಆಗಬಾರದು. ಇನ್ನು ಇತ್ತೀಚನ ದಿನದಲ್ಲಿ ಹೆಚ್ಚಿನ ಜನರ ಮೇಲೆ ಕೆಲಸದ ಸ್ಥಳಗಳಲ್ಲೇ ತಮ್ಮ ಆರೋಗ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಿದ್ದಾರೆ. ಅದರಲ್ಲೂ ಮಧುಮೇಹ ಸಮಸ್ಯೆಗೆ ಸರಿಯಾದ ಯೋಜನೆ, ನಿಯಮಿತ ರಕ್ತದ ಸಕ್ಕರೆ ಮಟ್ಟ ಪರೀಕ್ಷೆ ನಡೆಸುವ ಮೂಲಕ ತಮ್ಮ ಕೆಲಸವನ್ನು ನಿಭಾಯಿಸಬೇಕಿದೆ.
ಭಾರತದಲ್ಲಿ ಪ್ರಸ್ತುತ 101 ಮಿಲಿಯನ್ ಮಂದಿ ಮಧುಮೇಹದಿಂದ ಬಳಲುತ್ತಿದ್ದು, 2019ಕ್ಕೆ ಹೋಲಿಕೆ ಮಾಡಿದಾಗ ಈ ಸಂಖ್ಯೆ 77 ಮಿಲಿಯನ್ ಹೆಚ್ಚಾಗಿದೆ. ಮಧುಮೇಹವೂ ದೀರ್ಘ ಜೀವನಶೈಲಿಯ ಪರಿಸ್ಥಿತಿಯಾಗಿದ್ದು, ಭವಿಷ್ಯದ ಆರೋಗ್ಯ ಅಪಾಯ ಎದುರಾಗದಂತೆ ಇದನ್ನು ನಿರ್ವಹಣೆ ಮಾಡಬೇಕಿದೆ. ಡೆಸ್ಕ್ ಕೆಲಸ ಮಾಡುವವರಿಗೆ ಇದರ ನಿರ್ವಹಣೆ ಸವಾಲಿನಿಂದ ಕೂಡಿರುತ್ತದೆ. ದೀರ್ಘ ಕಾಲದ ಕುಳಿತುಕೊಳ್ಳದಂತೆ ಸೇರಿದಂತೆ ಇನ್ನಿತರ ಜೀವಶೈಲಿ ಬದಲಾವಣೆಯನ್ನು ಅವರಿಗೆ ಮಾಡಬೇಕಿದೆ. ಮಧುಮೇಹವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದು. ಉತ್ತಮ ಆರೋಗ್ಯ ಸರಿಯಾದ ವೇಳಾಪಟ್ಟಿ ಅನುಸರಿಸುವುದು ನಿರ್ಣಾಯಕವಾಗಿದೆ ಎಂದು ಹೈದರಾಬಾದ್ ಅಪೋಲೊ ಆಸ್ಪತ್ರೆಯ ವೈದ್ಯ ಡಾ ರವಿ ಶಂಕರ್ ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ಕೆಲಸದ ಸ್ಥಳದಲ್ಲಿ ಈ ಕ್ರಮಗಳ ನಿರ್ವಹಣೆ ಅವಶ್ಯಕವಾಗಿದೆ
ಸೂಕ್ತ ಯೋಜನೆ: ಕೆಲಸದ ಪ್ರಯಾಣ ಶುರು ಮಾಡುವ ಮೊದಲೇ ನಿಮ್ಮ ಮಧುಮೇಹ ನಿರ್ವಹಣೆ ಕುರಿತು ಯೋಜನೆ ರೂಪಿಸಿ. ರಾತ್ರಿ ಉತ್ತಮ ನಿದ್ರೆ, ಬೆಳಗಿನ ಯೋಜನೆ, ತಿಂಡಿ ತಪ್ಪಿಸದಂತೆ ಡಯಟ್ ಪ್ಲಾನ್ ಸೇರಿದಂತೆ ಸಕ್ಕರೆ ಮಟ್ಟ ನಿರ್ವಹಣೆ ಮಾಡಿ.
ಕುರುಕಲು ಬಗ್ಗೆ ಇರಲಿ ಗಮನ: ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳ ಜೊತೆ ಅನೇಕ ಬಾರಿ ಬಾಯಿ ಮೆಲುಕು ಹಾಕುವುದು ಸಾಮಾನ್ಯ. ಈ ವೇಳೆ ಅನಾರೋಗ್ಯಕರ ಆಹಾರವೇ ಹೆಚ್ಚು ಸೇವನೆ ಮಾಡುತ್ತೇವೆ ಈ ಹಿನ್ನಲೆ ಆರೋಗ್ಯಕರ ಆಹಾರಗಳಿಗೆ ಒತ್ತು ನೀಡಿ. ಹಣ್ಣು, ಸಲಾಡ್, ನಟ್ಸ್, ಯೋಗರ್ಟ್ಗಳ ಸೇವನೆ ಮಾಡುವುದು ಉತ್ತ. ಜೊತೆಗೆ ದೇಹವನ್ನು ನಿರ್ಜಲೀಕರಣಕ್ಕೆ ಒಳಗಾಗದಂತೆ ನೋಡಿಕೊಳ್ಳಿ ಜೊತೆಗೆ ಸಕ್ಕರೆ ಮತ್ತು ಕೆಫೆನ್ ಪಾನೀಯ ಸೇವಿಸುವಾಗ ಹೆಚ್ಚಿನ ಗಮನವಹಿಸುವುದು ಅವಶ್ಯ