ಲಂಡನ್:ಕೋವಿಡ್ 19 ಸಾಂಕ್ರಾಮಿಕಕ್ಕೂ ಮುಂಚಿನಿಂದಲೂ ಆಗಾಗ್ಗೆ ಆ್ಯಂಟಿಬಯೋಟಿಕ್ ಮಾತ್ರೆಗಳನ್ನು ಬಳಕೆ ಮಾಡುವವರಲ್ಲಿ ಸಾವು ಸೇರಿದಂತೆ ಸೋಂಕಿನ ಅಪಾಯವು ಗಮನಾರ್ಹ ಮಟ್ಟದಲ್ಲಿ ಅಭಿವೃದ್ಧಿ ಹೊಂದುವ ಸಾಧ್ಯತೆ ಇದೆ ಎಂದು ಹೊಸ ಅಧ್ಯಯನ ಎಚ್ಚರಿಕೆ ನೀಡಿದೆ. ಜರ್ನಲ್ ಇಕ್ಲಿನಿಕಲ್ ಮೆಡಿಸಿನ್ನಲ್ಲಿ ಅಧ್ಯಯನ ವರದಿ ಪ್ರಕಟವಾಗಿದೆ. ಇದರಲ್ಲಿ ಆ್ಯಂಟಿಬಯೋಟಿಕ್ ಮಾತ್ರೆಗಳನ್ನು ಅತಿ ಹೆಚ್ಚು ಬಳಕೆ ಮಾಡುವ ಜನರಿಗೆ ಸೂಚನೆ ನೀಡಲಾಗಿದೆ.
ಮಂಚೆಸ್ಟರ್ ಯುನಿವರ್ಸಿಟಿಯ ಸಂಶೋಧಕರು, ಕಳೆದ ಮೂರು ವರ್ಷಗಳಲ್ಲಿ ಆಗಾಗ್ಗೆ ಆ್ಯಂಟಿಬಯೋಟಿಕ್ ಬಳಕೆ ಮಾಡುವ ರೋಗಿಗಳು ಆಸ್ಪತ್ರೆಯ ದಾಖಲಾಗುವ ಮತ್ತು 30 ದಿನಗಳ ಸಾವು ಸೇರಿದಂತೆ ತೀವ್ರವಾದ ಕೋವಿಡ್ ಫಲಿತಾಂಶಗಳನ್ನು ಅನುಭವಿಸುವ ಹೆಚ್ಚಿನ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಕೋವಿಡ್ ರೋಗಿಗಳ ಮೇಲೆ ಅಧ್ಯಯನ: ಕೋವಿಡ್ ಸಂಬಂಧಿ ಸಾವು ಪ್ರಕರಣದಲ್ಲಿ ಆಸ್ಪತ್ರೆಗೆ ದಾಖಲಾದ ರೋಗಿಗಳಲ್ಲಿ ಆ್ಯಂಟಿಬಯೋಟಿಕ್ ಬಳಕೆ ಪ್ರಮಾಣ ಶೇ 1.34 ರಷ್ಟು ಹೆಚ್ಚಿದೆ. ಸೋಂಕಿಗಿಂತ ಮುಂಚಿನ ವರ್ಷಗಳಲ್ಲೇ ಅಧಿಕ ಆ್ಯಂಟಿಬಯೋಟಿಕ್ ಸೇವನೆ ಇತಿಹಾಸ ಹೊಂದಿರುವವರು ಶೇ 1.8ರಷ್ಟು ಅಪಾಯ ಹೊಂದಿರುತ್ತಾರೆ.
ಈ ಅಧ್ಯಯನ ಸಂಬಂಧ ತಂಡವು ಇತ್ತೀಚಿಗೆ ಕೋವಿಡ್ ಸೋಂಕಿಗೆ ಒಳಗಾದ 0.67 ಮಿಲಿಯನ್ ರೋಗಿಗಳ ಮಾದರಿ ಪಡೆದಿದೆ. ಇದರಲ್ಲಿ 98,420 ರೋಗಿಗಳು ಆಸ್ಪತ್ರೆಗೆ ದಾಖಲಾದರೆ, 22,660 ಆಸ್ಪತ್ರೆಗೆ ದಾಖಲಾದ ರೋಗಿಗಳು ಸಾವನ್ನಪ್ಪಿದ್ದಾರೆ. 55 ವಿಶಿಷ್ಟ ಆ್ಯಂಟಿಬಯೋಟಿಕ್ ಅನ್ನು ಅವರಿಗೆ ಶಿಫಾರಸು ಮಾಡಲಾಗಿದೆ.
ಆ್ಯಂಟಿಬಯೋಟಿಕ್ ಬಳಕೆಯು ವೈರಸ್‌ಗಳು ಅಥವಾ ಬ್ಯಾಕ್ಟೀರಿಯಾಗಳಿಂದ ಸೋಂಕಿಗೆ ಒಳಗಾಗುವ ರೋಗಿಗಳಲ್ಲಿ ಗಂಭೀರ ಅಪಾಯದ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಇದು ಸೋಂಕಿನ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಹೆಚ್ಚಿಸುತ್ತದೆ ಎಂದು ಮ್ಯಾಂಚೆಸ್ಟರ್ ಯುನಿವರ್ಸಿಟಿಯ ಪ್ರೊ. ಜೆರ್ಡ್ ವಾನ್ ಸ್ಟಾ ತಿಳಿಸಿದ್ದಾರೆ.
ಕರುಳಿನ ಸೂಕ್ಷ್ಮಾಣುಗಳ ಮೇಲೆ ಪರಿಣಾಮ: ಆ್ಯಂಟಿ ಬಯೋಟಿಕ್ ಚಿಕಿತ್ಸೆಯೂ ಕರುಳಿನ ಸೂಕ್ಷ್ಮಜೀವಿ, ಚಯಾಪಚಯ ಮತ್ತು ಪ್ರತಿರೋಧಕ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಇದೇ ವೇಳೆ ತಿಳಿಸಿದ್ದಾರೆ. ಬಹುತೇಕ ಪರಿಸ್ಥಿತಿಗಳನ್ನು ಆ್ಯಂಟಿಬಯೋಟಿಕ್ ಕೋರ್ಸ್ ನಿಲ್ಲಿಸಿದ ಬಳಿಕ ಕರುಳಿನ ಸೂಕ್ಷ್ಮಜೀವಿಗಳ ಚೇತರಿಕೆ ಕಂಡುಬಂದಿದೆ. ಆಗಾಗ್ಗೆ ಆ್ಯಂಟಿಬಯೋಟಿಕ್ ಬಳಕೆ ಮಾಡುವುದರಿಂದ ಕರುಳಿನ ಸೂಕ್ಷ್ಮ ಜೀವಿಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದಿದ್ದಾರೆ.
ಮರುಕಳಿಸುವ ಪ್ರತಿಜೀವಕ ಮಾನ್ಯತೆ ಸೋಂಕು-ಸಂಬಂಧಿತ ತೊಡಕುಗಳನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿದೆ ಎಂದು ಸೂಚಿಸಲು ಕಡಿಮೆ ಪುರಾವೆಗಳಿವೆ ಎಂದು ಡಾ. ವಿಕ್ಟೋರಿಯಾ ಪಾಲಿನ್ ತಿಳಿಸಿದ್ದಾರೆ. ಇದು ಅಸುರಕ್ಷಿತ ಎಂಬುದಕ್ಕೆ ಅನೇಕ ಸಾಕ್ಷ್ಯಗಳಿವೆ. ಇದೇ ಕಾರಣಕ್ಕೆ ದೀರ್ಘಕಾಲದ ಆ್ಯಂಟಿ ಬಯೋಟಿಕ್ ಬಳಕೆ ಪರಿಣಾಮಗಳು ಪ್ರತಿಕೂಲಕರವಾಗಿರುವುದಿಲ್ಲ. ಇವು ಗಂಭೀರ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಇವುಗಳ ಬಳಕೆಯ ಬಗ್ಗೆ ಅರಿವು ಹೊಂದಿರಬೇಕು ಎಂದು ಅವರು ಇದೇ ವೇಳೆ ಸಲಹೆ ನೀಡಿದ್ದಾರೆ. ಪದೇ ಪದೇ ಈ ರೀತಿಯ ಆ್ಯಂಟಿಬಯೋಟಿಕ್ ಮಾತ್ರೆಗಳನ್ನು ಶಿಫಾರಸು ಮಾಡುವುದನ್ನು ಪ್ರೋತ್ಸಾಹಿಸುವುದಿಲ್ಲ ಎಂದೂ ಹೇಳಿದ್ದಾರೆ.
ಇದನ್ನೂ ಓದಿ: Rising Alarm: ಕೋವಿಡ್ ಬಳಿಕ ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹ ಪ್ರಕರಣ; ವರದಿ