ಡಯಾಬಿಟಿಸ್ ನಿಮ್ಮ ಅನೇಕ ನೆಚ್ಚಿನ ತಿಂಡಿಗಳಿಂದ ನಿಮ್ಮನ್ನು ದೂರ ಇಡುತ್ತದೆ. ಆದರೆ, ಆರೋಗ್ಯಕರ ಆಹಾರ ಶೈಲಿಯು ನಿಮ್ಮನ್ನು ಈ ಚಿಂತೆಯಿಂದ ಮುಕ್ತಿಗೊಳಿಸುತ್ತದೆ. ಇದಕ್ಕೆ ಅಗತ್ಯವಾದ ಡಯಟ್ ಪ್ಲಾನ್ ಮಾಡುವುದು ಅವಶ್ಯ.
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣ ಮಾಡುವ ಜೊತೆ ಜೀವನ ಶೈಲಿಯಲ್ಲಿನ ಕೆಲವು ಬದಲಾವಣೆ ನಡೆಸುವುದು ಅವಶ್ಯ. ರಕ್ತದ ಸಕ್ಕರೆ ಮಟ್ಟದಲ್ಲಿ ಆಹಾರ ಸಾಕಷ್ಟು ಪ್ರಮುಖ ಪಾತ್ರವಹಿಸುತ್ತದೆ. ಡಯಾಬೀಟಿಸ್ ಹೊಂದಿರುವ ಜನರು ತಮ್ಮ ಡಯಟ್ ಪ್ಲಾನ್ ಜೊತೆ ಯಾವಾಗ ಮತ್ತು ಏನು ಊಟಮಾಡಬೇಕು ಎಂಬುದಕ್ಕೆ ಹೆಚ್ಚು ಗಮನಹರಿಸುತ್ತಾರೆ. ಡಯಾಬಿಟಿಸ್ ನಿರ್ವಹಣೆ ಮಾಡಲು ದೈನದಿಂದ ಆಹಾರ ಕ್ರಮದ ಬಗ್ಗೆ ಜಾಗರೂಕರಾಗಿರುವ ಜೊತೆ ಅದನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸುತ್ತಿದ್ದೇವಾ ಎಂಬುದನ್ನು ನಿರ್ವಹಣೆ ಮಾಡಬೇಕಾಗುತ್ತದೆ.
ಪ್ರಮಾಣೀಕೃತ ಫಾಸ್ಟ್ ಅಂಡ್ ಅಪ್ ಆರೋಗ್ಯ ಮತ್ತು ಸ್ವಾಸ್ಥ್ಯ ತರಬೇತುದಾರರಾದ ಪ್ರತಿಭಾ ಶರ್ಮಾ ಕೆಲವು ರುಚಿಕರ ಪಾಕವಿಧಾನವನ್ನು ಹಂಚಿಕೊಂಡಿದ್ದು, ನಿಮ್ಮ ಡಯಟ್ ಪ್ಲಾನ್ ಮತ್ತು ಆರೋಗ್ಯಕ್ಕೆ ಇವು ಸಹಾಯ ಮಾಡುತ್ತದೆ.
ಮೆಕ್ಸಿಕನ್ ವೆಜಿಟೇಬಲ್ ಸಲಾಡ್
ಇದಕ್ಕೆ ಬೇಕಾಗುವ ಸಾಮಗ್ರಿಗಳು: ಎಕ್ಸ್ಟ್ರಾ ವರ್ಜಿನ್ ಆಯಿಲ್ 2 ಟಿ ಸ್ಪೂನ್, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ಎರಡು ಜಜ್ಜಿದ ಬೆಳ್ಳುಳ್ಳಿ, ಓರೆಗಾನೊ 2 ಟಿ. ಸ್ಪೂನ್, ನಿಂಬೆ ರಸ 3 ಟಿ. ಸ್ಪೂನ್, ಜೀರಿಗೆ ಪುಡಿ ಮುಕ್ಕಾಲು ಚಮಚ, ಚಿಲ್ಲಿ ಫ್ಲೆಕ್ಸ್ ಕಾಲು ಚಮಚ,
ಸಲಾಡ್ಗೆ: ಲೆಟಿಸ್ 200 ಗ್ರಾಂ, ಟೊಮಟೋ 3 ರಿಂದ 4, ಕಾರ್ನ್ ಕಾಲು ಕಪ್, ಬೇಯಿಸಿದ ಕಿಡ್ನಿ ಬೀನ್ಸ್ ಅರ್ಧ ಕಪ್, ಬೆಲ್ ಪೆಪ್ಪರ್
ತಯಾರಿಸುವ ವಿಧಾನ ಹೀಗೆ..ಪಾತ್ರೆಗೆ ಆಲಿವ್ ಆಯಿಲ್, ಕೊತ್ತಂಬರಿ, ಬೆಳ್ಳುಳ್ಳಿ, ಓರೆಗಾನ್, ನಿಂಬೆ ರಸ, ಜೀರಿಗೆ ಪುಡಿ ಮತ್ತು ಚಿಲ್ಲಿ ಫ್ಲೆಕ್ಸ್ ಅನ್ನು ಸೇರಿಸಿ ಅದನ್ನು ಚೆನ್ನಾಗಿ ಕಲಸಿ.
ಕತ್ತರಿಸಿದ ಲೆಟಿಸ್, ಟೊಮಟೋ, ಬೆಲ್ ಪೆಪ್ಪರ್, ಕಾರ್ನ್ ಮತ್ತು ಬೇಯಿಸಿದ ಕಿಡ್ನಿ ಬೀನ್ಸ್ ಅನ್ನು ಅದಕ್ಕೆ ಮಿಕ್ಸ್ ಮಾಡಿದರೆ ಮೆಕ್ಸಿಕನ್ ಸಲಾಡ್ ಸಿದ್ದ.
ಸ್ಟೈರ್ ಫ್ರೈ ತೋಫು
ಬೇಕಾಗುವ ಸಾಮಗ್ರಿಗಳು:ಆಲಿವ್ ಆಯಿಲ್ 2 ಟಿ.ಸ್ಪೂನ್, ತೋಫು 2 ಟಿ.ಸ್ಪೂನ್ ಸೋಯಾ ಸಾಸ್ 2 ಟಿ ಸ್ಪೂನ್, ಬ್ರಕೋಲಿ 1 ಕಪ್, ಮಶ್ರೂಮ್ 8 ರಿಂದ 10, ಎಳ್ಳು 2 ಸ್ಪೂನ್, ಬೇಯಿಸಿದ ಬ್ರೋನ್ ರೈಸ್ 120 ಗ್ರಾಂ,