ಕರ್ನಾಟಕ

karnataka

ETV Bharat / sukhibhava

ಹೃದಯಾಘಾತದ ಅಪಾಯವನ್ನು ಹೆಚ್ಚಿಸಿಲ್ಲ ಕೋವಿಶೀಲ್ಡ್​​ ಮತ್ತು ಕೋವಾಕ್ಸಿನ್​ ಲಸಿಕೆ; ಅಧ್ಯಯನ - ಕೊವಾಕ್ಸಿನ್​ ಲಸಿಕೆಗಳು ಯಾವುದೇ ಹೃದಯಾಘಾತ

ಕೋವಿಡ್​ ಸಾಂಕ್ರಾಮಿಕತೆ ಬಳಿಕ ಹೃದಯಘಾತ ಪ್ರಕರಣ ಹೆಚ್ಚಳವಾಗಿದ್ದು, ಲಸಿಕೆಯೊಂದಿಗೆ ಇದರ ಸಂಬಂಧ ಕುರಿತು ಅಧ್ಯಯನ ನಡೆಸಲಾಗಿದೆ.

CoviShield and Covaxin vaccine did not increase the risk of heart attack
CoviShield and Covaxin vaccine did not increase the risk of heart attack

By ETV Bharat Karnataka Team

Published : Sep 4, 2023, 2:31 PM IST

ನವದೆಹಲಿ: ಕೋವಿಡ್​ 19 ವಿರುದ್ಧ ನೀಡಲಾದ ಕೋವಿಶೀಲ್ಡ್​ ಮತ್ತು ಕೊವಾಕ್ಸಿನ್​ ಲಸಿಕೆಗಳು ಯಾವುದೇ ಹೃದಯಾಘಾತದ ಅಪಾಯವನ್ನು ಹೆಚ್ಚಿಸಿಲ್ಲ ಎಂದು ಅಧ್ಯಯನ ತಿಳಿಸಿದೆ.

ದೆಹಲಿಯ ಜಿಬಿ ಪಂತ್​​ ಆಸ್ಪತ್ರೆ ವೈದ್ಯರು ನಡೆಸಿದ ಅಧ್ಯಯನದಲ್ಲಿ, ಕೋವಿಡ್​ 19 ಲಸಿಕೆಗಳು ಅಕ್ಯೂಟ್​ ಮಯೋಕಾರ್ಡಿಯಲ್​ ಇನ್ಫ್ರಾಕ್ಷನ್​ (ಎಎಂಐ) ಅಥವಾ ಹೃದಯಾಘಾತದ ಪರಿಣಾಮ ಕುರಿತು ಅಧ್ಯಯನ ನಡೆಸಲಾಗಿದೆ.

ಸಾಂಕ್ರಾಮಿಕತೆ ಬಳಿಕ ಹೃದಯಘಾತ ಪ್ರಕರಣ ಹೆಚ್ಚಳವಾಗಿದ್ದು, ಲಸಿಕೆಯೊಂದಿಗೆ ಇದರ ಸಂಬಂಧ ಕುರಿತು ಅಧ್ಯಯನ ನಡೆಸಲಾಗಿದೆ.

ಕೋವಿಡ್​ 19 ಲಸಿಕೆ ಪಡೆದ 30ರಿಂದ ಆರು ತಿಂಗಳವರೆಗೆ ಎಎಂಐ ಸೇರಿದಂತೆ ಎಲ್ಲಾ ಕಾರಣದ ಸಾವಿನ ಪ್ರಮಾಣವನ್ನು ಕಡಿಮೆ ಮಾಡಿದೆ ಎಂದು ತೋರಿಸಿದೆ ಎಂದು ಗೋವಿಂದ್​ ಬಲ್ಲಬ್​​ ಪಂತ್​​ ಸಂಸ್ಥೆಯ ಹೃದ್ರೋಗ ತಜ್ಞ ಸಂಶೋಧಕರಾಗಿರುವ ಡಾ ಮೋಹಿತ್​ ಡಿ ಗುಪ್ತಾ ತಿಳಿಸಿದ್ದಾರೆ. ಈ ಅಧ್ಯಯನವನ್ನು ಫ್ಲ್ಯೂಸ್ ಒನ್​ ಪೇಪರ್​ನಲ್ಲಿ ಪ್ರಕಟಿಸಲಾಗಿದೆ.

ಇದೆ ಮೊದಲ ಬಾರಿಗೆ ಎಎಂಐ ರೋಗಿಗಳ ಮೇಲೆ ದೊಡ್ಡ ಮಟ್ಟದಲ್ಲಿ ನಡೆದ ಅಧ್ಯಯನ ಇದಾಗಿದೆ. ಕೋವಿಡ್​​ 19 ಲಸಿಕೆ ಸುರಕ್ಷೆ ಜೊತೆಗೆ ಎಲ್ಲಾ ರೀತಿಯ ಸಾವಿನ ಅಪಾಯವನ್ನು ಮೊದಲ ಆರು ತಿಂಗಳಲ್ಲಿ ಕಡಿಮೆ ಮಾಡಿದೆ ಎಂದಿದ್ದಾರೆ.

ಇದಕ್ಕಾಗಿ ತಂಡವೂ ಈ ಹಿಂದಿನ ಅಧ್ಯಯನ ವಿಶ್ಲೇಷಣೆ ನಡೆಸಿದೆ. ಆಗಸ್ಟ್​ 20201 ರಿಂದ ಆಗಸ್ಟ್​ 2022ರವರೆಗೆ ಜಿಬಿ ಪಂತ್​​ ಆಸ್ಪತ್ರೆಗೆ ದಾಖಲಾದ 1,578 ಹೃದಯಾಘಾತ ರೋಗಿಗಳ ಅಧ್ಯಯನ ನಡೆಸಿದೆ. ಇದರಲ್ಲಿ ಶೇ 69ರಷ್ಟು ರೋಗಿಗಳು ಲಸಿಕೆ ಪಡೆದಿದ್ದರೆ, ಶೇ 31ರಷ್ಟು ರೋಗಿಗಳು ಲಸಿಕೆ ಪಡೆದಿಲ್ಲ.

ಲಡಿಕೆ ಪಡೆದ ಗುಂಪಿನಲ್ಲಿ ಶೇ 96ರಷ್ಟು ಮಂದಿ ಎರಡು ಲಸಿಕೆಯನ್ನು ಪಡೆದಿದ್ದರೆ, ಶೇ 4ರಷ್ಟು ಮಂದಿ ಸಿಂಗಲ್​ ಡೋಸ್​ ಲಸಿಕೆ ಪಡೆದಿದ್ದಾರೆ.

ಬಹುತೇಕ ಲಸಿಕೆ ಪಡೆದ ಮಂದಿ ಅಂದರೆ ಶೇ 92.3ರಷ್ಟು ಜನ ಪುಣೆ ಮೂಲದ ಸೆರಂ ಸಂಸ್ಥೆ ಬ್ರಿಟಿಷ್​ ಫಾರ್ಮ್​ ಆಸ್ಟ್ರಾ ಜೆನೆಕ್​ ಸಹಯೋಗದಲ್ಲಿ ಅಭಿವೃದ್ಧಿ ಪಡಿಸಿದ ಕೋವಿಶೀಲ್ಡ್​​ ಪಡೆದಿದ್ದರೆ, ಶೇ 7.7 ಮಂದಿ ಹೈದರಾಬಾದ್​ನ ಭಾರತ್​ ಬಯೋಟೆಕ್​ ಅಭಿವೃದ್ಧಿಪಡಿಸಿದ ಕೋವಾಕ್ಸಿನ್​ ಲಸಿಕೆ ಪಡೆದಿದ್ದಾರೆ.

ಸಂಶೋಧಕರು ಲಸಿಕೆ ಪಡೆದ ಬಳಿಕ ಹೃದಯಾಘಾತಕ್ಕೆ ಯಾವುದೇ ಕ್ಲಸ್ಟರಿಂಗ್​ ಅನ್ನು ಪತ್ತೆ ಮಾಡಿಲ್ಲ. ಲಸಿಕೆ ಪಡೆದ 30 ದಿನದೊಳಗೆ ಶೇ 2ರಷ್ಟು ಮಂದಿ ಅಕ್ಯೂಟ್​ ಮಯೋಕಾರ್ಡಿಯಲ್​ ಇನ್ಫಾಕ್ಷನ್​ (ಎಎಂಐ)ಗೆ ಒಳಗಾಗಿರುವ ಕಂಡುಬಂದಿದೆ. ಇದರಲ್ಲಿ ಬಹುತೇಕವೂ ಲಸಿಕೆ ಪಡೆದ 90 ರಿಂದ 270 ದಿನದಲ್ಲಿ ಸಂಭವಿಸಿದೆ.

1,578 ಹೃದಯಾಘಾತಕ್ಕೆ ಒಳಗಾದ ರೋಗಿಗಳಲ್ಲಿ 30 ದಿನದಲ್ಲಿ ಸಾವಿನ ದರ ಶೇ 13ರಷ್ಟು ಕಂಡು ಬಂದಿದೆ. ಇದರಲ್ಲಿ ಲಸಿಕೆ ಪಡೆದವರು ಶೇ 58ರಷ್ಟಾದರೆ ಲಸಿಕೆ ಪಡೆಯದವರು ಶೇ 42ರಷ್ಟಾಗಿದ್ದಾರೆ.

ಆದಾಗ್ಯೂ ಪೂರ್ವ ಜಾರಿಯಲ್ಲಿನ ಅಪಾಯದ ಅಂಶಗಳು ಹೊಂದಾಣಿಕೆ ನಡೆಸಿದಾಗ ಅಧ್ಯಯನವೂ ಲಸಿಕೆ ಪಡೆದ 30 ದಿನದಲ್ಲಿನ ಸಾವಿನ ಸಂಖ್ಯೆ ಗಮನಾರ್ಹವಾಗಿ ಕಡಿಮೆಯಾಗಿದೆ ಎಂದಿದ್ದಾರೆ. 30ದಿನದೊಳಗಿನ ಸಾವಿನಲ್ಲಿ ವಯಸ್ಸಿನ ಹೆಚ್ಚಳ, ಮಧುಮೇಹ ಮತ್ತು ಧೂಮಪಾನ ಕೂಡ ​​ ಕಂಡು ಬಂದಿದೆ ಎಂದಿದ್ದಾರೆ.

30 ದಿನದಿಂದ ಆರು ತಿಂಗಳ ಈ ಫಾಲೋ ಅಪ್​ ಅವಧಿಯಲ್ಲಿ 75 ರೋಗಿಗಳು ಸಾವನ್ನಪ್ಪಿದ್ದು, ಇದರಲ್ಲಿ ಶೇ43.7ರಷ್ಟು ಮಂದಿ ಲಸಿಕೆ ಪಡೆದವರಾಗಿದ್ದಾರೆ.

ಆದಾಗ್ಯೂ ಹೊಂದಾಣಿಕ ಅಂಶಗಳನ್ನು ಅಧ್ಯಯನವೂ ಗಮನಿಸಿದಾಗ ಲಸಿಕೆ ಪಡೆದ ಬಳಿಕ ಸಾವಿನ ಸಂಖ್ಯೆ ಕಡಿಮೆಯಾಗಿದೆ ಎಂದಿದೆ. ಸಂಶೋಧಕರು ಈ ಅಧ್ಯಯನವೀ ಒಂದೇ ಕೇಂದ್ರದ ಹಿಂದಿನ ಅಧ್ಯಯನ ಮಿತಿ ಹೊಂದಿದೆ. ವಿವಿಧ ಜನಾಂಗೀಯ ಗುಂಪುಗಳಿಂದ ಮತ್ತಷ್ಟು ದೊಡ್ಡ ಅಧ್ಯಯನ ಸಂಶೋಧನೆ ಮೌಲ್ಯೀಕರಿಸಿದೆ.

ಕೋವಿಡ್​ ಸಾಂಕ್ರಾಮಿಕತೆ ಬಳಿಕ ಯುವಜನತೆಯಲ್ಲಿ ಸಂಭವಿಸುತ್ತಿರುವ ಹಠಾತ್​ ಹೃದಯಾಘಾತದ ಪ್ರಮಾಣ ಏರಿಕೆ ಅರ್ಥೈಸಿಕೊಳ್ಳಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್​) ಕೂಡ ಅಧ್ಯಯನ ನಡೆಸುತ್ತಿದೆ. (ಐಎಎನ್​ಎಸ್​)

ಇದನ್ನೂ ಓದಿ: Covid cases: ಅಮೆರಿಕದಲ್ಲಿ ಏರಿಕೆ ಕಂಡ ಕೋವಿಡ್​ ಪ್ರಕರಣಗಳು.. ಮಾಸ್ಕ್​ ಧರಿಸುವಂತೆ ಸೂಚನೆ

ABOUT THE AUTHOR

...view details