ನ್ಯೂಯಾರ್ಕ್: ಕೋವಿಡ್ 19ನ ಸಾರ್ಸ್ ಕೋವ್ 2 ವೈರಸ್ ಸೋಂಕಿತ ವ್ಯಕ್ತಿ, ವಾಸನೆ ಗ್ರಹಣೆ ಮತ್ತು ರುಚಿಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಈ ವೈರಸ್ ಸಂವೇದನಾ ನರಕೋಶಕ್ಕೂ ಸೋಂಕು ತಗುಲಿಸಬಹುದು ಎಂದು ಹೊಸ ಅಧ್ಯಯನ ಹೇಳುತ್ತಿದೆ.
2020ರಲ್ಲಿ ಕೋವಿಡ್ ಸೋಂಕು ಆರಂಭವಾದಾಗ ಬಹುತೇಕ ಮಂದಿಯಲ್ಲಿ ಬಾಹ್ಯ ನರಮಂಡಲದ ಮೇಲೆ ಪರಿಣಾಮ ಕಂಡುಬಂದಿತ್ತು. ಇದು ಮಿದುಳು ಮತ್ತು ದೇಹದ ಇತರೆ ಭಾಗಗಳಿಗೆ ಸಂವಹನ ನಡೆಸುವ ನರಜಾಲಗಳು. ಮನುಷ್ಯನ ವಾಸನೆ ಮತ್ತು ರುಚಿಯ ಇಂದ್ರಿಯಗಳು ಬಾಹ್ಯ ನರಮಂಡಲದ ಸಂವೇದಾನ ನರಕೋಶಗಳನ್ನು ಒಳಗೊಂಡಿದೆ. ಈ ಮುಂಚಿನ ಅಧ್ಯಯನವು ವೈರಸ್, ನರಗಳಿಗೆ ಹಾನಿ ಮಾಡುವುದಿಲ್ಲ ಅಥವಾ ಅಪರೂಪವಾಗಿ ಸೋಂಕಿಗೆ ಕಾರಣವಾಗಬಹುದು ಎಂಬುದನ್ನು ತೋರಿಸಿತ್ತು.
ಅಮೆರಿಕದ ವೈಟ್ಹೆಡ್ ಇನ್ಸುಟಿಟ್ಯೂಟ್ ಫಾರ್ ಬಯೋಮೆಡಿಕಲ್ ರಿಸರ್ಚ್ ತಂಡ, ಸಾರ್ಸ್ ಕೋವ್ 2 ಸಂವೇದನಾ ನರಕೋಶಗಳಿಗೆ ಸೋಂಕು ತಗುಲಿಸಿ, ಅದರಿಂದ ಕೋಶದ ವಂಶವಾಹಿನಿಯ ಅಭಿವ್ಯಕ್ತಿಗಳನ್ನು ಬದಲಾಯಿಸುತ್ತದೆ ಎಂದು ಪತ್ತೆ ಮಾಡಿದೆ. ಈ ಫಲಿತಾಂಶವು ವೈರಸ್ ಬಾಹ್ಯ ನರಕೋಶ ಮಂಡಲದ ಮೇಲೆ ಹೇಗೆ ಲಕ್ಷಣ ಮೂಡುತ್ತದೆ ಎಂದು ವಿವರಿಸಲು ಸಹಾಯ ಮಾಡಿದ್ದು, ಚಿಕಿತ್ಸೆ ಅಭಿವೃದ್ಧಿಯ ಸಂಶೋಧನೆಗೆ ಅಡಿಗಲ್ಲು ಹಾಕಿದೆ.
ಸಾರ್ಸ್ ಕೋವ್ 2 ಸೋಂಕು ರುಚಿ ಮತ್ತು ವಾಸನೆ ಕಳೆದುಕೊಳ್ಳುವ ಮೂಲಕ ಬಾಹ್ಯ ನರಕೋಶದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಸ್ಪಷ್ಟವಾಗಿದೆ. ಇದಕ್ಕೆ ಕಾರಣವೇನು ಎಂಬುದು ನಮಗೆ ಗೊತ್ತಿಲ್ಲ ಎಂದು ವೈಟ್ಹೆಡ್ ಇನ್ಸುಟಿಟ್ಯೂಟ್ ಸದಸ್ಯ ರುಡೊಲ್ಫ್ ಜೇನಿಶ್ ತಿಳಿಸಿದ್ದಾರೆ. ವೈರಸ್ ಸೋಂಕಿಗೆ ಒಳಗಾಗಬಹುದು. ಜೀವಕೋಶಗಳ ಕಾರ್ಯವನ್ನು ಬದಲಾಯಿಸಬಹುದು ಎಂದು ತಿಳಿದುಕೊಳ್ಳುವುದರಿಂದ ಇದರ ಕಾರಣದ ಕುರಿತು ಸುಳಿವು ಲಭ್ಯವಾಗಲಿದೆ ಎಂದು ಜೇನಿಶ್ ಹೇಳಿದ್ದಾರೆ.