ಲಂಡನ್: ನಮ್ಮಲ್ಲಿ ಬಹುತೇಕ ಮಂದಿ ಮೂರನೇ ಎರಡರಷ್ಟು ಸಮಯವನ್ನು ಮನೆಯಲ್ಲಿಯೇ ಕಳೆಯುತ್ತಾರೆ. ಮನೆಯಲ್ಲಿ ಇದ್ದ ಮಾತ್ರಕ್ಕೆ ಅವರು ಮಾಲಿನ್ಯಕ್ಕೆ ಒಳಗಾಗುವುದಿಲ್ಲ ಎಂದು ಅರ್ಥವಲ್ಲ. ಮನೆಯಲ್ಲಿ ಅಡುಗೆ ಬೇಯಿಸುವಾಗ ಉಂಟಾಗುವ ಸುಡುವ, ಹುರಿದ ಹೊಗೆಗಳಿಂದಾಗಿ ಅಪಾಯಕಾರಿ ವಾಯು ಮಾಲಿನ್ಯಕ್ಕೆ ಅವರು ಒಳಗಾಗುತ್ತಾರೆ. ಸುಟ್ಟ ಅಡುಗೆ ಸೂಕ್ಷ್ಮ ಕಣಗಳನ್ನು ಬಿಡುಗಡೆ ಮಾಡುತ್ತದೆ. ಇದು ಹೆಚ್ಚಿನ ಮಾಲಿನ್ಯ ಉಂಟುಮಾಡುತ್ತದೆ.
ಮನೆಯಲ್ಲಿ ರೋಸ್ಟ್ ಮಾಡಿದ ಅಡುಗೆ ತಯಾರಿಸುವಾಗ ನೀವು ದೆಹಲಿಗಿಂತ ಕೆಟ್ಟ ಹವಾಮಾನಕ್ಕೆ ತೆರೆದುಕೊಳ್ಳುತ್ತೀರಿ ಎಂದು ಸಂಶೋಧನೆ ತಿಳಿಸಿದೆ. ಇಂತಹ ಅಡುಗೆಯ ವಾಸನೆಗಳನ್ನು ಸೇವಿಸಿದಾಗ ಇದರಲ್ಲಿನ ಕಣಗಳು ಹೃದಯ ಮತ್ತು ಶ್ವಾಸಕೋಶಕ್ಕೆ ಪರಿಣಾಮ ಬೀರಬಹುದು. ಅಲ್ಲದೇ ಅಸ್ತಮಾ ಗುಣಲಕ್ಷಣಕ್ಕೆ ಕಾರಣವಾಗಬಹುದು. ಶ್ವಾಸಕೋಶ ಸೋಂಕಿಗೆ ಇದು ಕೊಡುಗೆ ನೀಡುವುದರ ಜೊತೆಗೆ ಹೃದಯಾಘಾತದ ಅಪಾಯವನ್ನು ಇದು ಹೆಚ್ಚಿಸುತ್ತದೆ. 2019ರಲ್ಲಿ ದೀರ್ಘಕಾಲಿಕ ಮನೆಯಲ್ಲಿನ ಮಾಲಿನ್ಯವು 2.3 ಮಿಲಿಯನ್ ಜನರ ಸಾವಿಗೆ ಕಾರಣವಾಗಿದೆ.
ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಮಾರ್ಗವಾಗಿ ಅನೇಕ ದೇಶಗಳು ತಮ್ಮ ವಸತಿ ವ್ಯವಸ್ಥೆಯನ್ನು ಬದಲಾಯಿಸುತ್ತಿವೆ. ಐರಿಶ್ ಸರ್ಕಾರ, ದಶಕಗಳ ಬಳಿಕ ಅರ್ಧಕ್ಕೂ ಹೆಚ್ಚು ಮಿಲಿಯನ್ ಮನೆಗಳನ್ನು ಮರು ಹೊಂದಿಸುವುದಾಗಿ ತಿಳಿಸಿದೆ. ಇದರ ಅನುಸಾರ ಮನೆಗಳಲ್ಲೂ ಉತ್ತಮ ವಾಯು ಗುಣಮಟ್ಟ ಹೆಚ್ಚಿಸುವುದು ಮತ್ತು ಶಕ್ತಿಯ ಬಳಕೆ ಕಡಿಮೆ ಮಾಡಲಾಗುವುದು.
ಆದಾಗ್ಯೂ, ಈ ಮರುಹೊಂದಿಸುವಿಕೆ ಮನೆಗಳಲ್ಲಿ ಹೆಚ್ಚು ಗಾಳಿ ಆಡುವುದಿಲ್ಲ. ಇದಕ್ಕೆ ಗಾಳಿಯಾಡುವಂತೆ ಸರಿಯಾಗಿ ನಿರ್ವಹಣೆ ಮಾಡಬೇಕಿದೆ. ಸೂಕ್ತ ಗಾಳಿಯಾಡುವ ವ್ಯವಸ್ಥೆ ಇದ್ದರೆ, ಇದರಿಂದ ಅಡುಗೆ ಸಂದರ್ಭದಲ್ಲಿ ಉಂಟಾಗುವ ಮಾಲಿನ್ಯದಿಂದ ತಪ್ಪಿಸಬಹುದು. ಪಶ್ಚಿಮ ಯುರೋಪ್ನ ಮನೆಗಳು ದೀರ್ಘಕಾಲದ ನೈಸರ್ಗಿಕ ಗಾಳಿಯಾಡುವಿಕೆಯ ವ್ಯವಸ್ಥೆಯನ್ನು ಹೊಂದಿವೆ. ಇಂತಹ ಮನೆಗಳಿಗೆ ಸಣ್ಣ ಹೊಂದಾಣಿಕೆ ಅವಶ್ಯಕವಾಗಿದೆ.