ನವದೆಹಲಿ:ಮೂಳೆಗಳ ಆರೋಗ್ಯ ಕಾಪಾಡಲುದಿನವೀಡಿ ವಾಕಿಂಗ್, ರನ್ನಿಂಗ್, ಕೂರುವುದು, ಡ್ಯಾನ್ಸ್ ಮಾಡುವುದು ಅಥವಾ ಮೆಟ್ಟಿಲು ಹತ್ತುವ ಚಟುವಟಿಕೆಯಲ್ಲಿ ತೊಡಗುತ್ತೇವೆ. ಆದರೆ, ಚಳಿಗಾಲದಲ್ಲಿ ಆರೋಗ್ಯ ಕೊಂಚ ಸವಾಲುದಾಯಕವಾಗಿರುತ್ತದೆ. ಅದರಲ್ಲೂ ಅಸ್ಥಿಸಂಧಿವಾತದಂತಹ ಸಮಸ್ಯೆ ಹೊಂದಿರುವವರಿಗೆ ಕಷ್ಟವೇ ಸರಿ.
ಈ ಋತುಮಾನದಕಲ್ಲಿ ಮೂಳೆಗಳು ಮತ್ತು ಕೀಲಿನ ಆರೋಗ್ಯವನ್ನು ಕಾಪಾಡುವುದು ನಿರ್ಣಾಯಕವಾಗಿರುತ್ತದೆ. ಚಳಿಯಿಂದಾಗಿ ನೈಸರ್ಗಿಕ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು ಕಡಿಮೆಯಾಗುವುದರ ಜೊತೆಗೆ ವಿಟಮಿನ್ ಡಿ ಮಟ್ಟ ಕೂಡ ಕಡಿಮೆ ಆಗುತ್ತದೆ. ಮೂಳೆಗಳ ಆರೋಗ್ಯ ನಿರ್ವಹಣೆ ಮಾಡುವಲ್ಲಿ ವಿಟಮಿನ್ ಡಿ ಪಾತ್ರ ಮುಖ್ಯವಾಗಿರುತ್ತದೆ. ಇದನ್ನು ಆಹಾರದ ಮೂಲಕ ಈ ಸಮಯದಲ್ಲಿ ಪಡೆಯುವುದು ಅವಶ್ಯವಾಗುತ್ತದೆ. ಈ ಮೂಲಕ ಮೂಳೆ ಮತ್ತು ಕೀಲಿನ ಆರೋಗ್ಯವನ್ನು ಕಾಪಾಡಬಹುದಾಗಿದೆ.
ಪೋಷಕಾಂಶ ಸಮೃದ್ಧ ಆಹಾರಗಳು: ವಯಸ್ಸಾದಂತೆ, ಮೂಳೆ ಆರೋಗ್ಯದ ನಿರ್ವಹಣೆಯನ್ನು ನಿರ್ಲಕ್ಷಿಸಿದರೆ, ಅದು ಆಸ್ಟಿಯೊಪೊರೋಸಿಸ್ನಂತಹ ಪರಿಸ್ಥಿತಿಗಳಿಗೆ ಕಾರಣವಾಗಬಹುದು. ಮೂಳೆಯ ಆರೋಗ್ಯವನ್ನು ಬಲಪಡಿಸಲು ಮತ್ತು ಉಳಿಸಿಕೊಳ್ಳಲು, ಆಹಾರದಲ್ಲಿ ಕೆಳಗಿನ ಪೋಷಕಾಂಶ ಭರಿತ ಆಹಾರಗಳನ್ನು ಸೇರಿಸುವುದು ಅತ್ಯಗತ್ಯ.
ಹಾಲು ಮತ್ತು ಡೈರಿ ಉತ್ಪನ್ನಗಳು: ಡೈರಿ ಉತ್ಪನ್ನಗಳು ಪೋಷಕಾಂಶ ಸಮೃದ್ಧವಾಗಿದ್ದು, ಮೂಳೆಗಳ ಆರೋಗ್ಯಕ್ಕೆ ಪ್ರಮುಖವಾಗಿದೆ. ಇದರಲ್ಲಿ ಕ್ಯಾಲ್ಸಿಯಂ, ಪ್ರೊಟೀನ್, ವಿಟಮಿನ್ ಡಿ, ಪೊಟಾಶಿಯಂ ಮತ್ತು ಫಾಸ್ಪರಸ್ ಇರುತ್ತದೆ. ದೇಹಕ್ಕೆ ಕ್ಯಾಲ್ಸಿಯಂ ಮಟ್ಟ ನಿರ್ಣಾಯಕವಾಗಿದ್ದು, ಅದರ ಮೂಲಕ ವಿಟಮಿನ್ ಡಿ ಆಗಿದೆ. ಕನಿಷ್ಠ 3 ಲೋಟ ಹಾಲು ಕುಡಿಯುವುದರಿಂದ ಇದನ್ನು ಪಡೆಯಬಹುದು. ಹಾಲನ್ನು ಕುಡಿಯಲು ಇಷ್ಟವಿಲ್ಲದವರು, ಅದನ್ನು ಸ್ಮೂಥಿ ಅಥವಾ ಇನ್ನಿತರ ಪರ್ಯಾಯ ಕ್ರಮದ ಮೂಲಕ ಸೇವನೆ ಮಾಡುವುದು ಅವಶ್ಯ.