ಕ್ಯಾಲಿಫೋರ್ನಿಯಾ (ಅಮೆರಿಕ): ಬಾದಾಮಿ, ಗೋಡಂಬಿ, ಬ್ರೆಜಿಲ್ ನಟ್, ಮ್ಯಾಕ್ಡಮಿಸ್, ಪೈನ್ ನಟ್, ವಾಲ್ನಟ್, ಪಿಸ್ತಾನಂತಹ ತರಹೇವಾರಿ ಹಣ್ಣುಗಳನ್ನು (Nuts) ಸೇವಿಸುವುದರಿಂದ ಅಧಿಕ ತೂಕ ಮತ್ತು ಬೊಜ್ಜು ಹೊಂದಿರುವ ಜನರಲ್ಲಿ ಸುಧಾರಿತ ಚಯಾಪಚಯ ಸೇರಿದಂತೆ ಸಂಪೂರ್ಣ ಆರೋಗ್ಯದಲ್ಲಿ ಅಭಿವೃದ್ದಿ ಆಗುತ್ತದೆ ಎಂದು ಜರ್ನಲ್ ನ್ಯೂಟ್ರಿಯೆಂಟ್ಸ್ ಪ್ರಕಟಿಸಿದೆ.
1.5 ಔನ್ಸ್ ಅಷ್ಟು ಮೂರು ವಿಧದ ಒಣಹಣ್ಣುಗಳನ್ನು (ಟ್ರಿಪ್ಟೊಫಾನ್) ಪ್ರತಿ ನಿತ್ಯ ಸೇವಿಸುವುದರಿಂದ 24 ವಾರದಲ್ಲಿ ತೂಕ ನಷ್ಟ ಮತ್ತು ತೂಕ ನಿರ್ವಹಣೆ ಫಲಿತಾಂಶವನ್ನು ಕಾಣಬಹುದಾಗಿದೆ. ಇದರಿಂದ ಡಯಾಸ್ಟೊಲಿಕ್ ರಕ್ತದೊತ್ತಡ ಕಡಿಮೆಯಾಗುತ್ತದೆ. ಹೃದಯ ರಕ್ತನಾಳದ ರೋಗದಲ್ಲಿ ಟ್ರಿಪ್ಟೊಫಾನ್ (ಮೂರು ಒಣಹಣ್ಣುಗಳು) ಪ್ರಮುಖವಾದ ಪಾತ್ರವಹಿಸುತ್ತದೆ.
ಚಯಾಪಚಯ ಕ್ರಿಯೆಗೆ ಸಹಾಯ: ಕರುಳಿನ ಚಯಾಪಚಯ, ಜೈವಿಕ ಕ್ರಿಯೆಯ ಚಯಾಪಚನಯದಲ್ಲಿ ಪ್ರಮುಖವಾಗಿದೆ. ಡಯಾಬೀಟಿಸ್, ಸಿವಿಡಿಯಂತಹ ದೀರ್ಘ ಕಾಲದ ರೋಗಗಳ ರೋಗ ನಿಯಂತ್ರಣದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಈ ಮೂರು ಒಣಗಳ್ಳುಗಳ ಸ್ನಾಕ್ಗಳ ಹೈಪೊಕ್ಲೊರಿಕ್ ಡಯಟ್ನ ಭಾಗವಾಗುವುದರಿಂದ ಇದು ಕರುಳಿನ ಮೈಕ್ರೊಬ್ಲೊಮ್ ಸುಧಾರಣೆ ಮಾಡುತ್ತದೆ. ಈ ಅಧ್ಯಯನದಲ್ಲಿ ಭಾಗಿಯಾದ ಅಧಿಕ ತೂಕವುಳ್ಳ 95 ಮಂದಿ ಪ್ಮಾಸ್ಲಾ ಮತ್ತು ಮಲದ ಮಾದರಿಗಳನ್ನು ಪರೀಕ್ಷೆ ನಡೆಸಲಾಗಿದೆ. ಟ್ರಿಫ್ಟೊಫಾನ್ ಮೆಟಾಬಾಲೈಟ್‌ಗಳು ಮತ್ತು ಕರುಳಿನ ಮೈಕ್ರೋಬಯೋಟಾಕ್ಕಾಗಿ ಇವು ಸಹಕಾರಿಯಾಗಿದೆ. ಒಣಹಣ್ಣುಗಳು ಸಿವಿಡಿ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅಧ್ಯಯನ ತಿಳಿಸಿದೆ.
ಸಂಪೂರ್ಣ ಆರೋಗ್ಯದ ಮೇಲೆ ಪರಿಣಾಮ: ಟ್ರಿಫ್ಟೊಫಾನ್ ಮೆಟಾಬಾಲೈಟ್ ಮತ್ತು ರಕ್ತದ ಒತ್ತಡ, ಹೃದಯ ಬಡಿತ ಮತ್ತು ಅಧಿಕ ತೂಕ ಅತವಾ ಬೊಜ್ಹಿನ ಸಮಸ್ಯೆ ಒಂದಕ್ಕೊಂದು ಸಂಬಂಧ ಹೊಂದಿದ್ಯಾ ಎಂಬುದರ ಕುರಿತು ನಾವು ಪರಿಶೀಲನೆ ನಡೆಸಿದೇವು. ಈ ಟ್ರಿಫ್ರಟೊಫಾನ್ ಮೆಟಾಬಾಲೈಟ್ ಹೃದಯದ ಆರೋಗ್ಯ ಸೇರಿದಂತೆ ಸಂಪೂರ್ಣ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಸಂಶೋಧನೆಯ ಮುಖ್ಯಸ್ಥರಾದ ಜಾಒಪಿಂಗ್ ತಿಳಿಸಿದ್ದಾರೆ.
ರಕ್ತದ ಸೆರೊಟೊನಿನ್ ಮಟ್ಟವನ್ನು ಈ ಟ್ರಿಫ್ಟೊಫಾನ್ಗಳು ಹೆಚ್ಚಿಸುತ್ತದೆ. ಎರಡು ಮೂರು ವಿಧಧ ಹಣಗಳ ಒಟ್ಟಿಗೆ ಸೇವನೆ ಮಾಡುವುದರಿಂದೆ ತೂಕ ನಷ್ಟ ಮತ್ತು ತೂಕ ನಿರ್ವಹಣೆಯಲ್ಲಿ ಇದು ಸಹಾಯ ಮಾಡುತ್ತದೆ. ಇದೇ ಮೊದಲ ಬಾರಿಗೆ ಎರಡು ಮೂರು ಒಣ ಹಣ್ಣುಗಳನ್ನು ಒಟ್ಟಿಗೆ ಸೇವಿಸುವುದರಿಂದ ದೇಹದ ಸೆರೊಟೊನಿನ್ ಮಟ್ಟ ಹೆಚ್ಚಾಗುತ್ತದೆ ಎಂಬುದನ್ನು ನಾವು ಕಾಣುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಈ ಸಂಬಂಧ ಹೆಚ್ಚಿನ ಅಧ್ಯಯನ ಅವಶ್ಯಕವಾಗಿದೆ. ಸೆರೊಟೊನಿನ್ ಮನಸ್ಥಿತಿ ಮತ್ತು ಸಂಪೂರ್ಣ ಮಾನಸಿಕ ಆರೋಗ್ಯದ ಮೇಲೆ ಪ್ರಮುಖ ಪರಿಣಾಮ ಹೊಂದಿದೆ. ಶೇ 25ರಷ್ಟು ಕ್ಯಾಲೋರಿಯು ಅವರು ಸೇವಿಸುವ ಸ್ನಾಕ್ ಮತ್ತು ಇದರ ಡೆಸರ್ಟ್, ಸಹಿ ಪಾನಿಯ ಮತ್ತು ಸಹಿ ಮತ್ತು ಉಪ್ಪಿನ ಸ್ನಾಕ್ನಿಂದ ಬಂದಿದೆ ಎಂಬುದನ್ನು ಸಂಶೋಧನೆ ತಿಳಿಸಿದೆ. ಈ ಸಿಹಿ ಸ್ನಾಕ್ಸ್ ಬದಲಾಗಿ 1.5 ಔನ್ಸ್ನಷ್ಟು ಮೂರು ವಿಧದ ಒಣ ಹಣ್ಣುಗಳನ್ನು ಸೇವಿಸುವುದರಿಂದ ಇದು ಸಂಪೂರ್ಣ ಆರೋಗ್ಯ ಮತ್ತು ಅನೇಕ ದೀರ್ಘಕಾಲದ ರೋಗದ ನಿಯಂತ್ರಣದಲ್ಲಿ ಪರಿಣಾಮ ಬೀರುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಇದನ್ನೂ ಓದಿ: ತೂಕ ಇಳಿಕೆಗೆ 80/20 ರೂಲ್ಸ್ ಫಾಲೋ ಮಾಡಿ: ಏನಿದು ನಿಯಮ?