ನ್ಯೂಯಾರ್ಕ್: ಪ್ರಸವ ಪೂರ್ವ ಮಲ್ಟಿವಿಟಮಿನ್‌ಗೆ ಹೋಲಿಸಿದರೆ ಗರ್ಭಾವಸ್ಥೆ ಸಮಯದಲ್ಲಿ ತೆಗೆದುಕೊಳ್ಳುವ ವಿಟಮಿನ್ ಡಿ ಪೂರಕಗಳು ಮಗುವಿನಲ್ಲಿ ಅಸ್ತಮಾ ಮತ್ತು ವೀಜಿಂಗ್ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.
ವಿಟಮಿನ್ ಡಿಯು ನೇರವಾಗಿ ಸೂರ್ಯನಿಂದ ಸಿಗುವ ಪೋಷಕಾಂಶವಾಗಿದ್ದು, ಆಹಾರ ಪದ್ದತಿ ಅಥವಾ ಪೂರಕಗಳಿಂದಲೂ ಪಡೆಯಬಹುದಾಗಿದೆ. ಮೂಳೆಗಳ ಆರೋಗ್ಯಕ್ಕೆ ಇದು ಅಗತ್ಯವಾಗಿದೆ. ಆದರೆ, ಇದು ಸ್ವಯಂ ನಿರೋಧಕ ಮತ್ತು ಇತರ ಅನಾರೋಗ್ಯ ಸುಧಾರಣೆಯಲ್ಲಿ ಪ್ರಮುಖ ಪಾತ್ರವನ್ನು ಹೊಂದಿದೆ.
2016ರ ಅಧ್ಯಯನ ಆಧರಿಸಿ ಈ ಅಧ್ಯಯನ ವಿಶ್ಲೇಷಿಸಲಾಗಿದ್ದು, ಮಕ್ಕಳಲ್ಲಿ ವಿಟಮಿನ್ ಡಿ ಕೊರತೆ ಅಸ್ತಮಾ ಮತ್ತು ವಿಜೀಂಗ್ನೊಂದಿಗೆ ಸಂಬಂಧ ಹೊಂದಿದ್ದು, ಮಕ್ಕಳಲ್ಲಿ ಅನಾರೋಗ್ಯಕ್ಕೆ ಪ್ರಮುಖ ಕಾರಣವಾಗಿದೆ. ಶೇ 40 ರಷ್ಟು ಮಕ್ಕಳು ತಮ್ಮ ಮೂರನೇ ವಯಸ್ಸಿಗೆ ವಿಜೀಂಗ್ಗೆ ಒಳಗಾಗುತ್ತಿದ್ದಾರೆ. ಆರನೇ ವಯಸ್ಸಿನಲ್ಲಿ ಶೇ 20ರಷ್ಟ ಮಕ್ಕಳಲ್ಲಿ ಅಸ್ತಮಾ ಪ್ರಕರಣಗಳು ಕಂಡು ಬರುತ್ತಿದೆ.
ವಿಟಮಿನ್ ಕೊರತೆ: ವಿಟಮಿನ್ ಡಿ ಕೊರತೆ ಸಾಮಾನ್ಯವಾಗಿದೆ. ವಿಶೇಷವಾಗಿ ಗರ್ಭಿಣಿಯರು ವಿಟಮಿನ್ ಡಿ ಪೂರಕವನ್ನು ತೆಗೆದುಕೊಳ್ಳದೇ ಇದರ ಕೊರತೆ ಕಾಡುತ್ತದೆ ಎಂದು ಬ್ರಿಗ್ಹ್ಯಾಮ್ ವುಮೆನ್ಸ್ ಆಸ್ಪತ್ರೆಯ ಸ್ಕಾಟ್ ಟಿ ವೆಸ್ ಮತ್ತು ಹಾರ್ವಡ್ ಮೆಡಿಕಲ್ ಸ್ಕೂಲ್ನ ಪ್ರೊಫೆಸರ್ ತಿಳಿಸಿದ್ದಾರೆ.