ಕರ್ನಾಟಕ

karnataka

ETV Bharat / sukhibhava

ಡಯೆಟ್​ ವೇಳೆ ಮೆದುಳಿನ ಕಾರ್ಯನಿರ್ವಹಣೆಯಲ್ಲಿ ಬದಲಾವಣೆ: ಅಧ್ಯಯನ - ಹೊಸ ಅಧ್ಯಯನ

ನಾವು ಡಯೆಟ್​ನಲ್ಲಿರುವ ವೇಳೆ ನಮ್ಮ ಮೆದುಳಿನಲ್ಲಿನ ಸಂವಹನದಲ್ಲಿ ಬದಲಾಗುತ್ತದೆ ಎಂದು ಹೊಸ ಅಧ್ಯಯನವೊಂದು ಬಹಿರಂಗಪಡಿಸಿದೆ.

brain function changes during dieting study
ಡಯೆಟ್​ ವೇಳೆ ಮೆದುಳಿನ ಕಾರ್ಯನಿರ್ವಹಣೆಯಲ್ಲಿ ಬದಲಾವಣೆ

By

Published : Apr 3, 2023, 4:13 PM IST

ವಾಷಿಂಗ್ಟನ್​:ನಾವು ಡಯೆಟ್​ನಲ್ಲಿರುವಾಗ ನಮ್ಮ ಮೆದುಳಿನ ಕಾರ್ಯನಿರ್ವಣೆಯಲ್ಲಿ ಬದಲಾವಣೆಯಾಗುತ್ತದೆ ಎಂಬುದನ್ನು ಸಂಶೋಧನೆಯೊಂದು ಬಹಿರಂಗ ಪಡಿಸಿದೆ. ಮ್ಯಾಕ್ಸ್ ಪ್ಲ್ಯಾಂಕ್ ಇನ್‌ಸ್ಟಿಟ್ಯೂಟ್ ಫಾರ್ ಮೆಟಾಬಾಲಿಸಮ್ ರಿಸರ್ಚ್ ಮತ್ತು ಹಾರ್ವರ್ಡ್ ಮೆಡಿಕಲ್ ಸ್ಕೂಲ್‌ನ ಸಂಶೋಧಕರು ಇಲಿಗಳ ಮೇಲೆ ಈ ಅಧ್ಯಯನವನ್ನು ಕೈಗೊಂಡು, ವರದಿ ಬಹಿರಂಗ ಪಡಿಸಿದ್ದಾರೆ.

ಡಯೆಟ್​ ಸಮಯದಲ್ಲಿ ಇಲಿಗಳ ಮೆದುಳಿನ ಸಂವಹನ ಬದಲಾಗುತ್ತದೆ. ಹಸಿವಿನ ಭಾವನೆಗಳಲ್ಲಿ ಮಧ್ಯಸ್ಥಿಕೆ ವಹಿಸುವ ನರ ಕೋಶಗಳು ಬಲವಾದ ಸಂಕೇತಗಳನ್ನು ಸ್ವೀಕರಿಸುತ್ತವೆ. ಇದರಿಂದಾಗಿ ಇಲಿಗಳು ಡಯೆಟ್​ ನಂತರ ಗಮನಾರ್ಹವಾಗಿ ಹೆಚ್ಚು ತಿನ್ನುತ್ತವೆ. ಮತ್ತು ಇದರಿಂದ ಇಲಿಗಳ ತೂಕ ಕೂಡ ವೇಗವಾಗಿ ಹೆಚ್ಚಾಗುತ್ತದೆ ಎಂಬುದನ್ನು ಸಂಶೋಧನೆ ವೇಳೆ ಸಂಶೋಧಕರು ಕಂಡುಕೊಂಡಿದ್ದಾರೆ.

ಮುಂದಿನ ದಿನಗಳಲ್ಲಿ ಈ ಆವಿಷ್ಕಾರಗಳು ತೂಕ ಹೆಚ್ಚಾಗುವುದನ್ನು ತಡೆಗಟ್ಟಲು ಔಷಧಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಅದಲ್ಲದೇ ಡಯೆಟ್​ ನಂತರ ದೇಹದ ತೂಕವನ್ನು ಕಾಪಾಡಿಕೊಳ್ಳಲು ಕೂಡ ಸಹಾಯ ಮಾಡುತ್ತದೆ ಎಂಬುದನ್ನು ಸಂಶೋಧಕರು ಹೇಳಿದ್ದಾರೆ.

ಅಧ್ಯಯನದ ನೇತೃತ್ವ ವಹಿಸಿದ್ದ ಮ್ಯಾಕ್ಸ್​ ಫ್ಲ್ಯಾಂಕ್​ ಇನ್​ಸ್ಟಿಟ್ಯೂಟ್​ ಫಾರ್​ ಮೆಟಾಬಾಲಿಸಮ್​ ರಿಸರ್ಚ್​ನ ಸಂಶೋಧಕ ಹೆನ್ನಿಂಗ್​ ಫೆನ್ಸಲಾವ್​ನ ಸಂಶೋಧಕರಲ್ಲಿ ಒಬ್ಬರಾದ ಹೆನ್ನಿಂಗ್ ಫೆನ್ಸಲಾವ್, "ಜನರು ಮುಖ್ಯವಾಗಿ ಆಹಾರ ಪದ್ಧತಿಯ ಅಲ್ಪಾವಧಿಯ ಪರಿಣಾಮಗಳನ್ನು ನೋಡಿದ್ದಾರೆ. ದೀರ್ಘಾವಧಿಯಲ್ಲಿ ಮೆದುಳಿನಲ್ಲಿ ಏನೆಲ್ಲ ಬದಲಾವಣೆಗಳು ಆಗುತ್ತವೆ ಎಂಬುದನ್ನು ನೋಡಬೇಕೆಂದುಕೊಂಡೆವು. ಈ ನಿಟ್ಟಿನಲ್ಲಿ, ಸಂಶೋಧಕರು ಇಲಿಗಳನ್ನು ಡಯೆಟ್​ನಲ್ಲಿ ಇರಿಸಿದರು ಮತ್ತು ಮೆದುಳಿನಲ್ಲಿ ಯಾವ ಸರ್ಕ್ಯೂಟ್ ಬದಲಾಗಿದೆ ಎಂಬುದನ್ನು ಗಮನಿಸಿದ್ದಾರೆ.'' ಎಂದು ತಮ್ಮ ಸಂಶೋಧನೆಯ ಬಗ್ಗೆ ವಿವರಿಸಿದ್ದಾರೆ.

ನಿರ್ದಿಷ್ಟವಾಗಿ ಹೇಳುವುದಾದರೆ, ಅವರು ಹೈಪೋಥಾಲಮಸ್‌ನಲ್ಲಿರುವ ನ್ಯೂರಾನ್‌ಗಳ ಗುಂಪನ್ನು ಪರೀಕ್ಷಿಸಿದರು, AgRP ನ್ಯೂರಾನ್‌ಗಳು, ಇದು ಹಸಿವಿನ ಭಾವನೆಯನ್ನು ನಿಯಂತ್ರಿಸುತ್ತದೆ. ಇಲಿಗಳು ಡಯೆಟ್​ನಲ್ಲಿರುವಾಗ AgRP ನ್ಯೂರಾನ್‌ಗಳನ್ನು ಉತ್ತೇಜಿಸುವ ನರಕೋಶದ ಮಾರ್ಗಗಳು ಹೆಚ್ಚಿದ ಸಂಕೇತಗಳನ್ನು ಕಳುಹಿಸುತ್ತವೆ ಎಂಬುದನ್ನು ಕಂಡುಕೊಂಡರು. ಮೆದುಳಿನಲ್ಲಿನ ಈ ಆಳವಾದ ಬದಲಾವಣೆ ಡಯೆಟ್​ನ ನಂತರ ದೀರ್ಘಕಾಲದವರೆಗೆ ಇರುವುದನ್ನು ಗಮನಿಸಬಹುದು.

ಯೋ-ಯೋ ಪರಿಣಾಮ ತಡೆಗಟ್ಟುವುದು:"ಡಯೆಟ್​ ನಂತರ ಗಮನಾರ್ಹವಾಗಿ ಕಡಿಮೆ ತೂಕ ಹೊಂದುವುದಕ್ಕೆ ಕಾರಣವಾಗುವ AgRP ನ್ಯೂರಾನ್‌ಗಳನ್ನು ಸಕ್ರಿಯಗೊಳಿಸುವ ಇಲಿಗಳಲ್ಲಿನ ನರ ಮಾರ್ಗಗಳನ್ನು ಕಂಡುಹಿಡಿಯುವಲ್ಲಿ ಸಂಶೋಧಕರು ಯಶಸ್ವಿಯಾಗಿದ್ದಾರೆ. ಇದು ಯೋ-ಯೋ ಪರಿಣಾಮವನ್ನು ಕಡಿಮೆ ಮಾಡಲು ನಮಗೆ ಅವಕಾಶವನ್ನು ನೀಡುತ್ತದೆ. ದೀರ್ಘಾವಧಿಯಲ್ಲಿ, ಡಯೆಟ್​ ನಂತರ ದೇಹದ ತೂಕ ಕಳೆದುಕೊಳ್ಳುವುದನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ಮಾನವರಿಗೆ ಚಿಕಿತ್ಸೆಗಳನ್ನು ಕಂಡು ಹಿಡಿಯುವುದು ನಮ್ಮ ಗುರಿಯಾಗಿದೆ. ಇದನ್ನು ಸಾಧಿಸಲು, ನಾವು ಮಾನವರಲ್ಲಿ ನರಗಳ ಮಾರ್ಗಗಳನ್ನು ಬಲಪಡಿಸುವ ಕಾರ್ಯವಿಧಾನಗಳನ್ನು ಹೇಗೆ ನಿರ್ಬಂಧಿಸಬಹುದು ಎಂಬುದನ್ನು ಅನ್ವೇಷಿಸುತ್ತೇವೆ." ಎಂದು ಫೆನ್ಸೆಲಾವ್ ಹೇಳುತ್ತಾರೆ.

"ಇದು ನರಗಳ ವೈರಿಂಗ್ ರೇಖಾಚಿತ್ರಗಳು ಹಸಿವನ್ನು ಹೇಗೆ ನಿಯಂತ್ರಿಸುತ್ತವೆ ಎಂಬುದರ ಬಗ್ಗೆ ತಿಳುವಳಿಕೆಯನ್ನು ಹೆಚ್ಚಿಸುತ್ತದೆ. ನಾವು ಈ ಹಿಂದೆ ದೈಹಿಕವಾಗಿ ಸಿನಾಪ್ಸ್ ಮತ್ತು AgRP ಹಸಿವಿನ ನ್ಯೂರಾನ್‌ಗಳನ್ನು ಪ್ರಚೋದಿಸುವ ಅಪ್‌ಸ್ಟ್ರೀಮ್ ನ್ಯೂರಾನ್‌ಗಳ ಪ್ರಮುಖ ಗುಂಪನ್ನು ಬಹಿರಂಗಪಡಿಸಿದ್ದೆವು. ನಮ್ಮ ಪ್ರಸ್ತುತ ಅಧ್ಯಯನದಲ್ಲಿ, ಈ ಎರಡು ನ್ಯೂರಾನ್‌ಗಳ ನಡುವಿನ ಭೌತಿಕ ನರಪ್ರೇಕ್ಷಕ ಸಂಪರ್ಕವನ್ನು ನಾವು ಕಂಡುಕೊಂಡಿದ್ದೇವೆ, ಸಿನಾಪ್ಟಿಕ್ ಪ್ಲಾಸ್ಟಿಟಿ ಎಂಬ ಪ್ರಕ್ರಿಯೆಯಲ್ಲಿ, ಹೆಚ್ಚಾದ ಡಯೆಟ್​ ಹಾಗೂ ತೂಕ ನಷ್ಟ ದೀರ್ಘಕಾಲದ ಅತಿಯಾದ ಹಸಿವಿಗೆ ಕಾರಣವಾಗುತ್ತದೆ" ಎಂದು ಹಾರ್ವರ್ಡ್ ವೈದ್ಯಕೀಯ ಶಾಲೆಯ ಸಹ-ಲೇಖಕ ಬ್ರಾಡ್‌ಫೋರ್ಡ್ ಲೋವೆಲ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ:ತೂಕ ನಿರ್ವಹಣೆಗೆ ಸಿಹಿ ತ್ಯಜಿಸಬೇಡಿ; ಪರ್ಯಾಯ ಬಳಕೆ ಮಾಡಿ

ABOUT THE AUTHOR

...view details