ನ್ಯೂ ಯಾರ್ಕ್: ಅಕಾಲಿಕ ಸಾವು ತಡೆಯುವಲ್ಲಿ ನಡಿಗೆ ಪ್ರಮುಖ ಪಾತ್ರವಹಿಸುತ್ತದೆ. ವಾರದಲ್ಲಿ 8000 ನಡಿಗೆ ಅಂದರೆ ನಾಲ್ಕು ಮೈಲಿ ದೂರ ನಡೆಯುವುದರಿಂದ ಅಕಾಲಿಕ ಸಾವು ತಡೆಯಬಹುದು ಎಂದು ಹೊಸ ಅಧ್ಯಯನ ತಿಳಿಸಿದೆ. ನಿಯಮಿತ ವ್ಯಾಯಾಮದ ವಾಕಿಂಗ್ನಂತಹ ಅಭ್ಯಾಸಗಳಿಂದ ಅಕಾಲಿಕ ಸಾವಿನ ಅಪಾಯ ತಡೆಯಬಹುದು ಎಂದು ಜಾಮಾ ನೆಟ್ವರ್ಕ್ ಜರ್ನಲ್ನಲ್ಲಿ ಪ್ರಕಟಿಸಲಾಗಿದೆ. ವಾರದಲ್ಲಿನ ಒಂದು ಅಥವಾ ಎರಡು ದಿನಗಳ ಬಿರುಸಿನ ನಡಿಗೆ ಯಾವ ರೀತಿ ಆರೋಗ್ಯ ಪ್ರಯೋಜನ ಹೊಂದಿದೆ ಎಂದು ತಿಳಿಸಿದೆ.
8 ಸಾವಿರ ನಡಿಗೆ: ವಾರದಲ್ಲಿ ಒಂದೆರಡು ದಿನ 8 ಸಾವಿರ ನಡಿಗೆಯನ್ನು ನಡೆದವರು, ಈ ರೀತಿ ಅಭ್ಯಾಸ ಹೊಂದಿಲ್ಲದವರಿಗಿಂತ 10 ವರ್ಷಗಳ ಕಾಲ ಹೆಚ್ಚು ಜೀವಿಸಿರುವುದು ಅಧ್ಯಯನ ಫಲಿತಾಂಶದಿಂದ ತಿಳಿದು ಬಂದಿದೆ. ಅದರಲ್ಲೂ ವಾರದಲ್ಲಿ ಏಳು ದಿನಗಳ ಕಾಲ 8 ಸಾವಿರ ನಡಿಗೆ ಅಭ್ಯಾಸ ಹೊಂದಿರುವವರ ಶೇ 16.5ರಷ್ಟು ಕಡಿಮೆ ಸಾವಿನ ಅಪಾಯ ಹೊಂದಿದ್ದಾರೆ. ಈ ಅಧ್ಯಯನಕ್ಕಾಗಿ ಶೇ 65 ಮತ್ತು ಅದಕ್ಕಿಂತ ಹೆಚ್ಚಿನ ವಯೋಮಾನದವರನ್ನು ಅಧ್ಯಯನಕ್ಕೆ ಒಳಪಡಿಸಿಕೊಳ್ಳಲಾಗಿದೆ.
ವಾರದಲ್ಲಿನ ದಿನಗಳ ಸಂಖ್ಯೆಗೆ ಅನುಗುಣವಾಗಿ 8000 ನಡಿಗೆಯು ಹೃದಯ ಸಂಬಂಧಿ ಸಾವು ಸೇರಿದಂತೆ ಇನ್ನಿತರ ಕಾರಣದ ಸಾವಿನ ಅಪಾಯ ಕಡಿಮೆ ಮಾಡುವುದರೊಂದಿಗೆ ಸಂಬಂಧ ಹೊಂದಿದೆ ಎಂದು ಜಪಾನ್ನ ಕ್ಯೊಟೊ ವಿಶ್ವವಿದ್ಯಾಲಯ ಮತ್ತು ಅಮೆರಿಕದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲ ತಿಳಿಸಿದೆ. ವಾರದಲ್ಲಿ ಒಂದೆರಡು ದಿನ ವಾಕ್ ಮಾಡುವುದರಿಂದಲೂ ಸಾಕಷ್ಟು ಪ್ರಯೋಜನವಿದೆ ಎಂದು ಅಧ್ಯಯನ ಫಲಿತಾಂಶ ತಿಳಿಸಿದೆ.