ವಾಷಿಂಗ್ಟನ್: ಡ್ರೈ ಫ್ರೂಟ್ಸ್‌ನ ಪೋಷಕಾಂಶಗಳ ಕಣಜ. ಬಾದಾಮಿ ಅಥವಾ ಬಡವರ ಬಾದಾಮಿ ಶೇಂಗಾದಲ್ಲೂ ಅಷ್ಟೇ ಪೋಷಕಾಂಶದ ಆಗರವಿದೆ. ಈ ವಿಷಯವಾಗಿ ಒಂದು ಅಧ್ಯಯನ ನಡೆದಿದೆ. ಈ ಅಧ್ಯಯನದ ಪ್ರಕಾರ ಪ್ರತಿಯೊಬ್ಬರು ಪ್ರತಿದಿನ ಕೆಲವೊಂದಿಷ್ಟು ಬಾದಾಮಿ ಸೇವಿಸಿದರೆ ನಿಮ್ಮ ಕರುಳಿನ ಆರೋಗ್ಯ ಸದೃಢವಾಗಿರುತ್ತದೆ ಎಂದು ತಿಳಿಸಿದೆ.
ದೇಹದ ಕರುಳಿನ ಸಣ್ಣ ಸರಪಳಿಯಲ್ಲಿರುವ ಕೊಬ್ಬಿನ ಆಮ್ಲ ಬ್ಯುಟೈರೇಟ್ ಸಂಶ್ಲೇಷಣೆ( butyrate synthesis) ಯನ್ನು ಉತ್ತಮಗೊಳಿಸುತ್ತಿದೆ ಎಂಬುವುದರ ಕುರಿತು ಲಂಡನ್‌ನ ಕಿಂಗ್ಸ್ ಕಾಲೇಜ್ ಸಂಶೋಧಕರ ತಂಡವು ಕರುಳಿನ ಸೂಕ್ಷ್ಮಜೀವಿಗಳ ಸಂಯೋಜನೆಯ ಮೇಲೆ ಬಾದಾಮಿ ಪ್ರಭಾವ ಎಂಬ ಅಧ್ಯಯನ ವೇಳೆ ಗೊತ್ತಾಗಿದೆ.
ಪೋಷಕಾಂಶಗಳ ಜೀರ್ಣಿಸಿಕೊಳ್ಳುವಲ್ಲಿ ಬಾದಾಮಿ ಪಾತ್ರ:ಅಮೆರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್‌ನಲ್ಲಿ ಈ ವರದಿಯನ್ನು ಪ್ರಕಟಿಸಿದ್ದು, ಕ್ಯಾಲಿಫೋರ್ನಿಯಾದ ಆಲ್ಮಂಡ್ ಬೋರ್ಡ್‌ನಿಂದ ಧನಸಹಾಯ ಪಡೆದಿದೆ. ಕರುಳಿನಲ್ಲಿ ಸಾವಿರಾರು ಸೂಕ್ಷ್ಮ ಜೀವಿಗಳು ಇರುತ್ತವೆ. ಅವು ಪೋಷಕಾಂಶಗಳನ್ನು ಜೀರ್ಣಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ, ಜೀರ್ಣಕಾರಿ ಮತ್ತು ಪ್ರತಿರಕ್ಷಣಾ ವ್ಯವಸ್ಥೆಗಳು (Digestive and immune systems)ಸೇರಿದಂತೆ ಆರೋಗ್ಯದ ಮೇಲೆ ಧನಾತ್ಮಕ , ಋಣಾತ್ಮಕ ಪ್ರಭಾವ ಬೀರುತ್ತವೆ ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ.
ಕರುಳಿನ ಸೂಕ್ಷ್ಮಾಣುಜೀವಿಗಳು ಮಾನವನ ಆರೋಗ್ಯದ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎನ್ನುವ ಕುರಿತು ತನಿಖೆ ಕೈಗೊಳ್ಳಲಾಗಿದೆ. ಆದರೆ ಅಧ್ಯಯನದ ಪುರಾವೆಗಳು( evidences) ನಿರ್ದಿಷ್ಟ ರೀತಿಯ ಆಹಾರವನ್ನು ಸೇವಿಸುವುದರಿಂದ ಕರುಳಿನಲ್ಲಿರುವ ಬ್ಯಾಕ್ಟೀರಿಯಾದ ವಿಧಗಳು ,ಅವು ನಮ್ಮ ಕರುಳಿನಲ್ಲಿ ಏನು ಮಾಡುತ್ತವೆ ಅನ್ನುವ ಕುರಿತು ಧನಾತ್ಮಕವಾಗಿ ಪ್ರಭಾವಿಸುತ್ತವೆ ಎಂದು ಸೂಚಿಸುತ್ತದೆ.
ಲಂಡನ್‌ನ ಕಿಂಗ್ಸ್ ಕಾಲೇಜ್‌ನ ಸಂಶೋಧಕರು ಹೇಳುವುದೇನು?:ಈ ಅಧ್ಯಯನದಲ್ಲಿ 87 ಆರೋಗ್ಯವಂತ ವಯಸ್ಕರನ್ನು ಲಂಡನ್‌ನ ಕಿಂಗ್ಸ್ ಕಾಲೇಜ್‌ನ ಸಂಶೋಧಕರು ನೇಮಿಸಿಕೊಂಡಿದ್ದರು. ಸಂಶೋಧಕರು ಶಿಫಾರಸು ಮಾಡಿರುವ ಆಹಾರದ ಫೈಬರ್‌ನ (dietary fiber)ಪ್ರಮಾಣಕ್ಕಿಂತ ಕಡಿಮೆ ತಿನ್ನುತ್ತಿದ್ದರು ಹಾಗೂ ವಿಶಿಷ್ಟವಾದ ಅನಾರೋಗ್ಯಕರ ತಿಂಡಿಗಳನ್ನು ಸಹ (ಉದಾ. ಚಾಕೊಲೇಟ್, ಕ್ರಿಸ್ಪ್ಸ್) ತಿನ್ನುತ್ತಿದ್ದರು. ಈ 87 ಆರೋಗ್ಯವಂತರನ್ನು ಮೂರು ಗುಂಪುಗಳಾಗಿ ವಿಂಗಡಿಸಲಾಗಿತ್ತು.
ಒಂದು ಗುಂಪು ದಿನಕ್ಕೆ 56 ಗ್ರಾಂ. ಸಂಪೂರ್ಣ ಬಾದಾಮಿಗೆ ತಮ್ಮ ತಿಂಡಿಗಳನ್ನು ಬದಲಾಯಿಸಿತು, ಮತ್ತೊಂದು ಗುಂಪು ಇನ್ನೊಂದು ದಿನಕ್ಕೆ 56 ಗ್ರಾಂ ನೆಲದ ಬಾದಾಮಿಗೆ ಸೇವಿಸಿತು. ಇನ್ನೊಂದು ನಿಯಂತ್ರಣ ಗುಂಪು ( control group)ಶಕ್ತಿಗೆ ಅನುಕೂಲವಾಗುವ ಮಫಿನ್‌ಗಳನ್ನು ನೀಡಲಾಗುತ್ತಿತ್ತು.. ನಾಲ್ಕು ವಾರಗಳ ಕಾಲ ಈ ಅಧ್ಯಯನ ನಡೆಯಿತು. ಮಫಿನ್ ಸೇವಿಸುವವರಿಗೆ ಹೋಲಿಸಿದರೆ ಬಾದಾಮಿ ತಿನ್ನುವವರಲ್ಲಿ ಬ್ಯುಟೈರೇಟ್ ಗಮನಾರ್ಹವಾಗಿ ಹೆಚ್ಚಾಗುತ್ತದೆ ಎಂದು ಸಂಶೋಧಕರು ತಿಳಿದುಕೊಂಡರು.