ಹೈದರಾಬಾದ್: ಸಮೀಪ ದೃಷ್ಟಿ ದೋಷ ಹೊಂದಿರುವ ರೋಗಿಗಳಲ್ಲಿ ದೀರ್ಘಕಾಲೀನ ದೃಷ್ಟಿ ಹೀನತೆ ಅಪಾಯವನ್ನು ಹೊಂದಬಹುದು. ಈ ಹಿನ್ನೆಲೆ ಇಂತಹ ಅಪಾಯವನ್ನು ಮುಂಚಿತವಾಗಿ ಕಂಡುಹಿಡಿದು ಈ ಬಗ್ಗೆ ಎಚ್ಚರಿಕೆ ನೀಡುವ ಹೊಸ ಕೃತಕ ಬುದ್ಧಿಮತ್ತೆ (ಎಐ) ಮಾದರಿಯನ್ನು ಜಪಾನಿನ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ.
ಟೋಕಿಯೋ ವೈದ್ಯಕೀಯ ಮತ್ತು ದಂತ ವಿಶ್ವವಿದ್ಯಾನಿಯಲದ ತಂಡವು ಈ ಅವಿಷ್ಕಾರ ಮಾಡಿದೆ. ಈ ಸಾಧನವೂ ಯಂತ್ರ ಕಲಿಕೆ ಮಾದರಿಯ ದೀರ್ಘಾವಧಿಯ ದೃಷ್ಟಿ ಹೀನತೆಯ ಅಪಾಯವನ್ನು ಊಹಿಸಲು ಸಹಾಯ ಮಾಡುತ್ತದೆ.
ಏನಿದು ದೃಷ್ಟಿ ಹೀನತೆ ಸಮಸ್ಯೆ: ಸಮೀಪ ದೃಷ್ಟಿದೋಷ ಹೊಂದಿರುವವರು ಹತ್ತಿರದ ವಸ್ತುಗಳನ್ನು ಸರಿಯಾಗಿ ನೋಡುವ ಸಾಮರ್ಥ್ಯವನ್ನು ಹೊಂದಿದ್ದರು, ದೂರದ ವಸ್ತುಗಳನ್ನು ನೋಡಲಾರರು. ಇದನ್ನು ಕನ್ನಡ, ಕಾಂಟಾಕ್ಟ್ ಲೆನ್ಸ್ ಮತ್ತು ಸರ್ಜರಿ ಮೂಲಕ ಸರಿಪಡಿಸಬಹುದಾಗಿದೆ. ಆದರೆ. ಗಂಭೀರ ಪರಿಣಾಮದ ಸಮೀಪ ದೃಷ್ಟಿ ದೋಷ ಹೊಂದಿರುವವರು ಕಾಲ ಕ್ರಮೇಣವಾಗಿ ದೃಷ್ಟಿ ಹೀನತೆ ಹೊಂದಬಹುದಾಗಿದೆ.
ಈ ರೀತಿ ದೀರ್ಘ ಕಾಲದ ದೃಷ್ಟಿಯನ್ನು ಕಳೆದುಕೊಳ್ಳುವ ಸಮಸ್ಯೆಯಿಂದ ಜಾಗತಿಕವಾಗಿ ಅನೇಕ ಮಂದಿ ಬಳಲುತ್ತಿದ್ದಾರೆ. ಇದರಿಂದ ಅವರು ಆರ್ಥಿಕ ಮತ್ತು ದೈಹಿಕವಾಗಿ ಕುಗ್ಗಿ ಬೇರೆಯವರ ಮೇಲೆ ಅವಲಂಬನೆಗೆ ಒಳಗಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. 2019ರಲ್ಲಿ ಈ ಸಮಸ್ಯೆಯಿಂದ 9.45 ಬಿಲಿಯನ್ ಡಾಲರ್ ಜಾಗತಿಕ ಉತ್ಪಾದಕತೆ ಮೇಲೆ ಪರಿಣಾಮ ಬೀರಿದೆ.