ಕೊಲೊಂಬಸ್ (ಅಮೆರಿಕ): ಅಧಿಕ ತೂಕ ಹೊಂದಿರುವ ಗರ್ಭಿಣಿಯರು ತಮ್ಮ ಗುರಿ ಮತ್ತು ಯೋಜನೆ ಅಭಿವೃದ್ಧಿಪಡಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಆದರೆ, ತಮ್ಮ ಡಯಟ್ ಮೂಲಕ ತೂಕ ಕಡಿಮೆ ಮಾಡುವುದು ಕಷ್ಟಕರವಾಗಿರುತ್ತದೆ ಎಂದು ಹೊಸ ಸಂಶೋಧನೆ ತಿಳಿಸಿದೆ. ಈ ಹಿಂದಿನ ಸಂಶೋಧನೆಯಲ್ಲಿ, ತಾಯಿಯ ಆಹಾರದ ಗುಣಮಟ್ಟವು ಪ್ರಸವಪೂರ್ವ ಬೆಳವಣಿಗೆ ಮತ್ತು ದೀರ್ಘಾವಧಿಯ ಮಗುವಿನ ಆರೋಗ್ಯದ ಫಲಿತಾಂಶಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ತೋರಿಸಿದೆ.
ಆದರೆ, ಗರ್ಭಾವಸ್ಥೆಯಲ್ಲಿ ಸಾಮಾನ್ಯವಾಗಿ ಹೆಚ್ಚಾಗುವ ಒತ್ತಡ ಭ್ರೂಣದ ಆರೋಗ್ಯದ ಕಾಳಜಿ ಮತ್ತು ಮುಂಬರುವ ಆತಂಕದಿಂದ ಹೆಚ್ಚಾಗಿ ಉಲ್ಬಣಗೊಳ್ಳುತ್ತದೆ. ಆರೋಗ್ಯಕರ ಆಹಾರದ ಮೇಲೆ ಕೇಂದ್ರೀಕರಿಸುವ ಪ್ರಯತ್ನಗಳನ್ನು ಕೂಡ ಇದು ವ್ಯತ್ಯಾಸವಾಗುವಂತೆ ಮಾಡುತ್ತದೆ.
ಓಹಿಯೋ ರಾಜ್ಯ ವಿಶ್ವವಿದ್ಯಾಲಯ ನಡೆಸಿದ ಸಂಶೋಧನೆಯಲ್ಲಿ ಒತ್ತಡ ಮತ್ತು ಒಟ್ಟು ಕೊಬ್ಬಿನ ಸೇವನೆಯ ನಡುವಿನ ಮಾರ್ಗವನ್ನು ಗುರುತಿಸಲು ಮುಂದಾಗಲಾಗಿದೆ ಅಧಿಕ ತೂಕ ಅಥವಾ ಬೊಜ್ಜು ಹೊಂದಿರುವ ಗರ್ಭಿಣಿ ಮಹಿಳೆಯರ ಆಹಾರಕ್ರಮವನ್ನು ಸುಧಾರಿಸಲು ವಿನ್ಯಾಸಗೊಳಿಸಿ ಈ ಸಂಬಂಧ ಯೋಜನೆ ಕಾರ್ಯಗತಗೊಳಿಸಲಾಗಿದೆ. ಈ ಯೋಜನೆಯಲ್ಲಿ ಒತ್ತಡ ಹೆಚ್ಚಿರುವ ಮಹಿಳೆಯರಲ್ಲಿ ದುರ್ಬಲಗೊಂಡಿರುವುದು ಬಯಲಾಗಿದೆ. ಅಲ್ಲದೇ ಆ ಕೌಶಲ್ಯದ ಅಂತರವು ಹೆಚ್ಚಿನ ಒಟ್ಟು ಕೊಬ್ಬಿನ ಸೇವನೆಯೊಂದಿಗೆ ಸಂಬಂಧ ಹೊಂದಿದೆ ಎಂದು ತಿಳಿದು ಬಂದಿದೆ
ಒತ್ತಡದಿಂದ ತಿನ್ನುವ ಬಗ್ಗೆ ಕಾಳಜಿ ಮರೆ: ಜನರ ಯೋಜನೆ, ಅವರ ಗುರಿ ಜಾರಿ, ನಡವಳಿಕೆ ನಿರ್ವಹಣೆಯಂತಹ ಬಹು ಆಲೋಚನೆ ಪ್ರಕ್ರಿಯೆ ಮೂಲಕ ಈ ಯೋಜನೆ ಕಾರ್ಯಗತಗೊಳಿಸಲಾಗಿದೆ. ಅಧಿಕ ಒತ್ತಡ ಹೊಂದಿರುವ ಜನರು ಅಧಿಕ ಕೊಬ್ಬಿನಾಂಶ ಸೇವನೆ ಮಾಡುತ್ತಾರೆ. ಒತ್ತಡ ಅಧಿಕವಾಗಿದ್ದಾಗ ಬೇರೆ ಏನನ್ನೂ ಯೋಚಿಸುವುದಿಲ್ಲ. ಈ ವೇಳೆ ಏನು ತಿನ್ನುತ್ತೇವೆ ಎಂಬುದಕ್ಕೂ ಗಮನ ನೀಡುವುದಿಲ್ಲ ಎಂದು ಮುಖ್ಯ ಲೇಖಕ ಮೈ ವೈ ಚಂಗ್ ತಿಳಿಸಿದ್ದಾರೆ.