ನವದೆಹಲಿ: ಶೇ 80ರಷ್ಟು ಭಾರತೀಯರು ಮಾನಸಿಕ ಆರೋಗ್ಯ ವಿಚಾರದಲ್ಲಿ ಚಿಕಿತ್ಸೆ ಪಡೆಯುವುದಿಲ್ಲ. ಇದರ ಬಗ್ಗೆ ಅವರಲ್ಲಿ ಅರಿವಿನ ಕೊರತೆ ಇದೆ. ನಿರ್ಲಕ್ಷ್ಯ ಮತ್ತು ಕಳಂಕದ ರೀತಿಯಲ್ಲೇ ಈ ಸಮಸ್ಯೆಯನ್ನು ಅವರು ನೋಡುತ್ತಾರೆ ಎಂದು ಎಂದು ವೈದ್ಯರು ಹೇಳುತ್ತಿದ್ದಾರೆ.
ದೈಹಿಕ ಆರೋಗ್ಯದಂತೆ ಮಾನಸಿಕ ಆರೋಗ್ಯವೂ ಶಿಕ್ಷಣ ವ್ಯವಸ್ಥೆಯ ಅಂತರ್ಭಾಗವಾಗಬೇಕು ಎಂಬ ಅರಿವು ಮೂಡಿಸುವ ಪ್ರಯತ್ನ ನಡೆಸಬೇಕು. ಮಾನಸಿಕ ಸಮಸ್ಯೆಗಳ ವಿಶಾಲ ವ್ಯಾಪ್ತಿಯನ್ನು ಅರ್ಥಮಾಡಿಕೊಳ್ಳಬೇಕು ಎಂದು ಇದೇ ವೇಳೆ ಅವರು ಸಲಹೆ ನೀಡಿದರು. ಮಾನಸಿಕ ಆರೋಗ್ಯ ವಿಚಾರದ ಅರ್ಥೈಸಿಕೊಳ್ಳುವಿಕೆ ಮತ್ತು ಜಾಗೃತಿಯ ಕೊರತೆ ಜನರಲ್ಲಿದೆ. ಈ ಹಿನ್ನೆಲೆಯಲ್ಲಿ ಅನೇಕ ಪ್ರಕರಣಗಳು ಪತ್ತೆಯಾಗುವುದೇ ಇಲ್ಲ ಎಂದು ಏಮ್ಸ್ನ ಸೈಕಿಯಾಟ್ರಿಕ್ ವಿಭಾಗದ ಡಾ.ನಂದ ಕುಮಾರ್ ತಿಳಿಸಿದರು.
ಅನಾರೋಗ್ಯಕ್ಕೆ ಒಳಗಾಗದೇ ಆಕೆ ಅಥವಾ ಆತನಿಗೆ ಚಿಕಿತ್ಸೆ ಬೇಕು ಎಂದು ತಿಳಿದುಕೊಳ್ಳದೇ ಇದ್ದರೆ, ಅವರು ಹೇಗೆ ಚಿಕಿತ್ಸೆ ಪಡೆಯುತ್ತಾರೆ? ರೋಗಲಕ್ಷಣಗಳನ್ನು ಗುರುತಿಸುವ ಮತ್ತು ಚಿಕಿತ್ಸೆಯನ್ನು ಪ್ರಾರಂಭಿಸುವ ಸಮಯದ ನಡುವೆ ಸಾಮಾನ್ಯವಾಗಿ ದೊಡ್ಡ ಅಂತರವಿರುತ್ತದೆ. ಹೀಗಾಗಿ ಸಂಕೀರ್ಣತೆಗಳು ಹೆಚ್ಚುತ್ತವೆ ಎಂದರು.
ಮಾನಸಿಕ ಆರೋಗ್ಯ ಸಮಸ್ಯೆಗಳು ವಿಶಾಲ ವ್ಯಾಪ್ತಿ ಹೊಂದಿವೆ. ನಿದ್ರಾಹೀನತೆ, ಸೌಮ್ಯ ಆತಂಕ ಮತ್ತು ಖಿನ್ನತೆಯಿಂದ ತೀವ್ರತರ ಮನಸ್ಥಿತಿ ಸಮಸ್ಯೆ, ಸೈಕೋಸಿಸ್ನಂತಹ ಹಲವು ಸಮಸ್ಯೆಗಳಿರುತ್ತದೆ. ಸಮಸ್ಯೆ ಇದ್ದಲ್ಲಿ ರೋಗಿಗೆ ನಿಖರ ಸಮಸ್ಯೆಯನ್ನು ಅರಿತುಕೊಳ್ಳಲು ಅಥವಾ ಗುರುತಿಸಲು ಕಷ್ಟವಾಗುತ್ತದೆ ಎಂದು ಡಾ.ಕುಮಾರ್ ತಿಳಿಸಿದ್ದಾರೆ.
ಯುವ ಜನತೆಯ ಸಮಸ್ಯೆ ನಿರ್ಲಕ್ಷ್ಯ: ಮಾನಸಿಕ ಆರೋಗ್ಯ ಸಮಸ್ಯೆಗಳು ಸಾಮಾನ್ಯವಾಗಿ ಹದಿ ಹರೆಯದವರ ಸಮಸ್ಯೆ ಎಂದು ತಪ್ಪಾಗಿ ಗುರುತಿಸುವ ಹಿನ್ನೆಲೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಯುವ ಜನತೆ ಇದರಿಂದ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದಾರೆ. ಇದಕ್ಕಿಂತ ಹೆಚ್ಚಾಗಿ ಇದು ಮಾನಸಿಕ ಸಮಸ್ಯೆ ಎಂಬ 'ಬಿರುದು' ಹೊಂದಿದ್ದು, ಇವರಿಗೆ ಚಿಕಿತ್ಸೆ ನೀಡುವ ಬದಲಾಗಿ ತಾರತಮ್ಯದಿಂದ ಕಾಣುವ ಪ್ರವೃತ್ತಿ ಇದೆ ಎಂದರು.
ಮನೋವಿಜ್ಞಾನಿ ಸೃಷ್ಟಿ ಅಸ್ತಾನ ಮಾತನಾಡಿ, ಸರಿಯಾದ ಸಮಯದಲ್ಲಿ ನೀಡುವ ಚಿಕಿತ್ಸೆಯಿಂದಾಗಿ ಜನರು ಸಹಾಯ ಕೇಳುವುದನ್ನು ತಡೆಗಟ್ಟಬಹುದು. ಈ ಚಿಕಿತ್ಸೆಯು ಖಾಸಗಿ ವಲಯದಲ್ಲಿ ಕೊಂಚ ವೆಚ್ಚದಾಯಕ. ಈ ನಡುವೆ ಸರ್ಕಾರ ಇದಕ್ಕೆ ಚಿಕಿತ್ಸೆ ಆರಂಭಿಸಿದ್ದು, ಅನೇಕ ಮಂದಿ ಅನಾನುಕೂಲತೆಯಿಂದ ಹೋಗುವುದಿಲ್ಲ ಎಂದರು.