ಲಂಡನ್: 1850ರ ಸರಣಿಯಲ್ಲಿ 2023 ಭೂಮಿ ಮೇಲಿನ ಅತ್ಯಂತ ಬೆಚ್ಚಗಿನ ವರ್ಷ ಆಗಿದೆ ಎಂದು ಯುಕೆಯಲ್ಲಿನ ಮೆಟ್ ಆಫೀಸ್ ಮತ್ತು ಈಸ್ಟ್ ಆಂಗ್ಲಿಯಾ ವಿಶ್ವವಿದ್ಯಾಲಯ ಬಿಡುಗಡೆ ಮಾಡಿದ ವರದಿ ತಿಳಿಸಿದೆ.
1850-1900ರ ಕೈಗಾರಿಕಾ ಪೂರ್ವ ಅವಧಿಗೆ ಹೋಲಿಕೆ ಮಾಡಿದಾಗ 2023ರಲ್ಲಿ ಭೂಮಿಯ ಜಾಗತಿಕ ಶಾಖವೂ 1.0 ಡಿಗ್ರಿ ಸೆಲ್ಸಿಯಸ್ಗೆ ಮೀರಿದೆ. 2023ರಲ್ಲಿ ಜಾಗತಿಕ ಸರಾಸರಿ ತಾಪಮಾನವೂ 1.46ಡಿಗ್ರಿ ಸೆಲ್ಸಿಯಸ್ ಇದ್ದು, ಇದು ಕೈಗಾರಿಕಾ ಪೂರ್ವ ಅವಧಿಕ್ಕಿಂತ ಹಾಗೂ 2016ರ 0.17 ಡಿಗ್ರಿ ಸೆಲ್ಸಿಯಸ್ ಬೆಚ್ಚಗಿನ ತಾಪಮಾನಕ್ಕಿಂತಲೂ ಹೆಚ್ಚಿದೆ.
174 ವರ್ಷಗಳಿಗೆ ಹೋಲಿಕೆ ಮಾಡಿದಾಗ 2023 ಅತಿ ಹೆಚ್ಚು ತಾಪಮಾನದ ವರ್ಷವಾಗಿದೆ ಎಂದು ದೃಢಪಟ್ಟಿದೆ. ಈ ಮೂಲಕ 2023 ದಾಖಲೆಯನ್ನು ಸಹ ಮಾಡಿದೆ. 2023ರಲ್ಲಿ ಜೂನ್ನಲ್ಲಿ ದಾಖಲೆ ಮಟ್ಟದ ಉಷ್ಣಾಂಶ ದಾಖಲಾಗಿದೆ. ಏಪ್ರಿಲ್ನಿಂದಲೂ ಸಾಗರದ ಮೇಲ್ಮೈ ತಾಪಮಾನವೂ ದಾಖಲೆಯಾಗಿದೆ ಎಂದು ಹವಾಮಾನ ಇಲಾಖೆ ಕಚೇರಿಯ ಹವಾಮಾನ ನಿರ್ವಹಣೆ ಮತ್ತು ಸಂಶೋಧನಾ ವಿಜ್ಞಾನಿ ಡಾ ಕಾಲಿನ್ ಮೋರಿಸ್ ತಿಳಿಸಿದ್ದಾರೆ.
ಭೂಮಿಯು ವರ್ಷದಿಂದ ವರ್ಷಕ್ಕೆ 1.25ಡಿಗ್ರಿ ಸೆಲ್ಸಿಯಸ್ ಬೆಚ್ಚಗೆ ಆಗುತ್ತಿದೆ. ವ್ಯತ್ಯಾಸಗಳು ಕೈಗಾರಿಕಾ ಪೂರ್ವಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ತಾಪಮಾನ ಏರಿಕೆ ಕಾಣುತ್ತಿದ್ದು, ಇದು ಹಸಿರು ಮನೆ ಹೊರಸೂಸುವಿಕೆಗೆ ಮತ್ತು ಮಾನವ ಪ್ರೇರಿತ ಹವಾಮಾನ ಬದಲಾವಣೆಗೆ ಕಾರಣವಾಗುತ್ತಿದೆ. ಈ ದೀರ್ಘಾವಧಿಯ ಉಷ್ಣತೆ ಮೇಲೆ ಎಲ್ ನಿನೋ ಪರಿಸ್ಥಿತಿಯ ಕೊಡುಗೆ ಕೂಡ ಇದೆ.