ಭಾರತೀಯ ಅಡುಗೆಯಲ್ಲಿ ಎಣ್ಣೆಗೆ ಪ್ರಮುಖ ಸ್ಥಾನ. ಪ್ರತಿ ಅಡುಗೆಯಲ್ಲಿ ಸಾಕಷ್ಟು ಎಣ್ಣೆಯನ್ನು ಬಳಕೆ ಮಾಡುತ್ತೇವೆ. ಆಹಾರದ ರುಚಿ ಹೆಚ್ಚಿಸುವಲ್ಲಿ ಎಣ್ಣೆy ಅವಶ್ಯಕತೆ ಇರುವ ಹಿನ್ನೆಲೆ ಕೆಲವರು ಅಡುಗೆ ಬಳಿಕವೂ ಎಣ್ಣೆಯನ್ನು ಮತ್ತಷ್ಟು ಸೇರಿಸುತ್ತಾರೆ. ಇದರ ಹೊರತಾಗಿ ಕೆಲವರು ವನಸ್ಪತಿಯನ್ನು ಬಳಕೆ ಮಾಡುತ್ತಾರೆ. ಅಡುಗೆ ರುಚಿ ಹೆಚ್ಚಿಸಿದರೂ ಅತಿಯಾದ ಎಣ್ಣೆಯನ್ನು ಬಳಕೆ ಮಾಡುವುದು ಸರಿಯಲ್ಲ. ಇದರಿಂದ ರಕ್ತನಾಳದಲ್ಲಿ ಹೆಪ್ಪುಗಟ್ಟುವಿಕೆ (ಕ್ಲಾಟ್) ಆಗುವ ಸಾಧ್ಯತೆಯೂ ಇದೆ. ಜೊತೆಗೆ ಅಧಿಕ ರಕ್ತದೊತ್ತಡ ಮತ್ತು ಹೃದಯ ಸಮಸ್ಯೆಗೆ ಇದು ಕಾರಣವಾಗುವ ಹಿನ್ನೆಲೆ ಎಣ್ಣೆ ಬಳಕೆಯಲ್ಲಿ ಜಾಗ್ರತೆ ವಹಿಸುವುದು ಮುಖ್ಯವಾಗುತ್ತದೆ.
ಈಅಂಶ ತಿಳಿಯಿರಿ: ಎಣ್ಣೆ ಬಳಕೆ ಅಡುಗೆ ಮಾಡುವುದು ಅಸಾಧ್ಯ. ದೇಹಕ್ಕೆ ವಿಟಮಿನ್ ಎ, ಡಿ, ಇ ಮತ್ತು ಕೆ ಯಿಂದ ಸಮೃದ್ಧವಾದ ಎಣ್ಣೆ ಅವಶ್ಯಕವಾಗಿದೆ. ದೈಹಿಕ ಚಟುವಟಿಕೆಗೆ ಬೇಕಾದ ಶಕ್ತಿಯನ್ನು ಈ ಎಣ್ಣೆ ನೀಡುತ್ತದೆ. ಅನೇಕ ವಿಧದ ಎಣ್ಣೆಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ನಡುವೆ ನಮಗೆ ಯಾವ ಎಣ್ಣೆ ಅವಶ್ಯಕತೆ ಇದೆ ಎಂಬುದನ್ನು ನಾವು ತಿಳಿಯಬೇಕಿದೆ. ಎಣ್ಣೆ ಬೀಜಗಳನ್ನು ಕೋಲ್ಡ್ ಪ್ರೆಸ್ಡ್ ಮಾಡಿದರೆ, ಇದರಲ್ಲಿ ಯಾವುದೇ ರಾಸಾಯನಿಕಗಳು ಇರುವುದಿಲ್ಲ. ಇವುಗಳನ್ನು ಹೆಚ್ಚು ಬಿಸಿ ಕೂಡ ಮಾಡಿರುವುದಿಲ್ಲ. ಇದರ ನೈಸರ್ಗಿಕ ರುಚಿ ಹಾಗೇಯೇ ಇರುತ್ತದೆ. ಇದರಲ್ಲಿ ಒಮೆಗಾ 3 ಫ್ಯಾಟಿ ಆಸಿಡ್ ಮತ್ತು ಆ್ಯಂಟಿಆಕ್ಸಿಡೆಂಟ್ ಇರುತ್ತದೆ.
ರಿಫೈಡ್ ಎಣ್ಣೆ: ರಿಫೈಡ್ ಎಣ್ಣೆಗಳನ್ನು ಎಣ್ಣೆ ಬೀಜಗಳನ್ನು ಬಿಸಿ ಮಾಡುವುದರಿಂದ ತಯಾರಿಸಲಾಗುತ್ತದೆ. ರಾಸಾಯನಿಕ ದ್ರಾವಕಗಳನ್ನು ಕೂಡ ಇದರಲ್ಲಿ ಬೆರೆಸುವ ಮೂಲಕ ದೀರ್ಘಾವಧಿಗೆ ಶುದ್ಧವಾಗಿರುವಂತೆ ಕಾಪಾಡಲಾಗುವುದು. ಈ ಎಣ್ಣೆ ಪ್ರಕ್ರಿಯೆ ವೇಳೆ ಒಮೆಗಾ 3 ಫ್ಯಾಟಿ ಆಸಿಡ್ ಮತ್ತು ಆ್ಯಂಟಿಆಕ್ಸಿಡೆಂಟ್ ಕಣ್ಮರೆಯಾಗುತ್ತದೆ. ಜೊತೆಗೆ ಅಪಾಯಕಾರಿ ರಾಸಾಯನಿಕಗಳನ್ನು ತೆಗೆದು ಹಾಕುತ್ತದೆ. ಉದಾಹರಣೆಗೆ, ಶಿಲೀಂಧ್ರದಿಂದ ಕಲುಷಿತಗೊಂಡ ಕಡಲೆಕಾಯಿಗಳು ಅಫ್ಲಾಟಾಕ್ಸಿನ್ ಎಂಬ ವಿಷವನ್ನು ಹೊಂದಿರಬಹುದು. ಇದು ವಾಂತಿ, ತಲೆ ಸುತ್ತುವಿಕೆ ಮತ್ತು ಹೊಟ್ಟೆ ನೋವಿನ ಸಮಸ್ಯೆಗೆ ಕಾರಣವಾಗುತ್ತದೆ.