ಕರ್ನಾಟಕ

karnataka

By

Published : Oct 29, 2021, 5:56 PM IST

ETV Bharat / state

ಮದುವೆಗೆ ಆಹ್ವಾನ ಪತ್ರಿಕೆ ನೀಡಲು ಹೋದಾಗ ಅರಿಶಿನ, ಕುಂಕುಮ, ಬಳೆ, ಬಟ್ಟೆ ನೀಡಿ ಅಭಿಮಾನಿ ಹಾರೈಸಿದ್ದ ಯುವರತ್ನ

ಅಪ್ಪು ಅವರಿಗೆ ನನ್ನ ಮದುವೆಯ ಆಮಂತ್ರಣ ನೀಡಲು ಹೋದಾಗ ಮನೆಯೊಳಗೆ ಕರೆದು ನಮಗೆ ಅರಿಶಿನ, ಕುಂಕುಮ, ಬಳೆ, ರೇಷ್ಮೆ ಬಟ್ಟೆ ನೀಡಿ ಶುಭ ಹಾರೈಸಿದ್ದರು. ನಿಮ್ಮ ಭಾಗದ ಕಡೆ ಬಂದಾಗ ಖಂಡಿತ ಮನೆಗೆ ಬರುತ್ತೇನೆ ಅಂತ ಹೇಳಿದ್ದರು. ಈಗ ಅವರು ನಮ್ಮಿಂದ ದೂರಾಗಿದ್ದಾರೆ ಎನ್ನುವುದನ್ನ ನಂಬಲಾಗುತ್ತಿಲ್ಲ. ವಿಧಿ ಎಷ್ಟು ಕ್ರೂರಿ, ಅಪ್ಪು ಸರ್ ಪ್ರತಿಯೊಬ್ಬ ಅಭಿಮಾನಿಗಳ ಹೃದಯದಲ್ಲಿದ್ದಾರೆ.

ಮದುವೆಗೆ ಆಹ್ವಾನ ಪತ್ರಿಕೆ ನೀಡಲು ಬಂದಾಗ ಅಭಿಮಾನಿಗೆ ಶುಭ ಹಾರೈಸಿದ್ದ ಅಪ್ಪು
ಮದುವೆಗೆ ಆಹ್ವಾನ ಪತ್ರಿಕೆ ನೀಡಲು ಬಂದಾಗ ಅಭಿಮಾನಿಗೆ ಶುಭ ಹಾರೈಸಿದ್ದ ಅಪ್ಪು

ಯಾದಗಿರಿ : ಕನ್ನಡ ಚಿತ್ರರಂಗದ ಖ್ಯಾತ ನಟ, ಪುನೀತ್ ರಾಜ್​​ಕುಮಾರ್​ ಶುಕ್ರವಾರ ಹೃದಯಘಾತದಿಂದ ನಿಧನರಾಗಿದ್ದು, ಯಾದಗಿರಿ ಜಿಲ್ಲೆಯ ಅಪ್ಪು ಅಭಿಮಾನಿಗಳು ಕಣ್ಣೀರಿನ ವಿದಾಯ ಹೇಳುತ್ತಾ, ಅವರೊಂದಿಗೆ ಕಳೆದ ನೆನಪುಗಳ ಮೆಲುಕು ಹಾಕಿದ್ದಾರೆ.

kನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಪುನೀತ್​ ರಾಜ್​​ಕುಮಾರ್​​ ಜೊತೆ ರೇಣುಕಾ ಎಂ. ಕಾಡಮಗೇರಾ

ಕಂದಾಯ ಇಲಾಖೆ ತಹಶೀಲ್ದಾರ್ ರೇಣುಕಾ ಎಂ. ಕಾಡಮಗೇರಾ ಸಂತಾಪ ಸೂಚಿಸಿದ್ದು, ಅಪ್ಪು ಸರ್ ಇನ್ನಿಲ್ಲ ಎನ್ನುವುದು ಊಹಿಸಿಕೊಳ್ಳಲಾಗುತ್ತಿಲ್ಲ. ಕೋಟ್ಯಧಿಪತಿ ಕಾರ್ಯಕ್ರಮಕ್ಕೆ ಆಯ್ಕೆಯಾಗಿ ಹೋಗಿದ್ದಾಗ ಕಾರ್ಯಕ್ರಮ ಆರಂಭ ಆಗುವುದಕ್ಕಿಂತ ಮುಂಚೆ ನಮ್ಮೊಂದಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದರು.

ಕಾರ್ಯಕ್ರಮ ಬಗ್ಗೆ ಭಯ ಪಡಬೇಡ, ಧೈರ್ಯವಾಗಿ ಆಡಬೇಕು. ನೀನು ಇನ್ನೊಬ್ಬರಿಗೆ ಮಾದರಿಯಾಗಬೇಕು ಎಂದು ಧೈರ್ಯ ನೀಡಿದ್ದರು. ನಾನು 2017 ಕೆಎಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾದಗ ಒಳ್ಳೆಯ, ನಿಷ್ಠಾವಂತ ಅಧಿಕಾರಿಯಾಗಿ ಕೆಲಸ ಮಾಡು ಎಂದು ಹೇಳಿದ್ದರು ಎಂದು ಅಂದಿನ ನೆನಪುಗಳ ನೆನೆದು ಕಣ್ಣೀರು ಹಾಕಿದರು.

kನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಪುನೀತ್​ ರಾಜ್​​ಕುಮಾರ್​​ ಜೊತೆ ರೇಣುಕಾ ಎಂ. ಕಾಡಮಗೇರಾ

ಅಭಿಮಾನಿ ಮುದುಕಪ್ಪ ಚಾಮನಳ್ಳಿ ಮಾತನಾಡಿ, ಅಪ್ಪು ಸರ್ ಅವರ 'ರಾಜ್​​​ಕುಮಾರ' ಸಿನಿಮಾ ನೋಡಿ ನಾನು ಬದುಕುವುದು ಕಲಿತೆ. ಅಪ್ಪು ಅವರ ಅಪ್ಪುಗೆಯಲ್ಲಿ ಬಡವರ ಕಾಳಜಿ ಇತ್ತು. ಅವರನ್ನು ಕಾಣಲು ಅಭಿಮಾನಿಗಳು ಬಂದರೆ ಸ್ವತಃ ತಾವೇ ಖುದ್ದಾಗಿ ಬಂದು ಮನೆಯೊಳಗೆ ಕರೆದು ಕುರಿಸಿ ಮಾತನಾಡಿಸುವ ಗುಣ ಅವರಲ್ಲಿತ್ತು.

ಅಪ್ಪು ಅವರಿಗೆ ನನ್ನ ಮದುವೆಯ ಆಮಂತ್ರಣ ನೀಡಲು ಹೋದಾಗ ಮನೆಯೊಳಗೆ ಕರೆದು ನಮಗೆ ಅರಿಶಿನ, ಕುಂಕುಮ ಬಳೆ ರೇಷ್ಮೆ ಬಟ್ಟೆ ನೀಡಿ ಶುಭ ಹಾರೈಸಿದ್ದರು. ನಿಮ್ಮ ಭಾಗದ ಕಡೆ ಬಂದಾಗ ಖಂಡಿತ ಮನೆಗೆ ಬರುತ್ತೇನೆ ಅಂತ ಹೇಳಿದ್ದರು. ಈಗ ಅವರು ನಮ್ಮಿಂದ ದೂರಾಗಿದ್ದಾರೆ ಎನ್ನುವುದನ್ನ ನಂಬಲಾಗುತ್ತಿಲ್ಲ. ವಿಧಿ ಎಷ್ಟು ಕ್ರೂರಿ, ಅಪ್ಪು ಸರ್ ಪ್ರತಿಯೊಬ್ಬ ಅಭಿಮಾನಿಗಳ ಹೃದಯದಲ್ಲಿದ್ದಾರೆ ಎಂದರು.

ಅಭಿಮಾನಿಗೆ ಶುಭ ಹಾರೈಸಿದ್ದ ಅಪ್ಪು

ಯಾದಗಿರಿ ಗ್ರಾಮೀಣ ಸಿಆರ್​ಪಿ ಆಗಿರುವ ಗುಂಡೂರಾವ್ ಕುಲಕರ್ಣಿ ಅವರು, ನಾನು 2013 ಮಾರ್ಚ್ 12 ರಂದು ಕೋಟ್ಯಧಿಪತಿಗೆ ಹೋಗಿದ್ದಾಗ ಚೆನ್ನೈನ ಎಡಿಎಂ ಸ್ಟುಡಿಯೋದಲ್ಲಿ ಪುನೀತ್ ಸರ್ ಭೇಟಿಯಾಗಿದ್ದರು. ಆ ದಿನ ಅವರೊಂದಿಗೆ ಕಳೆಯಲು ಸ್ವಲ್ಪ ಸಮಯ ಸಿಕ್ಕಿತು. ಸಾಕಷ್ಟು ವಿಷಯಗಳನ್ನು ತಿಳಿದುಕೊಳ್ಳುವ ಕುತೂಹಲ ಅವರಲ್ಲಿತ್ತು.

ಅವರ ಮಾತಿನ ಸ್ವಭಾವದ ಮೇಲೆ ಅವರೆಂತವರೂ ಅಂತ ಗೊತ್ತಾಗುತ್ತಿತ್ತು. ನಾನು ಶಿಕ್ಷಕನಾಗಿದ್ದರಿಂದ ನಮ್ಮೊಂದಿಗೆ ಮಕ್ಕಳಿಗೆ ಹೇಗ ಪಾಠ ಮಾಡುತ್ತೀರಿ, ಏನೆಲ್ಲಾ ಹೇಳಿಕೊಡುತ್ತೀರಿ ಎಂದು ನಮ್ಮಿಂದ ಹೊಸ ವಿಷಯಗಳನ್ನು ತಿಳಿದುಕೊಳ್ಳುತ್ತಿದ್ದರು. ಯಾರಾದರೂ ಒಂದು ಚಿಕ್ಕ ಸಹಾಯ ಮಾಡಿದ್ದರೂ ಆ ಕೆಲಸವನ್ನು ಪ್ರಶಂಸಿಸಿ, ಬೆನ್ನು ತಟ್ಟಿ ಪ್ರೋತ್ಸಾಹಿಸಿ, ಗುರುತಿಸುತ್ತಿದ್ದರು.

ABOUT THE AUTHOR

...view details