ಯಾದಗಿರಿ: ಅಸ್ಪೃಶ್ಯತೆ ಆಚರಣೆ ಮಾಡಲಾಗುತ್ತಿದೆ ಎಂಬ ದೂರಿನ ಮೇರೆಗೆ ಸುರಪುರ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಸತ್ಯನಾರಾಯಣ ಅವರು ಬೊಮ್ಮಗುಡ್ಡ ಗ್ರಾಮಕ್ಕೆ ಭೇಟಿ ನೀಡಿ ಸಂಪೂರ್ಣ ಮಾಹಿತಿ ಪಡೆದಿದ್ದಾರೆ.
ನಂತರ ಮಾತನಾಡಿದ ಅವರು, ಹೊಟೇಲ್‌ಗಳಲ್ಲಿ ಅಥವಾ ಯಾವುದೇ ಪ್ರದೇಶಗಳಲ್ಲಿ ನೀರು ಕುಡಿಯಲು ಅಥವಾ ಖರೀದಿಸಲು ಬಂದ ದಲಿತರ ಮೇಲೆ ಅಸ್ಪೃಶ್ಯತೆ ಆಚರಿಸಿದರೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. ಅಸ್ಪೃಶ್ಯತೆ ತೋರುವ ಹೊಟೇಲ್‌ಗಳನ್ನು ಮುಚ್ಚಿಸಲು ಸ್ಥಳೀಯ ಪಂಚಾಯತ್ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈಗಾಗಲೇ ಗ್ರಾಮದಲ್ಲಿ 13 ಜನರ ವಿರುದ್ಧ ದೌರ್ಜನ್ಯ ಪ್ರಕರಣ ದಾಖಲಾಗಿದ್ದು, ದೌರ್ಜನ್ಯಕ್ಕೊಳಗಾದ ಕುಟುಂಬದವರಿಗೆ ಇಲಾಖೆ ವತಿಯಿಂದ ಪರಿಹಾರ ನೀಡುವುದಾಗಿ ತಿಳಿಸಿದರು.
ಅಸ್ಪೃಶ್ಯತೆ ಆಚರಣೆ ಮಾಡದಂತೆ ಕಾನೂನಿನ ಅರಿವು ಮೂಡಿಸಿದ ಸಮಾಜ ಕಲ್ಯಾಣ ಅಧಿಕಾರಿ, ಎಸ್ಪಿ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿ, ಹೊಟೇಲ್ನಲ್ಲಿ ತಾರತಮ್ಯ, ದೇವಸ್ಥಾನದೊಳಗೆ ಪ್ರವೇಶ ನಿರ್ಬಂಧಿಸುವುದೆಲ್ಲಾ ಕಾನೂನು ಅಪರಾಧ. ಯಾವುದೇ ಕಾರಣಕ್ಕೂ ಅಸ್ಪೃಶ್ಯತೆ ಆಚರಣೆ ಮಾಡಬಾರದೆಂದು ಗ್ರಾಮಸ್ಥರಿಗೆ ಕಾನೂನಿನ ಅರಿವು ಮೂಡಿಸಿದರು.
ಇದನ್ನೂ ಓದಿ:ಯಾರನ್ನೂ ಓಲೈಕೆ ಮಾಡದೇ ಎಲ್ಲರನ್ನೂ ಸಮಾನವಾಗಿ ಕಾಣಬೇಕಿದೆ: ಪೇಜಾವರ ಶ್ರೀ
ಅಲ್ಲದೇ, ದಲಿತ ಕೇರಿಗೆ ಹೋಗಿ ಅವಾಚ್ಯ ಶಬ್ದಗಳಿಂದ ನಿಂದಿಸುವುದಾಗಲಿ ಅಥವಾ ದೌರ್ಜನ್ಯ ಮಾಡುವುದಾಗಲಿ ನಡೆದಾಗ ದೌರ್ಜನ್ಯ ಎಸಗಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಹೀಗಾಗಿ ಸೌಹಾರ್ದತೆಯೊಂದಿಗೆ ಬಾಳಬೇಕು ಎಂದು ಕಿವಿಮಾತು ಹೇಳಿದರು.