ಯಾದಗಿರಿ:ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಲಿ ಎಂಬುದು ಅವರ ಅಭಿಮಾನಿಗಳ ಆಶಯವಾಗಿದೆ. ಇತ್ತು ಜಿಲ್ಲೆಯ ಜಿಲ್ಲೆಯ ವಡಗೇರಾ ತಾಲೂಕಿನ ಗೋನಾಲ ಗ್ರಾಮದಲ್ಲಿರುವ ಗಡೆ ದುರ್ಗಾದೇವಿ ಮಂದಿರದ ಅರ್ಚಕ ಮಹಾದೇವಪ್ಪ ಪೂಜಾರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಡಿಕೆಶಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಗಲೆಂದು ದುರ್ಗಾದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಅರ್ಚಕ - ಗಡೆ ದುರ್ಗಾದೇವಿ ಮಂದಿರದ ಅರ್ಚಕ ಮಹಾದೇವಪ್ಪ ಪೂಜಾರಿ
ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಗಬೇಕೆಂದು ಜಿಲ್ಲೆಯ ವಡಗೇರಾ ತಾಲೂಕಿನ ಗೋನಾಲ ಗ್ರಾಮದಲ್ಲಿರುವ ಗಡೆ ದುರ್ಗಾದೇವಿ ಮಂದಿರದ ಅರ್ಚಕ ಮಹಾದೇವಪ್ಪ ಪೂಜಾರಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ದೇವಿಯ ಸನ್ನಿಧಿಯಲ್ಲಿ ಡಿಕೆಶಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಗಬೇಕೆಂದು ಬಿಳಿಹಾಳೆ ಮೇಲೆ ಬರೆದ ಕಾಗದವನ್ನಿಟ್ಟು, ಪೂಜೆ ಮಾಡಿದ್ದಾರೆ. ಕಳೆದ ಭಾನುವಾರ ಮಹಾದೇವಪ್ಪ ಪೂಜಾರಿ ಅವರು, ಡಿಕೆಶಿ ಅವರನ್ನು ಬೆಂಗಳೂರಲ್ಲಿ ಭೇಟಿ ಆಗಿದ್ರು. ಭೇಟಿಯ ವೇಳೆ ಡಿಕೆಶಿ ಪೂಜೆ ಮಾಡಬೇಕೆಂದು ಮಹಾದೇವಪ್ಪಗೆ ಸೂಚನೆ ನೀಡಿದ್ದರಂತೆ. ಈ ಹಿನ್ನೆಲೆ ಇಂದು ಅರ್ಚಕ ದೇವಿಗೆ ವಿಶೇಷ ಪೂಜೆ ನೆರವೇರಿಸಿದ್ರು.
ಈ ಹಿಂದೆಯೂ ಕೂಡ ಸಂಕಷ್ಟದ ದಿನಗಳಲ್ಲಿ ಡಿಕೆಶಿ ಗಡೆ ದುರ್ಗಾದೇವಿ ಮೊರೆ ಹೋಗುವ ಮೂಲಕ ಅರ್ಚಕ ಮಹಾದೇವಪ್ಪ ಪೂಜಾರಿಯನ್ನ ಬೆಂಗಳೂರಿನ ತಮ್ಮ ನಿವಾಸಕ್ಕೆ ಕರೆಸಿ ಪೂಜೆ ಮಾಡಿಸಿದ್ದರು ಎಂದು ಮಹಾದೇವಪ್ಪ ಅನೇಕ ಬಾರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.