ಯಾದಗಿರಿ: ಯುಗಾದಿ ಹಬ್ಬದ ನಿಮಿತ್ತ ಈಗ ಬೆಂಗಳೂರು ನಗರ ಮೂಲಕ ವಲಸೆ ಕಾರ್ಮಿಕರು ಖಾಸಗಿ ಬಸ್ಗಳ ಮೊರೆ ಹೋಗಿದ್ದು, ಜಿಲ್ಲೆಯಲ್ಲೀಗ ಖಾಸಗಿ ಬಸ್ಗಳು ಎಂಟ್ರಿ ಕೊಡುತ್ತಿವೆ.
ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ಸಾರಿಗೆ ಬಸ್ ಸಂಚಾರ ಸ್ಥಗಿತಗೊಂಡಿದ್ದು, ದೂರದ ಊರಿಗೆ ತೆರಳಬೇಕಾದ ಪ್ರಯಾಣಿಕರು ಈಗ ಖಾಸಗಿ ಬಸ್ಗಳ ಮೊರೆ ಹೋಗುತ್ತಿದ್ದಾರೆ.
ಯಾದಗಿರಿ ಜಿಲ್ಲೆಯಿಂದ ಕೆಲಸಕ್ಕಾಗಿ ಬೆಂಗಳೂರಿಗೆ ವಲಸೆ ಹೋದ ಕಾರ್ಮಿಕರು ಈಗ ಯುಗಾದಿ ಹಬ್ಬದ ಪ್ರಯುಕ್ತ ಖಾಸಗಿ ಬಸ್ಗಳ ಮೂಲಕ ತವರಿಗೆ ವಾಪಸ್ ಆಗ್ತಿದ್ದಾರೆ.
ಹೀಗಾಗಿ ಜಿಲ್ಲೆಗೆ ಸುಮಾರು ಆರರಿಂದ ಏಳು ಖಾಸಗಿ ಬಸ್ಗಳು ಎಂಟ್ರಿ ಕೊಟ್ಟಿವೆ. ಅದಲ್ಲದೇ ಜಿಲ್ಲೆಯಲ್ಲಿ ಇಂದು ಈಶ್ಯಾನ್ಯ ಸಾರಿಗೆ ಸಂಸ್ಥೆಯ 11 ಬಸ್ಗಳ ಸಂಚಾರ ಆರಂಭಿಸಲಾಗಿದೆ.
ಯಾದಗಿರಿ ವಿಭಾಗದ ಟ್ರೈನಿ ನೌಕರನೋರ್ವನನ್ನ ವಜಾಗೊಳಿಸಿದ ಹಿನ್ನೆಲೆ ವಜಾಗೊಳ್ಳುವ ಭೀತಿ ಹಿನ್ನೆಲೆ ಇಂದು ಟ್ರೈನಿ ಸಾರಿಗೆ ನೌಕರರು ಕೆಲಸಕ್ಕೆ ಹಾಜರಾಗುತ್ತಿರುವುದರಿಂದ ನಗರದ ಕೇಂದ್ರ ಬಸ್ ನಿಲ್ದಾಣದಿಂದ ಬಸ್ ಸಂಚಾರ ಪ್ರಾರಂಭಿಸಲಾಗಿದೆ.
ಕೇಂದ್ರ ಬಸ್ ನಿಲ್ದಾಣದಿಂದ ಜಿಲ್ಲೆಯ ಗುರಮಿಠಕಲ್, ಸುರಪುರ, ಶಹಪುರ, ಸೇರಿದಂತೆ ಪಕ್ಕದ ಕಲಬುರಗಿಗೆ ತೆರಳಲು ಬಸ್ ಸಂಚಾರ ಆರಂಭಗೊಂಡಿದೆ.
ಸಾರಿಗೆ ನೌಕರರ ಮುಷ್ಕರಕ್ಕೆ ಪ್ರಯಾಣಿಕರು ತತ್ತರಿಸಿ ಹೋಗಿದ್ದು, ಕೆಲ ಬಸ್ ಸಂಚಾರ ಪ್ರಾರಂಭವಾಗಿದ್ದರಿಂದ ಪ್ರಯಾಣಿಕರಿಗೆ ಕೊಂಚ ನೆಮ್ಮದಿ ಸಿಕ್ಕಂತಾಗಿದೆ.