ಯಾದಗಿರಿ/ಸುರಪುರ: ತಾಲೂಕಿನ ಹುಣಸಗಿಯಲ್ಲಿ 3,000 ಕುಟುಂಬಗಳಿಗೆ ಶಾಸಕ ರಾಜುಗೌಡ ದಿನಸಿ ಕಿಟ್ ಹಾಗೂ 5 ಸಾವಿರ ಜನರಿಗೆ ಆಹಾರ ವಿತರಣೆ ಮಾಡಿದರು. ತಾಲೂಕಿನಲ್ಲಿರುವ ಬಡ, ನಿರ್ಗತಿಕ ಹಾಗೂ ಬೇರೆ ರಾಜ್ಯಗಳಿಂದ ಬಂದು ಲಾಕ್‌ಡೌನ್ ಘೋಷಣೆಯಿಂದ ಇಲ್ಲೇ ಉಳಿದುಕೊಂಡಿರುವ ಸುಮಾರು 3 ಸಾವಿರ ಕುಟುಂಬಗಳಿಗೆ ಟೀಂ ರಾಜುಗೌಡ ಸೇವಾ ಸಮಿತಿಯ ವತಿಯಿಂದ ಶಾಸಕ ನರಸಿಂಹ ನಾಯಕ ರಾಜುಗೌಡ ಹುಣಸಗಿ ಪಟ್ಟಣದಲ್ಲಿ ದಿನಸಿ ಕಿಟ್‌ಗಳನ್ನು ವಿತರಿಸಿದರು.
ಅಕ್ಕಿ, ಗೋಧಿ, ಜೋಳ ಮತ್ತಿತರೆ ದವಸ ಧಾನ್ಯಗಳನ್ನೊಳಗೊಂಡ ಸಾಮಗ್ರಿಗಳ ಕಿಟ್‌ಗಳನ್ನು ಹುಣಸಗಿಯ ಕಲ್ಯಾಣ ಮಂಟಪವೊಂದರಲ್ಲಿ ಸಂಗ್ರಹಿಸಿ ಜನರಿಗೆ ವಿತರಿಸಿದರು.