ಯಾದಗಿರಿ:ಚಲಿಸುತ್ತಿದ್ದ ಆಟೋದಲ್ಲೇ ಗರ್ಭಿಣಿವೋರ್ವಳು ಮಗುವಿಗೆ ಜನ್ಮ ನೀಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ನೋವಿನಿಂದ ಬಳಲುತ್ತಿದ್ದರೂ ಮರುಗದ ವೈದ್ಯರು: ಚಲಿಸುತ್ತಿದ್ದ ಆಟೋದಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ! - ಆಟೋದಲ್ಲಿ ಹೆಣ್ಣು ಮಗು ಜನನ
ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರ ನಿರ್ಲಕ್ಷ್ಯದಿಂದಾಗಿ ಚಲಿಸುತ್ತಿದ್ದ ಆಟೋದಲ್ಲೇ ಮಹಿಳೆವೋರ್ವಳು ಮಗುವಿಗೆ ಜನ್ಮ ನೀಡಿರುವ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.
ತಾಲೂಕಿನ ಮುದ್ನಾಳ ಗ್ರಾಮದ ನಿವಾಸಿ ದೇವಿಬಾಯಿ ಚಲಿಸುತ್ತಿದ್ದ ಅಟೋದಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ. ದೇವಿಬಾಯಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಮುದ್ನಾಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಆದರೆ, ಸೂಕ್ತ ದಾಖಲಾತಿಗಳಿಲ್ಲದ ಕಾರಣ ಆಸ್ಪತ್ರೆಯ ಸಿಬ್ಬಂದಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ದೇವಿಬಾಯಿಯನ್ನ ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲು ನೀರಾಕರಿಸಿದ್ದಾರೆ.
ನಂತರ ಯಾದಗಿರಿ ಜಿಲ್ಲಾಸ್ಪತ್ರೆಗೆ ತೆರಳುತ್ತಿರುವಾಗ ಜಿಲ್ಲಾಸ್ಪತ್ರೆಯ ಸಮೀಪ ದೇವಿಬಾಯಿಗೆ ಹೆರಿಗೆ ಆಗಿದ್ದು, ಅಟೋದಲ್ಲಿದ್ದ ಆಕೆಯ ನಾದಿನಿ ಅನೂಸುಯಾ ಹೆರಿಗೆಗೆ ನೆರವಾಗಿದ್ದಾರೆ. ಸದ್ಯ ತಾಯಿ, ಮಗು ಆರೋಗ್ಯವಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.