ಕರ್ನಾಟಕ

karnataka

ETV Bharat / state

ಬುದ್ಧನು ಮೌನ ಮತ್ತು ಧ್ಯಾನದಿಂದ ಜಗತ್ತನ್ನು ಗೆದ್ದ ದಾರ್ಶನಿಕ: ಹೊಸಮನಿ - ಕೆಂಭಾವಿ ಬುದ್ಧ ವಿಹಾರ

ಕೆಂಭಾವಿ ಬುದ್ಧ ವಿಹಾರದಲ್ಲಿ ಧಮ್ಮ‌ ಚಕ್ರ‌ ಪ್ರವರ್ತನ ದಿನ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬುದ್ಧ ವಿಹಾರ ಟ್ರಸ್ಟ್ ಅಧ್ಯಕ್ಷ ಲಾಲಪ್ಪ ಹೊಸಮನಿ ಮಾತನಾಡಿ, ಬುದ್ಧ ತನ್ನ ಮೌನ ಹಾಗೂ ಧ್ಯಾನದ ಗುಣದಿಂದಲೇ ಜಗತ್ತನ್ನು ಗೆದ್ದ ದಾರ್ಶನಿಕ. ಧಮ್ಮ ಚಕ್ಕ ಪವತ್ತನ ದಿನ ನಮ್ಮೆಲ್ಲರಿಗೂ ಪವಿತ್ರ ದಿನ ಎಂದು ಹೇಳಿದರು.

Dhamma chakka pavatta day
Dhamma chakka pavatta day

By

Published : Jul 5, 2020, 5:14 PM IST

ಸುರಪುರ:ತಾಲೂಕಿನ ಕೆಂಭಾವಿ ಬುದ್ಧ ವಿಹಾರದಲ್ಲಿ ಧಮ್ಮ‌ ಚಕ್ರ ಪ್ರವರ್ತನ ದಿನ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬುದ್ಧ ವಿಹಾರ ಟ್ರಸ್ಟ್ ಅಧ್ಯಕ್ಷ ಲಾಲಪ್ಪ ಹೊಸಮನಿ ಮಾತನಾಡಿ, ಬುದ್ಧ ತನ್ನ ಮೌನ ಹಾಗೂ ಧ್ಯಾನದ ಗುಣದಿಂದಲೇ ಜಗತ್ತನ್ನು ಗೆದ್ದ ದಾರ್ಶನಿಕ. ಧಮ್ಮ ಚಕ್ರ ಪ್ರವರ್ತನ ದಿನ ನಮ್ಮೆಲ್ಲರಿಗೂ ಪವಿತ್ರವಾದುದು ಎಂದು ಹೇಳಿದರು.

ಭಗವಾನ್‌ ಬುದ್ಧರು ಜ್ಞಾನವನ್ನು ಪಡೆದು, ತಾನು ಕಂಡ ಆರ್ಯ ಸತ್ಯಗಳನ್ನು ಲೋಕಕ್ಕೆ ತಿಳಿಸಿದರು. ಅಂದು ಬೋಧಿಸಿ ಪ್ರಾರಂಭವಾದ ಧಮ್ಮ ಚಕ್ರವು ಇಂದಿಗೂ ಬುದ್ಧನ ಅನುಯಾಯಿಗಳಿಂದ ಉರುಳುತ್ತಿದೆ. ಬುದ್ಧನ ಚಿಂತನೆಗಳಲ್ಲಿರುವ ತಾಯಿ ಗುಣ ಬದುಕಿಗೆ ಆತ್ಮೀಯತೆ ತಂದು ಕೊಡುವ ಶಕ್ತಿ ಹೊಂದಿದೆ. ಬುದ್ಧ ಸುತ್ತಲಿನ ಜನರು, ಶಿಷ್ಯರನ್ನು ನೋಡುತ್ತಲೇ ತನ್ನ ಚಿಂತನೆ ರೂಪಿಸಿಕೊಂಡವರು. ನಗು ಮತ್ತು ಮೌನದಿಂದ ಎಲ್ಲಾ ವಿರೋಧಗಳನ್ನು ಗೆದ್ದ ಬುದ್ಧನ ಚಿಂತನೆಗಳಲ್ಲಿ ಪರಸ್ಪರ ಪ್ರೀತಿಸುವ, ಗೌರವಿಸುವ ಗುಣ ಇದೆ. ಈ ಚಿಂತನೆಗಳ ಬೆಳಕಲ್ಲಿ ನಮ್ಮ ವೈಚಾರಿಕ ಶಕ್ತಿ ಬೆಳೆಸಿಕೊಳ್ಳಬೇಕು ಎಂದರು.

ಹಿರಿಯ ದಲಿತ ಮುಖಂಡ ಭೀಮರಾಯ ಸಿಂದಗೇರಿ ಮಾತನಾಡಿ, ಬಹಳಷ್ಟು ಜನರಿಗೆ ಬುದ್ಧನ ಧ್ಯೇಯ, ಧಾರ್ಮಿಕ ಚಿಂತನೆಗಳ ಪ್ರಾಥಮಿಕ ತಿಳುವಳಿಕೆ ಇಲ್ಲ. ಬುದ್ಧ ಎಲ್ಲೂ ತನ್ನ ಚಿಂತನೆಗಳನ್ನು ನನ್ನದು ಎಂದು ಹೇಳಿಕೊಳ್ಳಲಿಲ್ಲ. ಬೌದ್ಧ ಧರ್ಮ ಇಲ್ಲಿಯೇ ಹುಟ್ಟಿದ ಪ್ರಾಚೀನ ಧರ್ಮವಾಗಿದ್ದರೂ ವಿದೇಶಗಳಲ್ಲಿ ಹೆಮ್ಮರವಾಗಿ ಬೆಳೆದಿದೆ. ನಮ್ಮ ನಡಿಗೆ ಬುದ್ಧನೆಡೆಗೆ ಎಂದು ಯೋಚಿಸಿ ದೈನಂದಿನ ಆಗು ಹೋಗುಗಳಲ್ಲಿ ಬುದ್ಧನ ಚಿಂತನೆ ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಬುದ್ಧನ ಮೂರ್ತಿಗೆ ಪೂಜೆ ಸಲ್ಲಿಸಿ ಪಂಚ ಶೀಲ ಪಠಣ ನಡೆಸಲಾಯಿತು.

ABOUT THE AUTHOR

...view details